ಬೆಂಗಳೂರು: ರಾಜ್ಯ ಕಾಂಗ್ರೆಸ್ ( congress ) ವಿರುದ್ಧ ತನ್ನದೇ ಶಾಸಕರು ತಿರುಗಿಬಿದ್ದು ಭ್ರಷ್ಟಾಚಾರದಂತಹ ಗಂಭೀರ ಆರೋಪ ಮಾಡಿದ್ದು ಮುಜುಗರಕ್ಕೀಡುಮಾಡಿದೆ. ಬಿಆರ್ ಪಾಟೀಲ್ ಹಾಗೂ ರಾಜು ಕಾಗೆ ಹೇಳಿಕೆಗಳು ಸದ್ಯ ವಿರೋಧ ಪಕ್ಷಗಳಿಗೆ ಆಹಾರವಾಗಿದೆ. ಇದರ ಬೆನ್ನಲ್ಲೇ ಇದೀಗ ಸಹಕಾರ ಸಚಿವ ಕೆಎನ್ ರಾಜಣ್ಣ ಮಾರ್ಮಿಕ ಹೇಳಿಕೆಯೊಂದನ್ನು ನೀಡಿ ಮತ್ತೆ ಆಂತರಿಕ ಭಿನ್ನಮತವಿರುವ ಸುಳಿವು ಕೊಟ್ಟಿದ್ದಾರೆ.
ಶಾಸಕ ರಾಜು ಕಾಗೆ ಅವರು ಮುಂದೆ ಇದ್ದ ಸಿದ್ದರಾಮಯ್ಯ ಈಗಿಲ್ಲ, ಈಗ ಅವರ ಮನಸ್ಥಿತಿ ಯಾಕೆ ಬದಲಾಯಿತೋ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರ ಕುರಿತು ಪ್ರತಿಕ್ರಿಯಿಸಿದ ಕೆಎನ್ ರಾಜಣ್ಣ ʼಈಗ ಕಾಂಗ್ರೆಸ್‌ನಲ್ಲಿ ಪವರ್ ಸೆಂಟರ್‌ಗಳು ಜಾಸ್ತಿ ಇವೆ. ಮೊದಲು 2013ರಿಂದ 2018ರ ತನಕ ಪವರ್ ಸೆಂಟರ್ ಒಂದೇ ಇದ್ದದ್ದು. ಈಗ ಪವರ್ ಸೆಂಟರ್‌ಗಳು ಜಾಸ್ತಿಯಾಗಿವೆ. 1,2,3,4.. ಎಷ್ಟಾದರೂ ಹೇಳಿಕೊಳ್ಳಬಹುದು ನೀವು. ಪವರ್ ಸೆಂಟರ್‌ಗಳು ಜಾಸ್ತಿ ಇದ್ದಾಗ ಜಂಜಾಟಗಳೂ ಜಾಸ್ತಿಯಾಗುತ್ತವೆ. ಆ ಪರಿಸ್ಥಿತಿಗೆ ಅನುಗುಣವಾಗಿ ಅವರು ಸರ್ಕಾರವನ್ನು, ಪಕ್ಷವನ್ನು ನಡೆಸಬೇಕಾಗುತ್ತೆʼ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದ ಅವರು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದರು.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಪತ್ನಿ ಜೊತೆ ಕಬಿನಿ ಡ್ಯಾಂನಲ್ಲಿ ಶಿವಣ್ಣ ರೌಂಡ್ಸ್; ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


