Friday, November 6, 2026
spot_img
More
    spot_img
    HomeLatest newsಮದರಸಾದ ಶೌಚಾಲಯದಲ್ಲಿ 40 ಬಾಲಕಿಯರು ಲಾಕ್

    ಮದರಸಾದ ಶೌಚಾಲಯದಲ್ಲಿ 40 ಬಾಲಕಿಯರು ಲಾಕ್

    ಲಖನೌ: ಉತ್ತರ ಪ್ರದೇಶದ ಪಯಾಗುರ ತಹಸೀಲ್ ವ್ಯಾಪ್ತಿಯ ಪಹಲ್ವಾರಾ ಗ್ರಾಮದ ಅಕ್ರಮ ಮದರಸಾದ ಶೌಚಗೃಹದಲ್ಲಿ 40 ಬಾಲಕಿಯರನ್ನು ಕೂಡಿ ಹಾಕಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    ಮೂರು ಮಹಡಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾದ ಪರಿಶೀಲನೆಗೆ ಬುಧವಾರ ಅಧಿಕಾರಿಗಳು ತೆರಳಿದ್ದಾಗ ಅಲ್ಲಿನ ಅಕ್ರಮ ಬಯಲಾಗಿದೆ ಎಂದು ಪಯಾಗ್ವುರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಪಾಂಡೆ ತಿಳಿಸಿದ್ದಾರೆ. ಬುಧವಾರ ಅಲ್ಲಿಗೆ ತೆರಳಿದ್ದಾಗ ಮೇಲಿನ ಮಹಡಿಗಳಿಗೆ ತೆರಳಲು ಮದರಸಾ ನಿರ್ವಾಹಕರು ಅವಕಾಶ ನೀಡಲಿಲ್ಲ.

    ಪೊಲೀಸರ ಸಮ್ಮುಖದಲ್ಲಿ ಆವರಣವನ್ನು ಪ್ರವೇಶಿಸಿದಾಗ ಟೆರೇಸ್‌ನಲ್ಲಿರುವ ಶೌಚಗೃಹವೊಂದರ ಬೀಗ ಹಾಕಿರುವುದು ಗಮನಕ್ಕೆ ಬಂತು. ಮಹಿಳಾ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಬಾಗಿಲನ್ನು ತೆರೆದಾಗ ಶೌಚಗೃಹದಲ್ಲಿ 9ರಿಂದ 14 ವಯಸ್ಸಿನ 40 ಮಕ್ಕಳು ಬಚ್ಚಿಟ್ಟು ಕೊಂಡಿದ್ದು ತಿಳಿಯಿತು.

    ‌ನಾಳೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಬಳಿ ಎಸ್.ಎಲ್ ಭೈರಪ್ಪ ಅಂತ್ಯಕ್ರಿಯ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search