Thursday, September 3, 2026
spot_img
More
    spot_img
    HomeEntertainmentಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ಚಾಪ್ಟರ್‌ 1 ಬಿಡುಗಡೆ ದಿನಾಂಕ ಪ್ರಕಟ: ಬಿಡುಗಡೆಯಾಗಿ ಒಂದು ತಿಂಗಳು ಕೂಡ...

    ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ಚಾಪ್ಟರ್‌ 1 ಬಿಡುಗಡೆ ದಿನಾಂಕ ಪ್ರಕಟ: ಬಿಡುಗಡೆಯಾಗಿ ಒಂದು ತಿಂಗಳು ಕೂಡ ಆಗಲ್ವಲ್ಲ ಗುರೂ!

    ರಿಷಬ್‌ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಎ ಲೆಜೆಂಡ್‌ ಚಾಪ್ಟರ್ 1 ಇದೇ ತಿಂಗಳ 2ರಂದು ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಿತ್ತು.

    Advertisement

    ದಸರಾ ಪ್ರಯುಕ್ತ ಇದ್ದ ಸಾಲು ಸಾಲು ರಜೆಗಳನ್ನು ಲಾಭದಾಯಕವಾಗಿ ಗುರಿಯಾಗಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಿದ್ದ ಹೊಂಬಾಳೆ ಫಿಲ್ಮ್ಸ್‌ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ಕಲೆಕ್ಷನ್‌ ಮಾಡಿತ್ತು.

    2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ವೀಕ್ಷಿಸಿದ್ದ ಸಿನಿ ರಸಿಕರು ಹಾಗೂ ಪ್ರೇಕ್ಷಕ ಮಹಾಪ್ರಭುಗಳು ಈ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ನುಗ್ಗಿದ್ದರು.

    ಹೀಗೆ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಕಾಂತಾರ ಚಾಪ್ಟರ್‌ 1 ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿದ್ದು, ಇಂದು ( ಅಕ್ಟೋಬರ್‌ 27 ) 26ನೇ ದಿನದ ಪ್ರದರ್ಶನವನ್ನು ಕಾಣುತ್ತಿದ್ದು, ಹೀಗಿರುವಾಗಲೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

    ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಇದೇ ಅಕ್ಟೋಬರ್‌ 31ರಂದು ಕಾಂತಾರ ಚಾಪ್ಟರ್‌ 1 ಸ್ಟ್ರೀಮ್‌ ಆಗಲಿದ್ದು, ಅಲ್ಲಿಗೆ 29 ದಿನಗಳ ಥಿಯೇಟ್ರಿಕಲ್‌ ರನ್‌ ಬಳಿಕ ಕಾಂತಾರ ಸಣ್ಣ ಪರದೆಯಲ್ಲಿ ನೋಡ ಸಿಗಲಿದೆ.

    ಹೀಗೆ ಬಿಡುಗಡೆಯಾದ ತಿಂಗಳೇ ಕಾಂತಾರ ಒಟಿಟಿಗೆ ಬರುತ್ತಿದ್ದು, ನೆಟ್ಟಿಗರು ತೀರ ನಿರಾಸೆ ಹೊರಹಾಕಿದ್ದಾರೆ. ಇಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವ ಅಗತ್ಯವಿತ್ತಾ? ಚಿತ್ರಮಂದಿರಗಳಲ್ಲಿ ಇನ್ನೂ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಈ ನಡೆ ಬೇಕಿತ್ತಾ ಎಂದು ಬೇಸರ ಹೊರಹಾಕಿದ್ದಾರೆ.

    ಕೂದಲು ಉದುರುವಿಕೆ ಸಮಸ್ಯೆಗೆ ತೈವಾನ್‌ ವಿಶ್ವವಿದ್ಯಾಲಯದಿಂದ ಮುಕ್ತಿ; 30 ದಿನಗಳಲ್ಲಿ ಕೂದಲು ಹುಟ್ಟುವ ಸೀರಮ್‌ ಆವಿಷ್ಕಾರ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading