ಸಂತೋಷ ಮತ್ತು ಸಮೃದ್ಧಿಯ ದೇವರು ಎಂದು ಪೂಜಿಸಲಾಗುತ್ತದೆ. ಭಕ್ತರ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಾವಲುಗಾರನಾಗಿ ನಿಲ್ಲುವ ಗಜಾನನನನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಗಣೇಶ ಚತುರ್ಥಿಯಂದು ಭಕ್ತರು ತಮ್ಮ ಮನೆಗಳಲ್ಲಿ ವಿನಾಯಕನಿಗೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ. ಈ ನೈವೇದ್ಯಗಳಲ್ಲಿ ಮೋದಕ ಪ್ರಮುಖ ಸ್ಥಾನ ಪಡೆಯುತ್ತದೆ. ಈ ಸಿಹಿ ತಿಂಡಿಯನ್ನು ಅರ್ಪಿಸಿದರೆ ಗಣೇಶ ಬೇಗ ಒಲಿಯುತ್ತಾನೆ ಎಂಬ ನಂಬಿಕೆ ಇದೆ. ಈ ಹಬ್ಬದ ಸಮಯದಲ್ಲಿ ಮೋದಕವು ಗಣೇಶನಿಗೆ ಪ್ರಿಯವಾದ ಒಂದು ಮುಖ್ಯ ತಿನಿಸಾಗಿದೆ. ಈ ಕಾರಣದಿಂದಲೇ ಪ್ರತಿ ಗೌರಿ-ಗಣೇಶ ಹಬ್ಬದಂದು ಮೋದಕವನ್ನು ನೈವೇದ್ಯವಾಗಿ ಅರ್ಪಿಸುವುದು ವಾಡಿಕೆಯಲ್ಲಿದೆ.ಗಣಪತಿ ಹಬ್ಬದಂದು ಬಪ್ಪನಿಗೆ 21 ಮೋದಕಗಳನ್ನು ಅರ್ಪಿಸುವುದು ಪ್ರತೀತಿ.

ಮೋದಕವನ್ನು ವಿವಿಧ ರೀತಿ ತಯಾರಿಸುತ್ತಾರೆ,ಹಿಂದೂ ಪುರಾಣಗಳ ಪ್ರಕಾರ ಈ ಗಣೇಶ ಹಬ್ಬಕ್ಕೆ ಬಹಳ ದೊಡ್ಡ ಇತಿಹಾಸವೇ ಇದೆ. ಗಣೇಶ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ದೇವರು. ಮೋದಕ ಅತ್ಯಂತ ಪ್ರಿಯವಾದ ತಿನಿಸು. ಈ ತಿಂಡಿಯನ್ನು ಅರ್ಪಿಸಿದರೆ ಗಣೇಶ ಬೇಗ ಒಲಿಯುತ್ತಾನೆ ಎಂಬ ನಂಬಿಕೆ ಇದೆ. ಇಂದು ಗೌರಿ-ಗಣೇಶನನ್ನು ಬರಮಾಡಿಕೊಳ್ಳಲು ಎಲ್ಲೆಡೆ ಸಕಲ ತಯಾರಿಗಳು ನಡೆಯುತ್ತಿದ್ದು, ಮೋದಕವಿಲ್ಲದೆ ಹಬ್ಬವೇ ಅಪೂರ್ಣ ಎಂದು ಹೇಳಬಹುದು.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮೋದಕಗಳು ಲಭ್ಯವಿದ್ದರೂ, ಮನೆಯಲ್ಲಿ ತಯಾರಿಸಿದ ಮೋದಕದ ರುಚಿಯೇ ಬೇರೆ. ಈ ವಿಶೇಷ ಖಾದ್ಯವು ಗಣೇಶನಿಗೆ ತುಂಬಾ ಇಷ್ಟವಾದದ್ದು ಎಂದು ನಂಬಲಾಗಿದೆ.ಇಂದು ಮೋದಕ ಮಾಡುವುದು ಹೇಗೆಂದು ತಿಳಿಸುವುದರ ಜೊತೆಗೆ, ಮೋದಕ ಗರಿಗರಿಯಾಗಿ, ರುಚಿಯಾಗಿ, ಡಿಫರೆಂಟ್ ಆಗಿ ಬರಲು ಯಾವ ಪದಾರ್ಥ ಸೇರಿಸಬೇಕು? ಎಂದು ನೋಡೋಣ.
