ಬೆಂಗಳೂರು: ನಂಬಿಕೆಯೇ ಜೀವನದ ಅಡಿಪಾಯ ಎಂಬ ಮಾತು ಹಳೆಯದಾಯಿತು ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ನಂಬಿಕೆಗಿಂತ ‘ಲಿಖಿತ ದಾಖಲೆ’ (Documentation) ಮಾತ್ರ ನಿಮ್ಮನ್ನು ಕಾಪಾಡಬಲ್ಲದು. ತನ್ನ ಊರಿಗೆ ಹತ್ತಿರ ಎಂಬ ಒಂದೇ ಕಾರಣಕ್ಕೆ ಮ್ಯಾನೇಜರ್ ನೀಡಿದ ಬಾಯ್ಮಾತಿನ ಭರವಸೆ ನಂಬಿ, ₹26 ಲಕ್ಷದ ಭರ್ಜರಿ ಆಫರ್ ಕಳೆದುಕೊಂಡ ಉದ್ಯೋಗಿಯೊಬ್ಬರ ಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಮಿತ್ ಶೇಖರ್ ಎಂಬುವವರು ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ಹಂಚಿಕೊಂಡ ಈ ‘ರಿಯಲ್ ಸ್ಟೋರಿ’ ಪ್ರತಿಯೊಬ್ಬ ಉದ್ಯೋಗಿಗೂ ಒಂದು ಎಚ್ಚರಿಕೆಯ ಪಾಠ.
ನಡೆದಿದ್ದೇನು? ಆಫರ್ ಏನಿತ್ತು?
ಸದರಿ ಉದ್ಯೋಗಿ ತನ್ನ ಊರಿನ ಸಮೀಪದಲ್ಲೇ ಇರುವ ಕಂಪನಿಯಲ್ಲಿ ₹15 ಲಕ್ಷ ವಾರ್ಷಿಕ ಪ್ಯಾಕೇಜ್‌ಗೆ ಕೆಲಸ ಮಾಡುತ್ತಿದ್ದರು. ಉತ್ತಮ ಭವಿಷ್ಯ ಮತ್ತು ವೇತನ ವೃದ್ಧಿಗಾಗಿ ಹುಡುಕಾಟ ನಡೆಸಿದಾಗ, ಮತ್ತೊಂದು ಪ್ರತಿಷ್ಠಿತ ಕಂಪನಿಯಿಂದ ₹26 ಲಕ್ಷದ ಭರ್ಜರಿ ಆಫರ್ ಕೈಗೆ ಬಂದಿತು. ಈ ಅವಕಾಶವನ್ನು ಹಿಡಿದುಕೊಳ್ಳಲು ಹಳೆಯ ಕಂಪನಿಗೆ ರಾಜೀನಾಮೆ ನೀಡಲು ಮುಂದಾದ ಕ್ಷಣದಲ್ಲೇ ಮ್ಯಾನೇಜರ್ ಆಶ್ವಾಸನೆ.
ನಿಮಗೆ ಇಲ್ಲೇ ಕೆಲಸ ಮಾಡುವುದು ಇಷ್ಟವಿದ್ದರೆ ಉಳಿಯಿರಿ. ಮುಂದಿನ ತಿಂಗಳಿನಿಂದಲೇ ₹26 ಲಕ್ಷ ಸಂಬಳ ನೀಡುತ್ತೇವೆ ಎಂಬ ಬಾಯ್ಮಾತಿನ ಭರವಸೆ ನೀಡಲಾಯಿತು. ಕಂಪನಿಯ ಮೇಲಿದ್ದ ನಂಬಿಕೆ ಮತ್ತು ಊರಿಗೆ ಹತ್ತಿರ ಎಂಬ ಕಾರಣದಿಂದ ಆ ಉದ್ಯೋಗಿ ಹೊಸ ಕಂಪನಿಯ ಆಫರ್ ಅನ್ನು ತಿರಸ್ಕರಿಸಿದರು.
