Friday, November 6, 2026
spot_img
More
    spot_img
    HomeLatest newsಉತ್ತಮ ಆರೋಗ್ಯಕ್ಕಾಗಿ ಆಯುಷ್ ಸಚಿವಾಲಯದ 5 ಹೈಡ್ರೇಶನ್ ಸಲಹೆಗಳು

    ಉತ್ತಮ ಆರೋಗ್ಯಕ್ಕಾಗಿ ಆಯುಷ್ ಸಚಿವಾಲಯದ 5 ಹೈಡ್ರೇಶನ್ ಸಲಹೆಗಳು

    ಆರೋಗ್ಯವಾಗಿರಲು ನಿಯಮಿತವಾಗಿ ನೀರು ಕುಡಿಯುವುದು ಅತಿ ಮುಖ್ಯ. ತಜ್ಞರು ಪ್ರತಿ ಗಂಟೆಗೆ 2 ರಿಂದ 3 ಕಪ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ಹವಾಮಾನವು ಬಿಸಿಯಾಗಿದ್ದರೆ ಅಥವಾ ನೀವು ವ್ಯಾಯಾಮ ಮಾಡುತ್ತಿದ್ದರೆ, ಈ ಪ್ರಮಾಣವನ್ನು ಹೆಚ್ಚಿಸಬೇಕು.ಸಾಮಾನ್ಯವಾಗಿ, ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯಬೇಕು. ನಿಮ್ಮ ದೇಹದ ಅವಶ್ಯಕತೆಗಳ ಬಗ್ಗೆ ನಿಖರ ಮಾಹಿತಿ ಪಡೆಯಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ದೇಹವನ್ನು ಆರೋಗ್ಯವಾಗಿಡಲು ಮತ್ತು ನಿರ್ಜಲೀಕರಣದಿಂದ ಮುಕ್ತವಾಗಿರಲು ನೀರು ಅತ್ಯಗತ್ಯ. ಯಾವುದೇ ಆರೋಗ್ಯ ಸಮಸ್ಯೆಯಿರಲಿ, ವೈದ್ಯರು ಮೊದಲಿಗೆ ನೀರು ಸೇವಿಸಲು ಸಲಹೆ ನೀಡುತ್ತಾರೆ. ಪ್ರತಿಯೊಂದು ವಯಸ್ಸಿನಲ್ಲೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾಗಿ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ.

    ಆಯುಷ್ ಸಚಿವಾಲಯ ಮತ್ತು ಪೌಷ್ಟಿಕತಜ್ಞರ ಪ್ರಕಾರ, ದೇಹದ ಪ್ರತಿ ವ್ಯವಸ್ಥೆಯ ಕಾರ್ಯವನ್ನು ನಿರ್ವಹಿಸಲು ದ್ರವ ಪದಾರ್ಥಗಳನ್ನು ಕುಡಿಯುವುದು ನಿರ್ಣಾಯಕ. ಆದರೆ, ಕೆಲವರು ದಿನಕ್ಕೆ ಅಗತ್ಯವಿರುವ 8 ರಿಂದ 10 ಲೋಟ ನೀರನ್ನು ಕುಡಿಯುವುದಿಲ್ಲ, ಇದು ದೇಹದ ಚಯಾಪಚಯ ಕ್ರಿಯೆಗಳಿಗೆ ಬಹಳ ಮುಖ್ಯ. ನೀವು ಸಾಕಷ್ಟು ನೀರು ಕುಡಿಯದಿದ್ದರೆ ಅಥವಾ ಬರೀ ನೀರು ಕುಡಿದು ಬೇಸರಗೊಂಡಿದ್ದರೆ, ಆಯುಷ್ ಸಚಿವಾಲಯವು ಹೈಡ್ರೇಟ್ ಆಗಿ ಇರಲು ಕೆಲವು ಸುಲಭ ವಿಧಾನಗಳನ್ನು ನೀಡಿದೆ.

    1.ಸಾಕಷ್ಟು ನೀರು ಕುಡಿಯಿರಿ:

    ನಿಮ್ಮ ದೇಹವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ.ಪ್ರತಿ ಗಂಟೆಗೆ 2 ರಿಂದ 3 ಕಪ್ ನೀರು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಹವಾಮಾನವು ಬಿಸಿಯಾಗಿದ್ದರೆ ಅಥವಾ ನೀವು ವ್ಯಾಯಾಮ ಮಾಡುತ್ತಿದ್ದರೆ, ಈ ಪ್ರಮಾಣವು ಹೆಚ್ಚಾಗಬಹುದು. ಅದೇ ಸಮಯದಲ್ಲಿ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ದೇಹದ ಬಗ್ಗೆ ಅರಿತುಕೊಳ್ಳಲು ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಒಳ್ಳೆಯದು.