ಬೇಕಾಗುವ ಪದಾರ್ಥಗಳು
ಒಂದು ಕಪ್ ಮೈದಾ ಹಿಟ್ಟು
ಒಂದು ಕಪ್ ಗೋಧಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ
2 ಚಮಚ ತುಪ್ಪ
ಒಂದೂವರೆ ಕಪ್ ತೆಂಗಿನ ತುರಿ
ಒಂದು ಕಪ್ ಚೆನ್ನಾಗಿ ಹುಡಿ ಮಾಡಿದ ಬೆಲ್ಲ
ಗರಿಗರಿಯಾದ ಮೋದಕ ಮಾಡುವ ವಿಧಾನ
ಒಂದು ಪಾತ್ರೆಗೆ ಮೈದಾ ಹಿಟ್ಟು, ಗೋಧಿ ಹಿಟ್ಟು, ಸ್ವಲ್ಪ ಸಕ್ಕರೆ ಮತ್ತು ಉಪ್ಪು ಹಾಕಿ. ಇದಕ್ಕೆ ಎರಡು ಚಮಚ ಬಿಸಿ ಮಾಡಿದ ತುಪ್ಪ ಸೇರಿಸಿ, ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸುಮಾರು 14-15 ನಿಮಿಷ ಹಾಗೆಯೇ ಬಿಡಿ.
ಒಂದು ಬಾಣಲೆಯಲ್ಲಿ ಒಂದುವರೆ ಕಪ್ ತೆಂಗಿನ ತುರಿ ಮತ್ತು ಒಂದು ಕಪ್ ನುಣ್ಣಗೆ ಪುಡಿ ಮಾಡಿದ ಬೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಂಕಿಯ ಮೇಲೆ ಬೆಲ್ಲ ಕರಗಲು ಶುರುವಾದಾಗ, ಬಾಣಲೆಯನ್ನು ಕೆಳಗಿಳಿಸಿ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ, ನಿಮ್ಮಿಷ್ಟದ ಡ್ರೈ ಫ್ರೂಟ್ಸ್ ಮತ್ತು ಸ್ವಲ್ಪ ತುಪ್ಪ ಸೇರಿಸಿ ಮಿಶ್ರಣ ಮಾಡಿ.
ತಯಾರಿಸಿದ ಹಿಟ್ಟನ್ನು ತೆಗೆದುಕೊಂಡು ಅದನ್ನು ಸಣ್ಣ ಉಂಡೆಗಳಾಗಿ ಮಾಡಿ. ಪ್ರತಿ ಉಂಡೆಯನ್ನು ಮೈದಾ ಹಿಟ್ಟಿನಲ್ಲಿ ಅದ್ದಿ, ಚಪಾತಿಯಂತೆ ಲಟ್ಟಿಸಿ. ಈ ಲಟ್ಟಿಸಿದ ಹಿಟ್ಟಿನ ಮಧ್ಯದಲ್ಲಿ ತಯಾರಿಸಿಟ್ಟ ಹೂರಣ ಇಟ್ಟು, ಅದನ್ನು ಕೈಯಲ್ಲೇ ತಿರುಗಿಸಿ ಮೋದಕದ ಆಕಾರಕ್ಕೆ ತನ್ನಿ.
ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಸರಿಯಾಗಿ ಕಾದ ನಂತರ, ತಯಾರಿಸಿದ ಮೋದಕಗಳನ್ನು ಎಣ್ಣೆಗೆ ಹಾಕಿ. ಮೋದಕಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ ಎಣ್ಣೆಯಿಂದ ತೆಗೆದು ಇಡಿ. ಈಗ ರುಚಿಯಾದ ಮೋದಕಗಳು ಸಿದ್ಧ.
ಕೇವಲ ₹5 ಸಾವಿರ ಹೂಡಿಕೆ ಮಾಡಿ; 3 ವರ್ಷದಲ್ಲಿ ಲಕ್ಷಾಧಿಪತಿಯಾಗಿ! ಇಲ್ಲಿದೆ ಪೋಸ್ಟ್ ಆಫೀಸ್ ಸೂಪರ್ ಯೋಜನೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


