ಕಳೆದ ವರ್ಷ ಚಾಂಪಿಯನ್ ಆಗಿ ಚೊಚ್ಚಲ ವನಿತೆಯರ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಎತ್ತಿಹಿಡಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನು ಮುಂಬರುವ ಟೂರ್ನಿಗಾಗಿ ಬಿಸಿಸಿಐ ಮಿನಿ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದು, ಆಟಗಾರ್ತಿಯರ ಹರಾಜು ಇಂದು ನಡೆದಿದೆ.
ಹರಾಜಿಗೂ ಮುನ್ನ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಹಾಗೂ ಶ್ರೇಯಾಂಕಾ ಪಾಟೀಲ್ ಈ ನಾಲ್ವರನ್ನು ರಿಟೈನ್ ಮಾಡಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.15 ಕೋಟಿ ಬಾಕಿ ಹಣದೊಂದಿಗೆ ಹರಾಜಿಗೆ ಪ್ರವೇಶ ಮಾಡಿತ್ತು. ಇಂದಿನ ಹರಾಜಿನಲ್ಲಿ ಒಟ್ಟು 12 ಆಟಗಾರ್ತಿಯರನ್ನು ಖರೀದಿಸಿ ಆರ್‌ಸಿಬಿ ಒಟ್ಟು 16 ಆಟಗಾರ್ತಿಯರ ತಂಡವನ್ನು ಸಿದ್ಧಪಡಿಸಿದೆ. ಇಲ್ಲಿಗೆ ಫ್ರಾಂಚೈಸಿ ಬಳಿಯಿದ್ದ ಎಲ್ಲ ಹಣ ಖಾಲಿಯಾಗಿದೆ.
ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡ:
ರಿಟೈನ್ ಆದ ಆಟಗಾರ್ತಿಯರು: ಸ್ಮೃತಿ ಮಂದಾನ – 3.50 ಕೋಟಿ, ರಿಚಾ ಘೋಷ – 2.75 ಕೋಟಿ, ಎಲ್ಲಿಸ್ ಪೆರ್ರಿ – 2.00 ಕೋಟಿ, ಶ್ರೇಯಾಂಕಾ ಪಾಟೀಲ – 60 ಲಕ್ಷ.
ಹರಾಜಿನಲ್ಲಿ ತಂಡ ಸೇರಿದ ಆಟಗಾರ್ತಿಯರು: ಜಾರ್ಜಿಯಾ ವಾಲ್ – 60 ಲಕ್ಷ, ನದೀನ್ ಡಿ ಕ್ಲರ್ಕ್ – 65 ಲಕ್ಷ, ರಾಧಾ ಯಾದವ – 65 ಲಕ್ಷ, ಲಾರೆನ್ ಬೆಲ್ – 90 ಲಕ್ಷ, ಲಿಂಡ್ಸೆ ಸ್ಮಿತ್ – 30 ಲಕ್ಷ, ಪ್ರೇಮಾ ರಾವತ್ – 20 ಲಕ್ಷ (RTM), ಅರುಂಧತಿ ರೆಡ್ಡಿ – 75 ಲಕ್ಷ, ಪೂಜಾ ವಸ್ತ್ರಾಕರ್ – 85 ಲಕ್ಷ, ಗ್ರೇಸ್ ಹ್ಯಾರಿಸ್ – 75 ಲಕ್ಷ, ಗೌತಮಿ ನಾಯಕ – 10 ಲಕ್ಷ, ಪ್ರತ್ಯೂಷಾ ಕುಮಾರ್ – 10 ಲಕ್ಷ, ಡಿ. ಹೇಮಲತಾ – 30 ಲಕ್ಷ
ರಾಜ್ಯದ ಶಾಲೆಗಳಲ್ಲಿ ವಾಟರ್ ಬೆಲ್; ಏನಿದು ಹೊಸ ನಿಯಮ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


