ಬೆಂಗಳೂರು;ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ನೇ ಸಾಲಿನ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 541 ಹುದ್ದೆಗಳಿವೆ. ಅರ್ಜಿ ಪ್ರಕ್ರಿಯೆ ಜೂನ್ 24, 2025ರಿಂದ ಆರಂಭವಾಗಿದ್ದು, ಜುಲೈ 14, 2025 ಕೊನೆಯ ದಿನಾಂಕವಾಗಿದೆ. ಆಸಕ್ತರು http://www.sbi.co.in ಅಥವಾ ನೇರವಾಗಿ ibpsonline.ibps.in/sbipomay25 ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ
SBI Bank ಹುದ್ದೆಗಳ ವಿವರ:
ಪದವಿಯ ಹೆಸರು: ಪ್ರೊಬೇಷನರಿ ಆಫೀಸರ್ (PO)
ಒಟ್ಟು ಹುದ್ದೆಗಳು: 541
ಸ್ಥಳ: ಭಾರತದೆಲ್ಲೆಡೆ
ವೇತನ ಶ್ರೇಣಿ: ₹48,480 ರಿಂದ ₹85,920 (ತಿಂಗಳಿಗೆ)
ವಿದ್ಯಾರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು
ವಯೋಮಿತಿ (01-04-2025ರ ಪ್ರಕಾರ):
ಕನಿಷ್ಠ: 21 ವರ್ಷ
ಗರಿಷ್ಠ: 30 ವರ್ಷ

ವಯೋಮಿತಿ ಸಡಿಲಿಕೆ:
OBC (NCL) 3 ವರ್ಷ
SC/ST 5 ವರ್ಷ
PwBD (UR/EWS) 10 ವರ್ಷ
PwBD (OBC) 13 ವರ್ಷ
PwBD (SC/ST) 15 ವರ್ಷ
ಪಾವತಿ ವಿಧಾನ:
ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ನೆಟ್‌ಬ್ಯಾಂಕಿಂಗ್ ಮೂಲಕ
ಪ್ರಿಲಿಮಿನರಿ ಪರೀಕ್ಷಾ ಕೇಂದ್ರಗಳು : ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
ಮುಖ್ಯ ಪರೀಕ್ಷಾ ಕೇಂದ್ರಗಳು :
ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು.
ಮುಖ್ಯ ದಿನಾಂಕಗಳು
ಅರ್ಜಿ ಆರಂಭ 24-06-2025
ಕೊನೆಯ ದಿನ 14-07-2025
ಪ್ರಾಥಮಿಕ ಹಾಲ್ ಟಿಕೆಟ್ ಜುಲೈ 3ನೇ ಅಥವಾ 4ನೇ ವಾರ
ಪ್ರಾಥಮಿಕ ಪರೀಕ್ಷೆ ಜುಲೈ / ಆಗಸ್ಟ್ 2025
ಪ್ರಾಥಮಿಕ ಫಲಿತಾಂಶ ಆಗಸ್ಟ್ / ಸೆಪ್ಟೆಂಬರ್ 2025
ಮುಖ್ಯ ಪರೀಕ್ಷೆ ಸೆಪ್ಟೆಂಬರ್ 2025
ಅಂತಿಮ ಸಂದರ್ಶನ ಅಕ್ಟೋಬರ್ / ನವೆಂಬರ್ 2025
ಅಂತಿಮ ಫಲಿತಾಂಶ ನವೆಂಬರ್ / ಡಿಸೆಂಬರ್ 2025
ಪೂರ್ವ ತರಬೇತಿ ಜುಲೈ / ಆಗಸ್ಟ್ 2025
ಮುಖ್ಯ ಲಿಂಕ್‌ಗಳು; ಆಧಿಕೃತ ವೆಬ್‌ಸೈಟ್: sbi.co.in
ಅರ್ಜಿಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: ಇರುವುದಿಲ್ಲ
ಯುಆರ್/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹750/-
ಪಾವತಿ ವಿಧಾನ: ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಸುವ ವಿಧಾನ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್ https://sbi.co.in/ ಗೆ ಭೇಟಿ ನೀಡಿ.
‘Careers’ ಅಥವಾ ‘Current Openings’ ವಿಭಾಗವನ್ನು ತೆರೆಯಿರಿ.
‘SBI Probationary Officer Recruitment 2025’ ಎಂಬ ಲಿಂಕ್ ಕ್ಲಿಕ್ ಮಾಡಿ.
ಅಧಿಕೃತ ಅಧಿಸೂಚನೆಯನ್ನು ಚೆನ್ನಾಗಿ ಓದಿ ಮತ್ತು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ಮೂಲಕ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಅರ್ಜಿ ಸಲ್ಲಿಸಿದ ನಂತರ, ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಸಂರಕ್ಷಿಸಿ.
ದ್ವಿತೀಯ ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ; SSC CHSL 2025ಗೆ ಈಗಲೇ ಅರ್ಜಿ ಸಲ್ಲಿಸಿ!
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


