ದಕ್ಷಿಣ ಕನ್ನಡ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಗಿರೀಶ್ ಮಟ್ಟೆಣ್ಣವರ್‌ಗೆ ಸದ್ಯ ಹೊಸದೊಂದು ಸಂಕಷ್ಟ ಎದುರಾಗಿದೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡ್ಲ ರಾಂಪೇಜ್ ಯುಟ್ಯೂಬ್ ಚಾನೆಲ್‌ನ ಸಂದರ್ಶವೊಂದರಲ್ಲಿ ಗಿರೀಶ್ ಮಟ್ಟೆಣ್ಣವರ್ ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ ಧಾರವಾಡದಲ್ಲಿ ದಾಖಲಾಗಿದ್ದ ದೂರು ಇದೀಗ ಬೆಳ್ತಂಗಡಿ ಠಾಣೆಗೆ ವರ್ಗಾವಣೆಯಾಗಿದೆ.
ದೂರು ನೀಡಿರುವ ಮಂಜುನಾಥ್ ಎಂಬುವರು ಮಟ್ಟೆಣ್ಣವರ್ ಜೈನ ಧರ್ಮದವರನ್ನು ಕ್ರೂರಿಗಳು, ಮತಾಂತರಿಗಳು ಎಂದಿದ್ದಾರೆ. ಅಲ್ಲದೇ ಬಾಹುಬಲಿ ಪ್ರತಿಮೆ ಕೆತ್ತಿದವರ ಕೈಗಳನ್ನು ಜೈನ ರಾಜರು ಅಂತಹ ಕ್ರೂರಿಗಳು ಎಂದು ಹೇಳಿದ್ದಾರೆ. ತಮ್ಮ ಧರ್ಮ ಅಂತಹ ಧರ್ಮ ಅಲ್ಲ, ಅಹಿಂಸೆ ಪಾಲಿಸುವ ಧರ್ಮ ಎಂದಿರುವ ಮಂಜುನಾಥ್ ಈ ಕಾರಣದಿಂದ ದೂರು ನೀಡಿದ್ದೇನೆ ಎಂದಿದ್ದಾರೆ.
ಎಸ್‌ಐಟಿ ಶೋಧದ ವೇಳೆ ಮನೆಯಲ್ಲಿ ಇರಲಿಲ್ಲ ಮಹೇಶ್ ಶೆಟ್ಟಿ ತಿಮರೋಡಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


