Thursday, November 5, 2026
spot_img
More
    spot_img
    HomeSportsCricketಧೋನಿ ಮನೆಯಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಔತಣಕೂಟ; ಕೊಹ್ಲಿಗೆ ಡ್ರೈವರ್ ಆದ ಧೋನಿ

    ಧೋನಿ ಮನೆಯಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಔತಣಕೂಟ; ಕೊಹ್ಲಿಗೆ ಡ್ರೈವರ್ ಆದ ಧೋನಿ

    ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಮೊದಲಿಗೆ ನಡೆದ ಟೆಸ್ಟ್‌ ಸರಣಿಯಲ್ಲಿ ಎಲ್ಲ ಎರಡು ಪಂದ್ಯಗಳನ್ನು ಸೋತು ವೈಟ್‌ವಾಷ್‌ ಮುಖಭಂಗವನ್ನು ಅನುಭವಿಸಿದ್ದು, ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ.

    ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಿದ್ದು, ಮೊದಲ ಪಂದ್ಯ ನಾಡಿದ್ದು ( ನವೆಂಬರ್‌ 30 ) ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈಗಾಗಲೇ ಟೀಮ್‌ ಇಂಡಿಯಾ ಆಟಗಾರರು ಅಭ್ಯಾಸಕ್ಕಾಗಿ ರಾಂಚಿಗೆ ಬಂದಿಳಿದಿದ್ದಾರೆ.

    ಇನ್ನು ರಾಂಚಿಯಲ್ಲಿ ಭಾರತ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ಎಂಎಸ್ ಧೋನಿ ನಿವಾಸವಿದ್ದು, ನಗರಕ್ಕೆ ಕ್ರಿಕೆಟ್‌ ಆಡಲು ಬಂದ ಭಾರತ ತಂಡದ ಆಟಗಾರರನ್ನೆಲ್ಲ ತನ್ನ ಮನೆಗೆ ಆಹ್ವಾನಿಸಿದ ಎಂಎಸ್‌ ಧೋನಿ ಎಲ್ಲರಿಗೂ ಔತಣಕೂಟ ಏರ್ಪಡಿಸಿದ್ದರು.

    ನಿನ್ನೆ ( ನವೆಂಬರ್‌ 27 ) ರಾತ್ರಿ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ತಂಡದ ಹಲವು ಆಟಗಾರರರು ಎಂಎಸ್‌ ಧೋನಿ ಮನೆಗೆ ಆಗಮಿಸಿ ರಾತ್ರಿ ಭೋಜನ ಸವಿದಿದ್ದು, ಈ ಸಂದರ್ಭದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ ಬಿಟ್ಟು ಐದು ವರ್ಷ ಕಳೆದರೂ ಎಂಎಸ್‌ ಧೋನಿ ಈಗಲೂ ಸಹ ತಂಡದ ಆಟಗಾರರನ್ನು ತನ್ನ ಮನೆಗೆ ಆಹ್ವಾನಿಸಿದ್ದು ಕ್ರಿಕೆಟ್‌ ಪ್ರಿಯರಲ್ಲಿ ಸಂತಸವನ್ನುಂಟುಮಾಡಿದ್ದು, ಧೋನಿ ಇತರರಿಗೆ ಮಾದರಿ ಎಂದಿದ್ದಾರೆ.

    ಇನ್ನು ವಿರಾಟ್‌ ಕೊಹ್ಲಿಯ ಫೇವರಿಟ್‌ ಸಹ ಆಟಗಾರ ಹಾಗೂ ನಾಯಕನಾಗಿರುವ ಎಂಎಸ್‌ ಧೋನಿ ಸ್ವತಃ ಕಾರನ್ನು ಚಲಾಯಿಸಿಕೊಂಡು ವಿರಾಟ್‌ ಕೊಹ್ಲಿಯನ್ನು ಹೊಟೇಲ್‌ಗೆ ಬಿಟ್ಟುಬಂದಿದ್ದು, ಕೊಹ್ಲಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

    ರಾಜ್ಯದ ಶಾಲೆಗಳಲ್ಲಿ ವಾಟರ್‌ ಬೆಲ್‌; ಏನಿದು ಹೊಸ ನಿಯಮ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search