Monday, November 2, 2026
spot_img
More
    spot_img
    HomeLatest newsಕಠಿಣವಾಗಲಿದೆ ಡಿಜಿಟಲ್ ಕಟೆಂಟ್ ನಿಯಮ, ಸಾಮಾಜಿಕ ಜಾಲತಾಣಕ್ಕೂ ಅನ್ವಯ

    ಕಠಿಣವಾಗಲಿದೆ ಡಿಜಿಟಲ್ ಕಟೆಂಟ್ ನಿಯಮ, ಸಾಮಾಜಿಕ ಜಾಲತಾಣಕ್ಕೂ ಅನ್ವಯ

    ಭಾರತದ ಡಿಜಿಟಲ್ ವ್ಯವಸ್ಥೆ ಅತಿ ವೇಗವಾಗಿ ಬೆಳೆಯುತ್ತಿದೆ. ಆದರೆ ಡಿಜಿಟಲ್ ಕಟೆಂಟ್‌ಗಳಿಗೆ ಕಡಿವಾಣ ಹಾಕುವ ನಿಯಮಗಳು ಕಠಿಣವಾಗಿಲ್ಲ. ಆದ್ದರಿಂದ ಈಗ ಕೇಂದ್ರ ಸರ್ಕಾರ ಡಿಜಿಟಲ್ ಕಟೆಂಟ್ ನಿಯಮಗಳನ್ನು ಕಠಿಣಗೊಳಿಸಲು ಮುಂದಾಗಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ನೀಡಿದೆ.

    ಆನ್‌ಲೈನ್ ಸುದ್ದಿ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಇನ್‌ಫ್ಲುಯೆನ್ಸರ್‌ಗಳು ಮತ್ತು ಸಾಮಾನ್ಯ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಒಳಗೊಳ್ಳುವಂತೆ ಹೊಸ ಡಿಜಿಟಲ್ ಮೀಡಿಯಾ ನಿಯಮಾವಳಿಯನ್ನು ತಯಾರಿಸುತ್ತಿದೆ ಎಂದು ತಿಳಿಸಿದೆ.

    ಪ್ರಸ್ತಾವಿತ ಡಿಜಿಟಲ್ ಕಟೆಂಟ್ ಸುಧಾರಣೆ ಸುಧಾರಣೆಯು ಅಶ್ಲೀಲ ಡಿಜಿಟಲ್ ವಿಷಯಗಳಿಗೆ ಔಪಚಾರಿಕ ವ್ಯಾಖ್ಯಾನವನ್ನು ನೀಡುತ್ತದೆ ಮತ್ತು ಆನ್‌ಲೈನ್ ಜಗತ್ತನ್ನು ನಿಯಂತ್ರಿಸುವ ದೀರ್ಘಕಾಲೀನ ಕಾರ್ಯಕ್ರಮ ಸುಧಾರಣಾ ನೀತಿಯನ್ನು ರೂಪಿಸಲಾಗುತ್ತದೆ. ನವೆಂಬರ್ 20ರಂದು ಈ ಕುರಿತು ಸ0ಚಿವಾಲಯ ಅಫಿಡವಿಟ್‌ ಸಲ್ಲಿಕೆ ಮಾಡಿದೆ.

    ಪ್ರಸ್ತುತದ ಐಟಿ ನಿಯಮಗಳು 2021 ಹಾಗೆ ಉಳಿಯಲಿದೆ. ಬಾಂಬೆ ಹೈಕೋರ್ಟ್ ಈ ಮೊದಲು ನಿಯಮ 9(1) ಮತ್ತು 9(3) ಅನ್ನು ಸಂವಿಧಾನಾತೀತವೆಂದು ಸ್ಥಗಿತಗೊಳಿಸಿತ್ತು, ಆದರೂ ಪ್ರಕಾಶಕರು ಇನ್ನೂ ಸ್ವಯಂ-ನಿಯಂತ್ರಣ ಸಂಸ್ಥೆಗಳನ್ನು ರಚಿಸಿ, ಸಚಿವಾಲಯದ ಆದೇಶಗಳನ್ನು ಪಾಲಿಸುತ್ತಲೇ ಬಂದಿದ್ದಾರೆಂದು ತಿಳಿಸಲಾಗಿದೆ.

    ಐಟಿ ನಿಯಮಗಳ ಭಾಗ IIIಗೆ ಸಂವಿಧಾನದ ಅನುಚ್ಛೇದ 19ರ ರಕ್ಷಣೆಗೆ ತಕ್ಕಂತೆ ಕಾನೂನು ಪುನರ್ವಿಮರ್ಶೆ ಅಗತ್ಯವೆಂದು ವಾದಿಸಿರುವ ಸಚಿವಾಲಯ, ಅಶ್ಲೀಲತೆಗೆ ಸಂಬಂಧಿಸಿದ ಮಾರ್ಗಸೂಚಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಅನ್ನೇ ಮುಖ್ಯ ಕಾನೂನು ಆಧಾರವನ್ನಾಗಿ ಮಾಡಿಕೊಂಡಿದೆ.