ಆದರೆ ಹೊಸ ಕಂಪನಿಗೆ ಸೇರಬೇಕಿದ್ದ ದಿನಾಂಕ ಮುಗಿದ ಬಳಿಕವೇ ನಿಜವಾದ ಆಟ ಶುರುವಾಯಿತು. ಸರಿಯಾಗಿ ಒಂದು ತಿಂಗಳ ನಂತರ ನಡೆದ ಸಭೆಯಲ್ಲಿ ಮ್ಯಾನೇಜ್‌ಮೆಂಟ್ ಧಾಟಿಯೇ ಬದಲಾಗಿತ್ತು“ನಾವು ಒಂದು ರೂಪಾಯಿಯನ್ನೂ ಹೆಚ್ಚಿಸುವುದಿಲ್ಲ, ಸಂಬಳ ₹15 ಲಕ್ಷದಲ್ಲೇ ಮುಂದುವರಿಯುತ್ತದೆ” ಎಂಬ ಸ್ಪಷ್ಟ ಉತ್ತರ ಈಗ ಆ ಉದ್ಯೋಗಿ ಕೈಯಲ್ಲಿದ್ದ ₹26 ಲಕ್ಷದ ಅವಕಾಶವೂ ಇಲ್ಲ, ಸಂಬಳ ಏರಿಕೆಯ ಭರವಸೆಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ: ‘ಕಾರ್ಪೊರೇಟ್ ಮೋಸ’ಕ್ಕೆ ನೆಟ್ಟಿಗರು ಹೇಳಿದ್ದೇನು?
ಅಮಿತ್ ಶೇಖರ್ ಹಂಚಿಕೊಂಡ ಈ ಕಹಿ ಘಟನೆ ಸದ್ಯ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ. ಕಾರ್ಪೊರೇಟ್ ಲೋಕದ ಈ ‘ಡರ್ಟಿ ಗೇಮ್’ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. ಆಯ್ದ ಕೆಲವು ಖಡಕ್ ಪ್ರತಿಕ್ರಿಯೆಗಳು ಇಲ್ಲಿವೆ:
ನಂಬಿಕೆಯೇ ಈಗ ದೊಡ್ಡ ಶಾಪ: ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಇಂದಿನ ಕಾರ್ಪೊರೇಟ್ ಜಗತ್ತಿನ ಕಟು ವಾಸ್ತವ! ಎಂದು ಒಬ್ಬ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಎದುರಿಗಿರುವವರನ್ನು ಮನುಷ್ಯರೆಂದು ನಂಬುತ್ತೇವೆ, ಆದರೆ ವೃತ್ತಿಜೀವನದಲ್ಲಿ ಅತಿ ನಂಬಿಕೆಯೇ ನಮಗೆ ಮುಳುವಾಗುತ್ತದೆ” ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಲೆ ತೆತ್ತೇ ಕಲಿಯಬೇಕು ಈ ಪಾಠ: ಇನ್ನೊಬ್ಬರು ಮಾರ್ಮಿಕವಾಗಿ ಪ್ರತಿಕ್ರಿಯಿಸುತ್ತಾ, ಜೀವನದಲ್ಲಿ ಕೆಲವು ಪಾಠಗಳು ಸುಲಭವಾಗಿ ಸಿಗುವುದಿಲ್ಲ, ಅದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಈ ಯುವಕ ₹11 ಲಕ್ಷದ (₹26 ಲಕ್ಷ – ₹15 ಲಕ್ಷ) ಪಾಠ ಕಲಿತಿದ್ದಾನೆ. ಈ ಕಹಿ ಅನುಭವ ಅವನನ್ನು ಮುಂದೆ ಎಂದೂ ಇಂತಹ ತಪ್ಪು ಮಾಡದಂತೆ ಎಚ್ಚರಿಸುತ್ತದೆ ಎಂದಿದ್ದಾರೆ.
ಸ್ಮಾರ್ಟ್ ಆಗಿರದಿದ್ದರೆ ಸಂಕಷ್ಟ ತಪ್ಪದು: ಮ್ಯಾನೇಜರ್ ಬಾಯ್ಮಾತಿನಲ್ಲಿ ಹೇಳಿದ್ದನ್ನು ಸಾಕ್ಷಿ ಸಮೇತ ಹಿಡಿದಿಡಬೇಕಿತ್ತು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಸಭೆ ಮುಗಿದ ತಕ್ಷಣ, ‘ನೀವು ಹೇಳಿದಂತೆ ನನ್ನ ಸಂಬಳ ಹೆಚ್ಚಿಸುತ್ತಿರುವುದಕ್ಕೆ ಧನ್ಯವಾದಗಳು’ ಎಂದು ಮ್ಯಾನೇಜರ್‌ಗೆ ಇಮೇಲ್ ಕಳುಹಿಸಿ, ಎಚ್‌ಆರ್ (HR) ಅನ್ನು ಸಿಸಿ (CC) ಯಲ್ಲಿ ಇಟ್ಟಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ
ಜನವರಿಯಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ! ಇಲ್ಲಿದೆ ಆರ್‌ಬಿಐ ರಜಾ ಪಟ್ಟಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


