Thursday, March 26, 2026
spot_img
More
    spot_img
    HomeInternationalಸತ್ತ ತಾಯಿ ಹೆಣವನ್ನು ಮನೆಯಲ್ಲಿಟ್ಟುಕೊಂಡೇ ತಾಯಿ ವೇಷ ಧರಿಸಿ ಪಿಂಚಣಿ ಹಣ ಪಡೆದ ಮಗ ಸಿಕ್ಕಿಬಿದ್ದದ್ದೇಗೆ?

    ಸತ್ತ ತಾಯಿ ಹೆಣವನ್ನು ಮನೆಯಲ್ಲಿಟ್ಟುಕೊಂಡೇ ತಾಯಿ ವೇಷ ಧರಿಸಿ ಪಿಂಚಣಿ ಹಣ ಪಡೆದ ಮಗ ಸಿಕ್ಕಿಬಿದ್ದದ್ದೇಗೆ?

    ಹೆತ್ತ ತಾಯಿ ದೇವರಿಗೆ ಸಮ ಎಂಬ ಮಾತಿದೆ. ಆದರೆ ದುಡ್ಡೇ ದೊಡ್ಡಪ್ಪ, ದುಡ್ಡೇ ಗಾಡು ಎನ್ನುವ ಜನರಿಗೆ ಸಂಬಂಧಗಳ ಮಹತ್ವ ಮುಖ್ಯವಾಗುವುದಿಲ್ಲ ಎನ್ನುವುದಕ್ಕೆ ತನ್ನದೇ ಕುಟುಂಬ ಸದಸ್ಯರನ್ನು ದುಡ್ಡಿಗಾಗಿ ಹತ್ಯೆ ಮಾಡಿರುವ ಹಲವು ಘಟನೆಗಳೇ ಸಾಕ್ಷಿ.

    ಇಲ್ಲೋರ್ವ ದುಡ್ಡಿಗಾಗಿ ತನ್ನ ತಾಯಿಯ ಸಾವನ್ನೇ ಮುಚ್ಚಿಟ್ಟು ಬರೋಬ್ಬರಿ 3 ವರ್ಷ ಜೀವನ ಸಾಗಿಸಿದ್ದು, ಆಕೆಯ ಸಾವಿಗೆ ಕಾರಣವೇನೆಂಬುದು ಮರಣೋತ್ತರ ಪರೀಕ್ಷೆಯಲ್ಲಿ ಹೊರಬರಬೇಕಿದೆ.

    ಹೌದು, ಉತ್ತರ ಇಟಲಿಯ ಮಂಟುವಾ ಬಳಿಯ ಬೊರ್ಗೊ ವರ್ಜಿಲಿಯೊದ 56 ವರ್ಷ ವಯಸ್ಸಿನ ನಿವಾಸಿಯೋರ್ವ ತನ್ನ 85 ವರ್ಷ ವಯಸ್ಸಿನ ತಾಯಿಯ ವೇಷ ಧರಿಸಿ ಪಿಂಚಣಿ ಹಣ ಪಡೆಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

    2022ರಲ್ಲಿಯೇ ಮೃತಪಟ್ಟ ತನ್ನ ತಾಯಿಯ ಶವವನ್ನು ಮನೆಯ ಲಾಂಡ್ರಿ ಕೋಣೆಯಲ್ಲಿಟ್ಟುಕೊಂಡು ವಿಷಯವನ್ನು ಯಾರಿಗೂ ತಿಳಿಸದೇ ಪಿಂಚಣಿ ಹಣವನ್ನು ಪಡೆದುಕೊಂಡಿದ್ದಾನೆ. ಆದರೆ ಇತ್ತೀಚೆಗೆ ಆಕೆಯ ಗುರುತಿನ ಚೀಟಿಯ ಅವಧಿ ಮೀರಿದ ಕಾರಣ ಮತ್ತೆ ಗುರುತಿನ ಚೀಟಿ ಸಕ್ರಿಯಗೊಳಿಸಲು ಆತ ತನ್ನ ತಾಯಿಯ ಹಾಗೆ ವೇಷ ಧರಿಸಿ ಕಚೇರಿಗೆ ತೆರಳಿದ್ದಾನೆ.

    ತನ್ನ ತಾಯಿಗೆ ಹೋಲುವ ವಿಗ್‌ ಧರಿಸಿದ್ದ ಈತ ತಾಯಿಯ ಹಾಗೆ ಉಗುರುಗಳಿಗೆ ಬಣ್ಣ, ಲಿಪ್‌ಸ್ಟಿಕ್‌ ಹಚ್ಚಿಕೊಂಡು ತೆರಳಿದ್ದ. ಆದರೆ ಸಿಬ್ಬಂದಿಯೊಬ್ಬರಿಗೆ ಅನುಮಾನ ಹುಟ್ಟಿ ಮೇಲಧಿಕಾರಿಗಳಿಗೆ ತಿಳಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯ ಕುತ್ತಿಗೆ ಭಾಗ ಅನುಮಾನ ಹುಟ್ಟಿಸಿದ್ದು, ಆತನ ಚರ್ಮ 85 ವರ್ಷದ ಮಹಿಳೆಯ ಹಾಗೆ ಇಲ್ಲದ ಕಾರಣ ಅನುಮಾನಗೊಂಡು ಪರಿಶೀಲಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಹಾಗೂ ಮನೆಗೆ ಹೋಗಿ ಪರಿಶೀಲನೆ ನಡೆಸಿದಾ ಲಾಂಡ್ರಿ ಕೋಣೆಯಲ್ಲಿ ತಾಯಿಯ ಶವವನ್ನು ಬಚ್ಚಿಟ್ಟಿದ್ದು ಕಂಡುಬಂದಿದೆ.

    ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದ ಪತ್ನಿ; ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading