ಪ್ರತಿಯೊಂದು ಧರ್ಮದಲ್ಲಿ ಕೆಲವೊಂದು ನಿಯಮಗಳಿರುತ್ತವೆ. ಆಯಾ ಧರ್ಮದವರು ತಮ್ಮ ಧಾರ್ಮಿಕ ನಿಯಮಗಳನ್ನು ಅನುಸರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಕೆಲವು ಆಹಾರ, ಪಾನೀಯ ಮತ್ತು ಚಟುವಟಿಕೆಗಳನ್ನು ಹರಾಮ್ ಎಂದು ಪರಿಗಣಿಸಲಾಗಿದೆ.
ಇಸ್ಲಾಂನಲ್ಲಿ ಕೆಲವೊಂದು ಆಹಾರ ಮತ್ತು ಪಾನೀಯಗಳ ಮೇಲೆ ನಿಷೇಧ ವಿಧಿಸಲಾಗಿದೆ. ಹಂದಿ ಮಾಂಸದ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ಹಾಗೆಯೇ ಇಸ್ಲಾಂನಲ್ಲಿ ಅಪಘಾತ ಅಥವಾ ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಾಣಿಗಳ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ.
ಅಲ್ಲಾಹನಲ್ಲದೆ ಇತರರ ಹೆಸರಿನಲ್ಲಿ ವಧೆ ಮಾಡಲಾದ ಪ್ರಾಣಿಗಳ ಮಾಂಸ ಸೇವನೆಯನ್ನು( ಹಲಾಲ್ ಮಾಡದೇ ಮಾಂಸ) ಸಹ ನಿಷೇಧಿಸಲಾಗಿದೆ. ಇಸ್ಲಾಂನಲ್ಲಿ ಮದ್ಯಪಾನ ಮಾಡುವುದು ನಿಷಿದ್ಧವಾಗಿದೆ. ಅಂದ್ರೆ ನಶೆ ಅಥವಾ ಅಮಲು ಉಂಟು ಮಾಡುವ ಪದಾರ್ಥಗಳನ್ನು ಇಸ್ಲಾಂನಲ್ಲಿ ನಿಷೇಧ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಮುಸ್ಲಿಂ ಸಮುದಾಯದ ಜನರು ನಿಷೇಧಿತ ಕೆಲಸ ಮಾಡಲಾರು ಮತ್ತು ನಿಷೇಧಿತ ಆಹಾರಗಳನ್ನು ಸೇವಿಸಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


