ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಎಂಬಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ನ ಎಸಿ ಸ್ಲೀಪರ್ ಬಸ್ ಅಕ್ಟೋಬರ್ 24ರ ಬೆಳಗಿನ ಜಾವ 3 ಗಂಟೆ ಸಮಯಕ್ಕೆ ಬೆಂಕಿಗಾಹುತಿಯಾಗಿತ್ತು.
ಬೈಕ್‌ಗೆ ಡಿಕ್ಕಿಯಾದ ಬಸ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆ ಇಡೀ ಬಸ್ ಸುಟ್ಟು ಕರಕಲಾಗಿತ್ತು. ಪರಿಣಾಮ 20 ಮಂದಿ ಸಜೀವ ದಹನವಾಗಿದ್ದರು.
ಇನ್ನು ಬಸ್‌ನಲ್ಲಿ ಡ್ರೈವರ್ ಹಾಗೂ ಕ್ಲೀನರ್ ಸೇರಿ ಒಟ್ಟು 42 ಮಂದಿ ಪ್ರಯಾಣ ಮಾಡುತ್ತಿದ್ದು, ಈ ಪೈಕಿ 12 ಜನರು ಸ್ಥಳದಲ್ಲೇ ಸುರಕ್ಷಿತರಾಗಿ ಬಸ್‌ನಿಂದ ಪಾರಾಗಿದ್ದರು.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್‌ನ ಡ್ರೈವರ್‌ಗಳು ಬಸ್ ಬಿಟ್ಟು ಪರಾರಿಯಾಗಿದ್ದು, ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಬಸ್ ಹಿಂದೆ ಪ್ರಯಾಣ ಮಾಡುತ್ತಿದ್ದ ಹರೀಶ್ ಎಂಬವರು ಕಾಪಾಡಿದ್ದಾರೆ.
ಹೌದು, ಹೈದರಾಬಾದ್‌ನ ಮಾದಾಪುರದಿಂದ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ ಹರೀಶ್ ತನ್ನಿಂದ 500 ಮೀಟರ್ ದೂರದಲ್ಲಿದ್ದ ಬಸ್‌ನಿಂದ ಹೊಗೆ ಬರುತ್ತಿದ್ದನ್ನು ಗಮನಿಸಿ ಅಪಘಾತ ಸಂಭವಿಸಿರುವುದು ಖಾತರಿಯಾಗುತ್ತಿದ್ದಂತೆ ಕಾರು ನಿಲ್ಲಿಸಿ ಕೂಡಲೇ ಬಸ್ ಸಮೀಪ ತೆರಳಿದ್ದಾರೆ.
ಹೀಗೆ ಹೊತ್ತಿ ಉರಿಯುತ್ತಿದ್ದ ಬಸ್ ಬಳಿ ಬಂದ ಹರೀಶ್‌ಗೆ ಡ್ರೈವರ್‌ಗಳು ಬಸ್ ಬಿಟ್ಟು ಕಾಲ್ಕಿತ್ತಿರುವುದು ತಿಳಿದುಬಂದಿದೆ. ಕೂಡಲೇ ಬಾಗಿಲುಗಳನ್ನು ತೆರೆಯಲು ಹರೀಶ್ ಯತ್ನಿಸಿದ್ದು, ಸಾಧ್ಯವಾಗದೇ ಇದ್ದಾಗ ಪಕ್ಕದಲ್ಲಿದ್ದ ದಪ್ಪ ಕಲ್ಲನ್ನು ತೆಗೆದುಕೊಂಡು ಡ್ರೈವರ್‌ನ ಹಿಂಭಾಗದ ಕಿಟಕಿಗೆ ಹೊಡೆದಿದ್ದಾರೆ. ಹೀಗೆ ಕಲ್ಲಿನಿಂದ ಒಡೆದ ಕೂಡಲೇ ಕಿಟಕಿ ಗಾಜು ಬಿರುಕು ಬಿಟ್ಟಿದೆ. ಇದೇ ಸಮಯಕ್ಕೆ ಆ ಸೀಟಿನಲ್ಲಿದ್ದ ಪ್ರಯಾಣಿಕ ಜಯಸೂರ್ಯ ಎಂಬಾತ ಆ ಬದಿಯಿಂದ ಕಿಟಕಿಯನ್ನು ಒಡೆದಿದ್ದು, ಒಟ್ಟು 10 ಪ್ರಯಾಣಿಕರು ಈ ಕಿಟಕಿ ಮೂಲಕ ಬಸ್‌ನಿಂದ ಹೊರಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ.
ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯ ಪ್ರಕಟ: ಭಾರತದ ಎದುರಾಳಿ ಕಂಡು ಖತಂ, ಟಾಟಾ, ಗುಡ್‌ಬೈ ಎಂದ ನೆಟ್ಟಿಗರು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


