ಪ್ರತಿಯೊಬ್ಬರ ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಮಾಡುವ ಮೂಲಕ ಮಹಿಳೆ ಮತ್ತು ಮಕ್ಕಳ ರಕ್ಷಣೆ ಜೊತೆ ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಉಚಿತ ಶೌಚಾಲಯ ಯೋಜನೆ ಜಾರಿಗೆ ತಂದಿದೆ. ಸ್ವಚ್ಛ ಭಾರತ್ಮಿಷನ್ ನ ಮತ್ತಷ್ಟು ಬಲ ನೀಡಲು ಕೇಂದ್ರ ಸರ್ಕಾರ ಉಚಿತ ಶೌಚಾಲಯ ಯೋಜನೆ 3.0 ಅನ್ನು ಈಗ ಪ್ರಾರಂಭಿಸಿದೆ.
ಈ ಯೋಜನೆಯಡಿ, ಬಡ ಮತ್ತು ನಿರ್ಗತಿಕ ಕುಟುಂಬಗಳು, ಶೌಚಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳಿಗೆ 12,000 ರೂಪಾಯಿ ಆರ್ಥಿಕ ಸಹಾಯ ಸಿಗಲಿದೆ. https://swachhbharatmission.ddws.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡ್ಬೇಕು. ಅಲ್ಲಿ ಕೆಳಗೆ Application Form For IHHL Dashboard ಕಾಣಿಸುತ್ತದೆ. ಅಲ್ಲಿಗೆ ಹೋಗಿ ನೀವು ರಿಜಿಸ್ಟ್ರೇಷನ್ ಮಾಡ್ಬೇಕು. ರಿಜಿಸ್ಟ್ರೇಷನ್ ಆದ್ಮೇಲೆ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದ್ರ ನಂತ್ರ ನೀವು ಸೈನ್ ಇನ್ ಮಾಡಿ, ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಈ ಯೋಜನೆ ಲಾಭ ಪಡೆಯಲು ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರು ಹಿಂದೆ ಯಾವುದೇ ಶೌಚಾಲಯವನ್ನು ಹೊಂದಿರಬಾರದು. ಈ ಯೋಜನೆ ಪ್ರಯೋಜನ ಪಡೆಯಲು ಮಹಿಳೆ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಕಡಿಮೆಯಿರಬೇಕು. ಮಹಿಳೆ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ನಿಮ್ಮ ಅಪ್ಲಿಕೇಷನ್ ಮಾನ್ಯವಾದ್ರೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಪರಿಶೀಲನೆ ನಡೆಸ್ತಾರೆ. ನಿಮ್ಮ ಮನೆಯಲ್ಲಿ ಮೊದಲೇ ಶೌಚಾಲಯ ಇಲ್ಲ ಎನ್ನುವುದು ಖಾತ್ರಿಯಾದ್ಮೇಲೆ ಮಹಿಳೆಯರ ಬ್ಯಾಂಕ್ ಖಾತೆಗೆ 12 ಸಾವಿರ ರೂಪಾಯಿ ಬರುತ್ತದೆ. ಆ ನಂತ್ರ ನೀವು ಶೌಚಾಲಯ ನಿರ್ಮಾಣದ ಫೋಟೋಗಳನ್ನು ಅವರಿಗೆ ಕಳುಹಿಸುತ್ತಿರಬೇಕು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


