ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯಾವ ತಂಡಗಳು ಬಲಿಷ್ಠ, ಯಾವ ತಂಡಗಳಲ್ಲಿ ಯಾವ ಆಟಗಾರರಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.
ಹರಾಜಿನ ಬಳಿಕ ಬಲಿಷ್ಠ ಎನಿಸಿಕೊಂಡ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಸಹ ಒಂದಾಗಿದ್ದು, ರುತುರಾಜ್ ಗಾಯಕ್ವಾಡ್, ಮತೀಶ ಪತಿರಾಣಾ, ಶಿವಮ್ ದುಬೆ, ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿಯನ್ನು ಉಳಿಸಿಕೊಂಡಿದ್ದ ರಿಟೈನ್ ಮಾಡಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನ ಬಳಿಕ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರು: ಡೆವೊನ್ ಕಾನ್ವೇ – 6.25 ಕೋಟಿ ರೂ, ರಾಹುಲ್ ತ್ರಿಪಾಠಿ – 3.4 ಕೋಟಿ ರೂ, ರಚಿನ್ ರವೀಂದ್ರ – 4 ಕೋಟಿ ರೂ, ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ, ಖಲೀಲ್ ಅಹಮದ್ – 4.80 ಕೋಟಿ ರೂ, ನೂರ್ ಅಹಮದ್ – 10 ಕೋಟಿ ರೂ, ವಿಜಯ್ ಶಂಕರ್ – 1.2 ಕೋಟಿ ರೂ, ಸ್ಯಾಮ್ ಕರ್ರಾನ್ – 2.4 ಕೋಟಿ ರೂ, ಶೇಕ್ ರಶೀದ್ – 30 ಲಕ್ಷ ರೂ, ಅಂಶುಲ್ ಕಾಂಬೋಜ್ – 3.4 ಕೋಟಿ ರೂ, ಮುಖೇಶ್ ಚೌಧರಿ – 30 ಲಕ್ಷ ರೂ, ದೀಪಕ್ ಹೂಡಾ – 1.7 ಕೋಟಿ ರೂ, ಗುರ್ಜನ್‌ಪ್ರೀತ್ ಸಿಂಗ್ – 2.2 ಕೋಟಿ ರೂ, ನಾಥನ್ ಎಲ್ಲಿಸ್ – 2 ಕೋಟಿ ರೂ, ಜೇಮಿ ಓವರ್ಟನ್ – 1.5 ಕೋಟಿ ರೂ, ಕಮಲೇಶ್ ನಾಗರಕೋಟಿ – 30 ಲಕ್ಷ ರೂ, ರಾಮಕೃಷ್ಣ ಘೋಷ್ – 30 ಲಕ್ಷ ರೂ, ಶ್ರೇಯಸ್ ಗೋಪಾಲ್ – 30 ಲಕ್ಷ ರೂ, ವಂಶ್ ಬೇಡಿ – 55 ಲಕ್ಷ ರೂ ಮತ್ತು ಆಂಡ್ರೆ ಸಿದ್ಧಾರ್ಥ್ – 30 ಲಕ್ಷ ರೂ.
ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ: ರುತುರಾಜ್ ಗಾಯಕ್ವಾಡ್, ಮಥೀಶ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


