Sunday, July 5, 2026
spot_img
More
    spot_img
    HomeLatest newsಹೊಸ ದಾಖಲೆ ಬರೆದ ಚಿನ್ನ-ಬೆಳ್ಳಿ ಬೆಲೆ: 10 ಗ್ರಾಂ ಚಿನ್ನ ಈಗ ₹1.40 ಲಕ್ಷ, ಒಂದೇ...

    ಹೊಸ ದಾಖಲೆ ಬರೆದ ಚಿನ್ನ-ಬೆಳ್ಳಿ ಬೆಲೆ: 10 ಗ್ರಾಂ ಚಿನ್ನ ಈಗ ₹1.40 ಲಕ್ಷ, ಒಂದೇ ದಿನದಲ್ಲಿ ₹6,000 ಏರಿಕೆ ಕಂಡ ಬಿಳಿ ಲೋಹ

    ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದ್ದು, ಜನಸಾಮಾನ್ಯರಿಗೆ ಈಗ ಬಂಗಾರ ಮತ್ತು ಬೆಳ್ಳಿ ಎರಡೂ ಕೈಗೆಟುಕದ ನಕ್ಷತ್ರಗಳಂತಾಗಿವೆ. ಇಂದು ಬೆಳ್ಳಿ ಬೆಲೆಯಲ್ಲಿ ಭಾರಿ ಸ್ಫೋಟ ಕಂಡುಬಂದಿದ್ದು, ಒಂದೇ ದಿನ ಕೆಜಿಗೆ ಬರೋಬ್ಬರಿ ₹6,000 ಏರಿಕೆಯಾಗಿದೆ. ಈ ಮೂಲಕ ಬೆಳ್ಳಿ ದರವು ₹2.4 ಲಕ್ಷದ ಗಡಿಯನ್ನು ದಾಟಿ ಹೊಸ ಮೈಲಿಗಲ್ಲು ತಲುಪಿದೆ.

    Advertisement

    ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ದರದ ನಾಗಾಲೋಟ ಮುಂದುವರಿದಿದ್ದು, ಕಳೆದ ಎರಡು ದಿನಗಳಿಂದ ತಲಾ ₹30ರಷ್ಟು ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ, ಇಂದು ಒಂದೇ ದಿನದಲ್ಲಿ ಬರೋಬ್ಬರಿ ₹70 ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.

    ಬೆಂಗಳೂರು ಮಾರುಕಟ್ಟೆಯ ಇಂದಿನ ಚಿತ್ರಣ ಗಮನಿಸಿದರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ₹1,27,650 ಕ್ಕೆ ತಲುಪಿದ್ದರೆ, ಶುದ್ಧ ಬಂಗಾರ ಅಂದರೆ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹1,39,250 ಆಗಿದೆ. ಇನ್ನು ಬಿಳಿ ಲೋಹದ ಕಥೆಯೂ ಭಿನ್ನವಾಗಿಲ್ಲ ನಗರದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ₹23,400 ರಲ್ಲಿ ಮುಂದುವರಿದಿದೆ. ವಿಶೇಷವೆಂದರೆ ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ದರವು ಬರೋಬ್ಬರಿ ₹24,500 ತಲುಪುವ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ದಾಖಲೆ ಬರೆದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದಾಗಿ ಮದುವೆ ಸೀಸನ್‌ನಲ್ಲಿ ಚಿನ್ನ ಖರೀದಿಸುವವರ ಜೇಬಿಗೆ ಈ ಬೆಲೆ ಏರಿಕೆ ದೊಡ್ಡ ಕತ್ತರಿ ಹಾಕುತ್ತಿದೆ.

    ಇಂದಿನ ಚಿನ್ನದ ದರಗಳು (1 ಗ್ರಾಂಗೆ)

    ಚಿನ್ನದ ವಿಧಇಂದಿನ ದರ (1 ಗ್ರಾಂಗೆ)

    24 ಕ್ಯಾರೆಟ್ (ಅಪರಂಜಿ)₹14,002

    22 ಕ್ಯಾರೆಟ್ (ಆಭರಣ ಚಿನ್ನ)₹12,835

    18 ಕ್ಯಾರೆಟ್ (ಕಡಿಮೆ ಗುಣಮಟ್ಟ)₹10,502

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,002 ರೂ

    22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,835 ರೂ

    ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

    ಚಿನ್ನದ ಜೊತೆಗೆ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ ₹240 ರಷ್ಟಿದೆ. ಅಂದರೆ ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ ₹2.4 ಲಕ್ಷ ತಲುಪಿದೆ!

    ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

    ನಗರದ ಹೆಸರು 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)

    ಬೆಂಗಳೂರು ₹1,40,020

    ಮುಂಬೈ ₹1,40,020

    ಕೋಲ್ಕತ್ತಾ ₹1,40,020

    ನಾಗ್ಪುರ ₹1,40,020

    ಪಾಟ್ನಾ ₹1,40,070

    ಸೂರತ್‌ ₹1,40,070

    ಚಂಡೀಗಢ ₹1,40,170

    ಲಕ್ನೋ ₹1,40,170

    ಚೆನ್ನೈ ₹1,40,620

    ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading