ನಿನ್ನೆ ( ಡಿಸೆಂಬರ್ 24 ) ಬುಧವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಖ್ಯಾತ ಸಂಗೀತ ಸಂಯೋಜಕ ಶ್ರೀ ಮೃತ್ಯುಂಜಯ ದೊಡ್ಡವಾಡ ಅವರ ಜನ್ಮದಿನದ ಅಂಗವಾಗಿ ಮೃತ್ಯುಂಜಯ ದೊಡ್ಡವಾಡ ಸ್ನೇಹ ಬಳಗ ‘ಭಾವ ಝೇಂಕಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಗಾಯಕ ಗಾಯಕಿಯರು ಹಾಡುತ್ತಿದ್ದಾರೆ ಹಾಗೂ 120ಕ್ಕೂ ಹೆಚ್ಚು ಕಲಾವಿದರು ಸಮೂಹ ಗಾಯನದಲ್ಲಿ ಭಾಗವಹಿಸಿದ್ದರು. ಗಾಯಕರು ಗುಂಪು ಗುಂಪುಗಳಾಗಿ ವಿವಿಧ ಭಾವಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಬಂದ್ದಿ ಗಾನಪ್ರಿಯರ ಮನಸೂರೆಗೊಳಿಸಿದರು.
ಇನ್ನು ಮೃತ್ಯುಂಜಯ ದೊಡ್ಡವಾಡ ಸ್ನೇಹ ಬಳಗ ನಡೆಸಿಕೊಂಡು ಬಂದಿರುವ ಸಂಗೀತ ತರಗತಿ ಸಂಗೀತ ಧಾಮದ ವಿದ್ಯಾರ್ಥಿಗಳಾದ ಹಿರಣ್ಮಯಿ ಹಾಗೂ ಇತರೆ ಪುಟಾಣಿಗಳೂ ಸಹ ಸಮೂಹ ಗಾಯನವನ್ನು ಮಾಡಿದರು ಹಾಗೂ ಮುಂದಿನ ಪೀಳಿಗೆಗೂ ಸಹ ಭಾವಗೀತೆಯ ಮೇಲೆ ಒಲವಿದೆ ಎಂಬುದಕ್ಕೆ ನಿದರ್ಶನವಾದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


