ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 408 ರನ್‌ಗಳ ಹೀನಾಯ ಸೋಲನ್ನು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಈ ಮೂಲಕ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ 25 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ದಾಖಲೆ ಬರೆಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಮುತುಸ್ವಾಮಿ ಶತಕ ಹಾಗೂ ಮಾರ್ಕೊ ಯಾನ್‌ಸೆನ್ 93 ರನ್‌ಗಳ ಕೊಡುಗೆಯಿಂದ 489 ರನ್ ಕಲೆಹಾಕಿತು. ಬ್ಯಾಟಿಂಗ್‌ನಲ್ಲಿ ಭಾರತವನ್ನು ಕಾಡಿದ ಯಾನ್ಸೆನ್ ಬೌಲಿಂಗ್‌ನಲ್ಲೂ ಸಹ 6 ವಿಕೆಟ್‌ಗಳನ್ನು ಪಡೆದು ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಕಟ್ಟಿಹಾಕಿದರು. ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ ಫಾಲೊಆನ್ ಲಭ್ಯವಿದ್ದರೂ ಅದನ್ನು ವಿಧಿಸದೇ ತಾನೇ ಎರಡನೇ ಇನ್ನಿಂಗ್ಸ್ ಆರಂಭಿಸಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ 94 ರನ್‌ಗಳ ಕೊಡುಗೆಯ ಸಹಾಯದಿಂದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿ ಭಾರತಕ್ಕೆ 549 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ಮೊದಲ ಇನ್ನಿಂಗ್ಸ್‌ಗಿಂತಲೂ ಹೀನಾಯ ಪ್ರದರ್ಶನ ನೀಡಿದ ಭಾರತ 140 ರನ್‌ಗಳಿಗೆ ಆಲ್‌ಔಟ್ ಆಯಿತು.
ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮುತುಸ್ವಾಮಿ ಶತಕ ಬಾರಿಸಿದ್ದು ಬಿಟ್ಟರೆ ಇತ್ತಂಡಗಳ ಇನ್ಯಾವ ಆಟಗಾರನೂ ಸಹ ಶತಕ ಬಾರಿಸಲಿಲ್ಲ. ಭಾರತದ ಪರ ಎಲ್ಲ ಆಟಗಾರರು ವಿಫಲರಾಗಿದ್ದು ಅರ್ಧಶತಕ ಬಾರಿಸುವುದಕ್ಕೂ ಸಹ ತಿಣುಕಾಡಿದರು. ಹೀಗೆ ಸರಣಿಯಲ್ಲಿ ಭಾರತದ ಯಾರೊಬ್ಬರೂ ಶತಕ ಬಾರಿಸದ ಕಾರಣ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮೂರನೇ ಬಾರಿಗೆ ತವರಿನಲ್ಲಿ ಶತಕರಹಿತ ಟೆಸ್ಟ್ ಸರಣಿಯನ್ನಾಡಿದೆ.
ಭಾರತ ಶತಕ ಬಾರಿಸದೇ ತವರಿನಲ್ಲಿ ಆಡಿದ ಟೆಸ್ಟ್ ಸರಣಿಗಳು
- 1969 – 70: ನ್ಯೂಜಿಲೆಂಡ್ ವಿರುದ್ಧ
- 1995 – 96: ನ್ಯೂಜಿಲೆಂಡ್ ವಿರುದ್ಧ
- 20025 – 26: ದಕ್ಷಿಣ ಆಫ್ರಿಕಾ ವಿರುದ್ಧ
ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದ ಪತ್ನಿ; ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


