ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪಿಆರ್ಕೆ ಫ್ಯಾನ್ಡಮ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಕುರಿತಾಗಿ, ಕನ್ನಡ ಚಿತ್ರರಂಗದ ಸುದ್ದಿಗಳ ಕುರಿತಾಗಿ ಹಾಗೂ ಕಲಾವಿದರು ಮತ್ತು ಅಭಿಮಾನಿಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಅಪ್ಲಿಕೇಶನ್ ತಯಾರಿಸಲ್ಪಟ್ಟಿದ್ದು, ಇದರ ಲಾಂಚ್ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅತಿಥಿಯಾಗಿ ಆಗಮಿಸಿದ್ದರು.
ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಉನೀತ್ ರಾಜ್ಕುಮಾರ್ ಪುನೀತ್ ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ ಮಾಡಿದ್ದನ್ನು ಮತ್ತೊಮ್ಮೆ ನೆನೆದರು. ಅಲ್ಲದೇ ಅಶ್ವಿನಿ ಪುನೀತ್ ರಾಜ್ಕುಮಾರ್ಗೂ ಸಹ ರಾಜಕೀಯಕ್ಕೆ ಆಹ್ವಾನಿಸಿದ್ದನ್ನು ಬಿಚ್ಚಿಟ್ಟರು.
ದೇವರು ನಮಗೆ ವರನೂ ಕೊಡುವುದಿಲ್ಲ, ಶಾಪನೂ ಕೊಡುವುದಿಲ್ಲ, ಅವಕಾಶ ಮಾತ್ರ ಕೊಡುತ್ತಾನೆ, ಆ ಅವಕಾಶದಲ್ಲಿ ಅರ್ಥಪೂರ್ಣವಾಗಿ ಅಪ್ಪು ಅವರು ಬದುಕಿದರು ಎಂದು ಹೊಗಳಿದ ಡಿಕೆ ಶಿವಕುಮಾರ್ ಸಾವು ಯಾರ ಕೈನಲ್ಲೂ ಇಲ್ಲ ಎಂದರು. ಅಪ್ಪುಗೂ ನನಗೂ 15 ವರ್ಷದ ಪರಿಚಯ. ಇಬ್ಬರೂ ಅಕ್ಕ ಪಕ್ಕ ಮನೆಯಲ್ಲಿದ್ದೆವು, ಒಟ್ಟಿಗೆ ಜಿಮ್ಗೆ ಹೋಗುತ್ತಿದ್ದೆವು ಎಂದ ಡಿಕೆ ಶಿವಕುಮಾರ್ ಆತನ ಕೈನಲ್ಲಿ ಏನೂ ಇರಲಿಲ್ಲ, ಕೊನೆ ಕ್ಷಣದಲ್ಲಿ ಧರ್ಮಪತ್ನಿ ಜತೆ ಕಾಲ ಕಳೆದು ಹೋದರು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕೊಡುಗೆ ಕೊಟ್ಟು ಹೋದರು ಎಂದರು.
ಇನ್ನು ಅಪ್ಪುಗೆ ರಾಜಕೀಯಕ್ಕೆ ಬಾರಪ್ಪ ಎಂದು ಹಲವಾರು ಬಾರಿ ಚಾಕೋಲೇಟ್ ಕೊಟ್ಟೆ ಏನೇನೋ ಮಾಡಿದೆ, ಆದರೆ ಆ ಚಾಕೋಲೇಟ್ ಯಾವುದಕ್ಕೂ ಒಪ್ಪಲಿಲ್ಲ ಅವರು ಎಂದ ಡಿಕೆ ಶಿವಕುಮಾರ್ ಅಶ್ವಿನಿಗೂ ರಾಜಕೀಯಕ್ಕೆ ಬಾರಮ್ಮ ಎಂದು ಆಹ್ವಾನ ಕೊಟ್ಟೆ, ಆದರೆ ಆಕೆ ಸಹ ಇಲ್ಲ ಅಣ್ಣ ನಮ್ಮ ಯಜಮಾನರು ಯಾವ ಹೆಜ್ಜೆ ಇಟ್ಟರೋ, ನಮ್ಮ ಕುಟುಂಬ ಯಾವ ಹೆಜ್ಜೆ ಇಟ್ಟಿತೋ ಅದೇ ರೀತಿ ನಾನೂ ಸಹ ಸಾಗುತ್ತೇನೆ ಎಂದರು, ಈ ವಿಷಯವನ್ನು ನಾನು ಎಲ್ಲಿಯೂ ಹೇಳಿಲ್ಲ, ಇಲ್ಲಿ ಹೇಳುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನಾಯಕತ್ವ ಬದಲಾವಣೆ ಹೇಳಿಕೆಗೆ ನಾನು ಈಗಲೂ ಬದ್ಧ ಎಂದ ಯತೀಂದ್ರ ಸಿದ್ದರಾಮಯ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


