ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅತಿಯಾಗಿ ಚರ್ಚೆಗೀಡಾಗಿರುವ ಮುಖ್ಯಮಂತ್ರಿ ಬದಲಾವಣೆ ಕುರಿತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿದ್ದು, ತಮ್ನ ಪಾಲಿನ ಅಭಿಪ್ರಾಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೇರಿದಾಗಿನಿಂದಲೂ ಕೇಳಿಬರುತ್ತಿರುವ ಈ ಬದಲಾವಣೆಯ ಸುದ್ದಿಗೆ ಇತ್ತೀಚೆಗಷ್ಟೆ ಸಹಕಾರ ಸಚಿವ ಕೆಎನ್ ರಾಜಣ್ಣ ನೀಡಿದ ಆಗಸ್ಟ್‌ನಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂಬ ಹೇಳಿಕೆ ಮತ್ತಷ್ಟು ಪುಷ್ಟಿಯನ್ನು ನೀಡಿದಂತಾಗಿದೆ.
ಸದ್ಯ ಬಸವರಾಜ ರಾಯರೆಡ್ಡಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಗಳ ಬದಲಾವಣೆ ಎಂಬುದು ಕೇವಲ ಅವರವರ ಸಂತೋಷಕ್ಕಾಗಿ ಹೇಳಿಕೊಳ್ಳುವ ಮಾತುಗಳು, ಒಬ್ಬೊಬ್ಬರಿಗೆ ಮಾನಸಿಕ ಸಂತೋಷ ಬೇಕಾಗಿರುತ್ತದೆ, ಅವರಿಗೆ ನಾನು ಸಿಎಂ ಆಗಿಬಿಡಬೇಕು ಎನಿಸುತ್ತದೆ. ಇವಾಗ ನಾನೇನು ಕಮ್ಮಿ ಇದೀನ್ರಿ? ನಾನೇನ್ ಕಮ್ಮಿ ಇದೀನಾ? ನಾವೇ ಮಾಡಿಕೊಂಡು ಹೋಗಿಬಿಡಬಹುದು. ಈಗ ಅವರು ಎಷ್ಟು ಸಲ ಆಯ್ಕೆಯಾಗಿದ್ದಾರೋ ಅಷ್ಟೇ ಸಲ ನಾನೂ ಆಯ್ಕೆಯಾಗಿದ್ದೇನೆ. ಜ್ಞಾನದಲ್ಲಿ ಕಡಿಮೆ ಇಲ್ಲ, ಜಾತಿಯಲ್ಲೂ ಅರ್ಹನಿದ್ದೇನೆ. ಜಾತಿ ಆಧಾರದ ಮೇಲೆ ಕೊಟ್ಟರೆ ನಾನು ಕೇಳಲ್ಲ, ಅರ್ಹತೆ ಆಧಾರದ ಮೇಲೆ ಕೊಟ್ಟರೆ ನಾನೂ ಕೇಳುತ್ತೇನೆ. ಆದರೆ ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
BREAKING: ಮಹದೇಶ್ವರ ಬೆಟ್ಟ ಹುಲಿಗಳ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ಬಹಿರಂಗ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