    ​2.ಮೂತ್ರದ ಬಣ್ಣವನ್ನು ಪರೀಕ್ಷಿಸುತ್ತಿರಿ

    ನಮ್ಮ ದೇಹವು ಎಷ್ಟು ಹೈಡ್ರೇಟ್ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಮೂತ್ರದ ಬಣ್ಣವನ್ನು ಗಮನಿಸುವುದು ಸುಲಭ ಮಾರ್ಗ. ಮೂತ್ರದ ಬಣ್ಣವು ದೇಹದಲ್ಲಿನ ನೀರಿನ ಪ್ರಮಾಣವನ್ನು ಸೂಚಿಸುತ್ತದೆ.ನಿಮ್ಮ ಮೂತ್ರದ ಬಣ್ಣವು ದೇಹದಲ್ಲಿನ ನೀರಿನ ಪ್ರಮಾಣವನ್ನು ಸೂಚಿಸುತ್ತದೆ. ನೀವು ಸಾಕಷ್ಟು ನೀರು ಕುಡಿದಾಗ, ಮೂತ್ರವು ತಿಳಿ ಹಳದಿ ಅಥವಾ ಬಹುತೇಕ ಸ್ಪಷ್ಟವಾಗಿ ಕಾಣುತ್ತದೆ,ಇದು ನಿಮ್ಮ ದೇಹವು ಸರಿಯಾಗಿ ಹೈಡ್ರೇಟ್ ಆಗಿದೆ ಎಂಬುದನ್ನು ಸೂಚಿಸುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಚರ್ಮವು ಆರೋಗ್ಯಕರವಾಗಿರುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.ಮೂತ್ರದ ಬಣ್ಣವನ್ನು ನಿಯಮಿತವಾಗಿ ಗಮನಿಸುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು.

    3.ಶುದ್ಧ ನೀರನ್ನು ಆರಿಸುವುದು ಹೇಗೆ

    ನೀವು ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಅನುಮಾನವಿದ್ದರೆ, ಯಾವಾಗಲೂ ಕುದಿಸಿ ಆರಿಸಿದ ನೀರು ಕುಡಿಯುವುದು ಉತ್ತಮ. ನೀರನ್ನು ಕುದಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ಇತರ ಕಲ್ಮಶಗಳು ನಾಶವಾಗುತ್ತವೆ.ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸೋಂಕುಗಳು ಬರದಂತೆ ತಡೆಯಬಹುದು. ಈ ಅಭ್ಯಾಸವು ಆಯುರ್ವೇದದ ದೃಷ್ಟಿಕೋನದಿಂದಲೂ ಬಹಳ ಮುಖ್ಯವಾಗಿದೆ. ಶುದ್ಧ ನೀರು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    4.ಹಾಲು

    ಆಯುಷ್ ಸಚಿವಾಲಯವು ಪ್ರತಿದಿನ 250 ಮಿಲಿಲೀಟರ್ ಕುದಿಸಿ ಅಥವಾ ಪಾಶ್ಚರೀಕರಿಸಿದ ಹಾಲು ಕುಡಿಯಲು ಸಲಹೆ ನೀಡುತ್ತದೆ. ಹಾಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಡಿ ಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    1. ಹಣ್ಣಿನ ರಸ

    ಸಕ್ಕರೆ ತುಂಬಿದ ಮಾರುಕಟ್ಟೆಯ ತಂಪು ಪಾನೀಯಗಳ ಬದಲಾಗಿ ತಾಜಾ ಹಣ್ಣಿನ ರಸಗಳನ್ನು ಕುಡಿಯುವುದು ಉತ್ತಮ. ನೈಸರ್ಗಿಕ ಹಣ್ಣಿನ ರಸಗಳು ವಿಟಮಿನ್‌ಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಇವು ದೇಹಕ್ಕೆ ಪೋಷಣೆ ನೀಡುವುದಲ್ಲದೆ, ಸ್ಥೂಲಕಾಯ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗಿವೆ.

    ಗಣೇಶ ಹಬ್ಬದ ಸಂಭ್ರಮದ ನಡುವೆ ಟ್ರಂಪ್ ಶಾಕ್: ಭಾರತೀಯ ಉತ್ಪನ್ನಗಳಿಗೆ ಡಬಲ್ ತೆರಿಗೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search