    ಈ ಸೆಕ್ಷನ್ ಅಶ್ಲೀಲ ಎಲೆಕ್ಟ್ರಾನಿಕ್ ವಿಷಯವನ್ನು ಪ್ರಕಟಿಸುವ ಅಥವಾ ಕಳುಹಿಸುವುದನ್ನು ಅಪರಾಧವೆಂದು ಘೋಷಿಸಿದ್ದು, ಮೊದಲ ಬಾರಿಗೆ ತಪ್ಪು ಮಾಡಿದರೆ ಗರಿಷ್ಠ 5 ಲಕ್ಷ ರೂ. ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತದೆ. ಈ ವರ್ಷದ ಆರಂಭದಲ್ಲಿ ನ್ಯಾ. ಸೂರ್ಯ ಕಾಂತ್ ನೇತೃತ್ವದ ಪೀಠವು ಸಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸದೆ ನೈತಿಕವಾಗಿ ಆಕ್ಷೇಪಾರ್ಹ ಡಿಜಿಟಲ್ ವಿಷಯವನ್ನು ನಿಯಂತ್ರಿಸುವ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

    ಆಗಸ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದ ಸಮಯದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಮಾರ್ಗಸೂಚಿಗಳು ಪರಸ್ಪರ ವಿರೋಧಿ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಲಿವೆ ಮತ್ತು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್‌ನೊಂದಿಗೆ ಸಮಾಲೋಚನೆ ನಡೆಸಿ ರಚಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು.

    ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಸುದ್ದಿ: ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ, 2021ರ ನಿಯಮಗಳಲ್ಲಿರುವ ವಿಷಯ ವರ್ಗೀಕರಣ ಮತ್ತು ಮಕ್ಕಳ ರಕ್ಷಣಾ ಚೌಕಟ್ಟನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

    ಬಳಕೆದಾರರ ವಿಷಯ ಮತ್ತು ಡಿಜಿಟಲ್ ಸುದ್ದಿ ವಿಭಾಗಗಳ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದ್ದು, ಡಿಜಿಟಲ್ ಸುದ್ದಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಪ್ರೋಗ್ರಾಂ ಕೋಡ್‌ನ ಮಾನದಂಡಗಳನ್ನೇ ಮುಂದಿಟ್ಟುಕೊಂಡು ಹೊಸ ನಿಯಮ ರಚಿಸುವ ಸಾಧ್ಯತೆ ಇದೆ.

    ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಮತ್ತು ಡಿಜಿಟಲ್ ಸುದ್ದಿಯನ್ನು ನಿಯಂತ್ರಿಸುವುದು ಸಚಿವಾಲಯದ ಮೊದಲ ಪ್ರಯತ್ನವಲ್ಲ. 2023 ಮತ್ತು ರಹಸ್ಯವಾಗಿ ತಯಾರಾದ 2024ರ ಬ್ರಾಡ್‌ಕಾಸ್ಟಿಂಗ್ ಸರ್ವೀಸಸ್ (ರೆಗ್ಯುಲೇಶನ್) ಬಿಲ್‌ನ ಕರಡು ಮೂಲಕ ಮೇಲ್ವಿಚಾರಣೆಗೆ ಪ್ರಯತ್ನಿಸಲಾಗಿತ್ತು.

    ಪ್ರೆಸ್ ಕೌನ್ಸಿಲ್ ಅನ್ನು ನಿಗಾವಹಿಸುವ ಸಂಸ್ಥೆಯನ್ನಾಗಿಸುವ ಚಿಂತನೆಯೂ  ಇದೆ. ಜೊತೆಗೆ, ಐಟಿ ಕಾಯ್ದೆಯ ಸೆಕ್ಷನ್ 79 ಅಡಿಯಲ್ಲಿ ಅಂತರ್-ಸಚಿವಾಲಯ ಸಮಿತಿಯ ಮೂಲಕ ಸ್ಟ್ರೀಮಿಂಗ್ ಸೈಟ್‌ಗಳು, ಅಪ್ಲಿಕೇಶನ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರವುಗೊಳಿಸುವ ಆದೇಶಗಳನ್ನು ಸಚಿವಾಲಯ ನೀಡುತ್ತಲೇ ಬಂದಿದೆ.

    ಅಶ್ಲೀಲತೆ, ಎಐ ಮತ್ತು ಇತರ ವಿಷಯಗಳನ್ನು ಒಂದೇ ಸುಧಾರಣೆಯಲ್ಲಿ ಒಟ್ಟುಗೂಡಿಸಿರುವ ಸರ್ಕಾರ ದೇಶದ ಡಿಜಿಟಲ್ ಪರಿಸ್ಥಿತಿ ವ್ಯವಸ್ಥೆಯ ಮೇಲೆ ಹೆಚ್ಚು ನಿಯಂತ್ರಣದ ಮೂಲಕ ಹಿಡಿತ ಸಾಧಿಸಲು ಸಿದ್ಧವಾಗುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search