Saturday, November 7, 2026
spot_img
More
    spot_img
    HomeLatest newsಜನವರಿಯಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ! ಇಲ್ಲಿದೆ ಆರ್‌ಬಿಐ ರಜಾ ಪಟ್ಟಿ

    ಜನವರಿಯಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ! ಇಲ್ಲಿದೆ ಆರ್‌ಬಿಐ ರಜಾ ಪಟ್ಟಿ

    ಹೊಸ ವರ್ಷದ ಸಂಭ್ರಮದೊಂದಿಗೆ 2026ಕ್ಕೆ ಕಾಲಿಡುತ್ತಿರುವ ನಿಮಗೆ, ಜನವರಿ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳಿದ್ದರೆ ಮುಂಚಿತವಾಗಿ ತಿಳಿದುಕೊಳ್ಳುವುದು ಬಹಳ ಅಗತ್ಯ, ಜನವರಿಯಲ್ಲಿ ಸಾಲು ಸಾಲು ಹಬ್ಬಗಳು ಹಾಗೂ ರಜೆಗಳಿರುವುದರಿಂದ, ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಇಂದೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

    ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿರುವ ಕ್ಯಾಲೆಂಡರ್ ಪ್ರಕಾರ, ಈ ತಿಂಗಳು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಹಬ್ಬಗಳು ಹಾಗೂ ರಾಷ್ಟ್ರೀಯ ದಿನಾಚರಣೆಗಳ ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಇರಲಿದೆ.ವಾಡಿಕೆಯಂತೆ 4 ಭಾನುವಾರಗಳು ಹಾಗೂ 2ನೇ ಮತ್ತು 4ನೇ ಶನಿವಾರಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.

    ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಗಣರಾಜ್ಯೋತ್ಸವದಂತಹ ದೊಡ್ಡ ರಜೆಗಳು ಈ ತಿಂಗಳಲ್ಲೇ ಬರುತ್ತವೆ.ಒಟ್ಟಾರೆಯಾಗಿ ಭಾನುವಾರ ಮತ್ತು ಶನಿವಾರದ ರಜೆಗಳನ್ನು ಸೇರಿಸಿ ಕೆಲವು ರಾಜ್ಯಗಳಲ್ಲಿ 10 ರಿಂದ 12 ದಿನಗಳವರೆಗೆ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

    ಜನವರಿ 2026ರಲ್ಲಿ ಪ್ರಮುಖ ಬ್ಯಾಂಕ್ ರಜಾದಿನಗಳ ಪಟ್ಟಿ

    ಜನವರಿ 1 (ಗುರುವಾರ) – ಹೊಸ ವರ್ಷದ ದಿನ / ಗಾನ್-ಂಗೈ

    ಜನವರಿ 2 (ಶುಕ್ರವಾರ) – ಹೊಸ ವರ್ಷದ ಆಚರಣೆ / ಮನ್ನಂ ಜಯಂತಿ

    ಜನವರಿ 3 (ಶನಿವಾರ) – ಹಜರತ್ ಅಲಿಯವರ ಜನ್ಮದಿನ

    ಜನವರಿ 12 (ಸೋಮವಾರ) – ಸ್ವಾಮಿ ವಿವೇಕಾನಂದ ಜಯಂತಿ

    ಜನವರಿ 14 (ಬುಧವಾರ) – ಮಕರ ಸಂಕ್ರಾಂತಿ / ಮಾಘ ಬಿಹು

    ಜನವರಿ 15 (ಗುರುವಾರ) – ಉತ್ತರಾಯಣ ಪುಣ್ಯಕಾಲ / ಪೊಂಗಲ್ / ಮಕರ ಸಂಕ್ರಾಂತಿ

    ಜನವರಿ 16 (ಶುಕ್ರವಾರ) – ತಿರುವಳ್ಳುವರ್ ದಿನ

    ಜನವರಿ 17 (ಶನಿವಾರ) – ಉಝಾವರ್ ತಿರುನಾಳ್

    ಜನವರಿ 23 (ಶುಕ್ರವಾರ) – ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ / ಬಸಂತ ಪಂಚಮಿ

    ಜನವರಿ 26 (ಸೋಮವಾರ) – ಗಣರಾಜ್ಯೋತ್ಸವ (ದೇಶಾದ್ಯಂತ)

    ಮುಂದಿನ 5–10 ವರ್ಷಗಳಲ್ಲಿ ತಾಮ್ರಕ್ಕೆ ಚಿನ್ನದ ಮೌಲ್ಯ?ತಾಮ್ರದ ದರ ಚಿನ್ನದ ಮಟ್ಟಕ್ಕೆ ಏರಲಿದೆಯೇ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search