Monday, August 3, 2026
spot_img
More
    spot_img
    HomeLatest newsಡಿಕೆಶಿಯವರನ್ನು ಬಿಟ್ಟು ಇನ್ಯಾರನ್ನು ಸಿಎಂ ಮಾಡ್ತೀರ?; ಡಿಕೆ ಪರ ಬ್ಯಾಟ್‌ ಬೀಸಿದ ಕಾಂಗ್ರೆಸ್‌ ಶಾಸಕ

    ಡಿಕೆಶಿಯವರನ್ನು ಬಿಟ್ಟು ಇನ್ಯಾರನ್ನು ಸಿಎಂ ಮಾಡ್ತೀರ?; ಡಿಕೆ ಪರ ಬ್ಯಾಟ್‌ ಬೀಸಿದ ಕಾಂಗ್ರೆಸ್‌ ಶಾಸಕ

    ಬೆಂಗಳೂರು: ಕಾಂಗ್ರೆಸ್‍ನ 136 ಮಂದಿ ಶಾಸಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಪ್ರತಿಪಾದಿಸಿದ್ದಾರೆ.

    Advertisement

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ವಿಚಾರದಲ್ಲಿ ಸಂಖ್ಯಾ ಬಲವನ್ನು ಲೆಕ್ಕ ಹಾಕುವುದು ಸರಿಯಲ್ಲ. ಎಲ್ಲಾ ಶಾಸಕರು ಅವರ ಬೆಂಬಲಕ್ಕೆ ಇದ್ದೇವೆ. ಪಕ್ಷ ಮತ್ತಷ್ಟು ಬಲಿಷ್ಠವಾಗಬೇಕು, 2028ಕ್ಕೆ ಮರಳಿ ಅಧಿಕಾರಕ್ಕೆ ಬರಬೇಕು, ಇನ್ನಷ್ಟು ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಬೇಕು ಎಂಬ ಅಭಿಲಾಷೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಎಲ್ಲಾ ಶಾಸಕರ ಒತ್ತಾಯವಾಗಿದೆ ಎಂದರು.

    ನಾವೆಲ್ಲಾ ಕಾಂಗ್ರೆಸ್‍ನ ಶಾಸಕರು. ಭಿನ್ನಮತ ಅಥವಾ ಬಂಡಾಯ ಇಲ್ಲ. ನಾವ್ಯಾರೂ ಬೇರೆ ಪಕ್ಷದವರು ಅಲ್ಲ. 2028ರ ಚುನಾವಣೆಯಲ್ಲಿ ಗೆಲ್ಲಲು ಡಿ.ಕೆ. ಶಿವಕುಮಾರ್ ಅನಿವಾರ್ಯ, ಸಿದ್ದರಾಮಯ್ಯ ಅವರು ಕೂಡ ಬೇಕು. ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಅವರ ತ್ಯಾಗ, ಸಂಘಟನಾ ಚತುರತೆ ಮುಖ್ಯವಾಗಿದೆ ಎಂದರು.

    40 ವರ್ಷಗಳ ಕಾಲ ಒಂದೇ ಪಕ್ಷದಲ್ಲಿದ್ದು ಹೋರಾಟ ನಡೆಸಿದ್ದಾರೆ. ಅವರನ್ನು ಬಿಟ್ಟು ಮತ್ಯಾರನ್ನು ಮುಖ್ಯಮಂತ್ರಿ ಮಾಡುವ ಇರಾದೆ ಇದೆ ಎಂದು ಪ್ರಶ್ನಿಸಿದರು.

    ರಾಜಕಾರಣದಲ್ಲಿ ಹಿತೈಷಿಗಳು, ವಿರೋಧಿಗಳು ಸಾಮಾನ್ಯ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬಾರದು ಎಂದು ತಡೆಯುವ ಪ್ರಯತ್ನಗಳು ನಡೆದಿವೆ. ಅವರ ಪರವಾಗಿ, ಇವರ ಪರವಾಗಿ ಮಾತನಾಡುವವರು ರಾಜಕಾರಣದಲ್ಲಿರುವುದು ಸಹಜ ಎಂದರು.

    ನಾವು ಶುದ್ಧ ಮನಸ್ಸಿನಿಂದ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ನಮಲ್ಲಿ ತೆರೆ-ಮರೆ ಏನೂ ಇಲ್ಲ, ಮುಚ್ಚುಮರೆಯೂ ಇಲ್ಲ. ಡಿ.ಕೆ.ಶಿವಕುಮಾರ್ ಪರವಾಗಿ ನಿಂತಿದ್ದೇವೆ. ನಮಂತೆ ಹಲವು ಶಾಸಕರು, ಸಚಿವರು ಬೆಂಬಲಕ್ಕೆ ಇದ್ದಾರೆ. ದೇವರ ಆಶೀರ್ವಾದ ಕೂಡ ಇದೆ ಎಂದರು.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದಷ್ಟು ಬೇಗ ಇದಕ್ಕೆ ತೆರೆ ಎಳೆಯುತ್ತಾರೆ ಎಂಬ ನಂಬಿಕೆ ನಮೆಲ್ಲರಲ್ಲೂ ಇದೆ ಎಂದಿದ್ದಾರೆ.

    ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದ ಪತ್ನಿ; ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading