Thursday, November 5, 2026
spot_img
More
    spot_img
    HomeStateDistrictದಾವಣಗೆರೆ: ಮಂತ್ರಾಲಯ, ಬೆಂಗಳೂರು ಏರ್‌ಪೋರ್ಟ್‌ಗೆ ಐಷಾರಾಮಿ ಬಸ್, ವೇಳಾಪಟ್ಟಿ, ದರ

    ದಾವಣಗೆರೆ: ಮಂತ್ರಾಲಯ, ಬೆಂಗಳೂರು ಏರ್‌ಪೋರ್ಟ್‌ಗೆ ಐಷಾರಾಮಿ ಬಸ್, ವೇಳಾಪಟ್ಟಿ, ದರ

    ಕೆಎಸ್ಆರ್‌ಟಿಸಿ ದಾವಣಗೆರೆ ಜಿಲ್ಲೆಯ  ಜನರ ಅನುಕೂಲಕ್ಕಾಗಿ ಮಂತ್ರಾಲಯ ಮತ್ತು ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಐಷಾರಾಮಿ ವೋಲ್ವೋ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಜನರ ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

    ಈ ಎರಡು ಐಷಾರಾಮಿ ಬಸ್ ಸೇವೆಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವೇಳಾಪಟ್ಟಿ, ದರದ ಮಾಹಿತಿಯನ್ನು ಕೆಎಸ್ಆರ್‌ಟಿಸಿ ಬಿಡುಗಡೆ ಮಾಡಿದೆ.

    ದಾವಣಗೆರೆ- ಮಂತ್ರಾಲಯ ವೋಲ್ವೋ ಬಸ್; ದಾವಣಗೆರೆ-ಮಂತ್ರಾಲಯ ನಡುವಿನ ವೋಲ್ವೋ ಬಸ್  ಪ್ರತಿದಿನ ರಾತ್ರಿ 9ಕ್ಕೆ ದಾವಣಗೆರೆ ನಿಲ್ದಾಣದಿಂದ ಹೊರಟು ಚಿತ್ರದುರ್ಗ, ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 4ಕ್ಕೆ ಮಂತ್ರಾಲಯ ತಲುಪುತ್ತದೆ.  ಮಂತ್ರಾಲಯದಿಂದ ಬೆಳಗ್ಗೆ 11ಕ್ಕೆ ಹೊರಟು ಸಂಜೆ 6ಕ್ಕೆ ದಾವಣಗೆರೆಗೆ ವಾಪಸಾಗಲಿದೆ.

    ದಾವಣಗೆರೆ-ಮಂತ್ರಾಲಯ ದರ 600 ರೂ., ಚಿತ್ರದುರ್ಗ-ಮಂತ್ರಾಲಯ 547 ರೂ.,ಚಳ್ಳಕೆರೆ-ಮಂತ್ರಾಲಯ 515 ರೂ. ಮತ್ತು ಬಳ್ಳಾರಿ-ಮಂತ್ರಾಲಯ 269 ರೂ.ಗಳು.

    ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕೌಂಟರ್ ಅಥವಾ ವೆಬ್‌ಸೈಟ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದು.

    ದಾವಣಗೆರೆ-ಬೆಂಗಳೂರು ಏರ್‌ಪೋರ್ಟ್: ಕೆಎಸ್ಆರ್‌ಟಿಸಿ ದಾವಣಗೆರೆ- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಐಷಾರಾಮಿ ಫ್ಲೈ ಬಸ್  ಬಸ್ ಸೇವೆ ಆರಂಭಿಸಿದೆ.

    ಕೆಎಸ್‍ಆರ್‌ಟಿಸಿ ದಾವಣಗೆರೆ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೇರ ಫ್ಲೈಬಸ್ ಸೇವೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿಸಿದರು.

    ಈ ಬಸ್ ದಾವಣಗೆರೆಯಿಂದ ಬೆಳಗ್ಗೆ 10 ಗಂಟೆಗೆ ಹೊರಟು ಚಿತ್ರದುರ್ಗ, ತುಮಕೂರು, ದಾಬಸ್‍ಪೇಟೆ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

    ಬಸ್ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 12.45ಕ್ಕೆ ಹೊರಟು ಅದೇ ಮಾರ್ಗವಾಗಿ ಮುಂಜಾನೆ 5.45ಕ್ಕೆ ಹಾಗೂ ಬೆಳಗ್ಗೆ 10 ಗಂಟೆಗೆ ಹೊರಡುವ ಬಸ್ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಬರಲಿದೆ. ಈ ಬಸ್ ಸೇವೆ ಪ್ರತಿನಿತ್ಯ ಇರಲಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತುಮಕೂರು ಬಸ್ ನಿಲ್ದಾಣಕ್ಕೆ ರೂ. 400, ಚಿತ್ರದುರ್ಗಕ್ಕೆ ರೂ. 980 ಹಾಗೂ ದಾವಣಗೆರೆಗೆ 1,250 ರೂ ದರ ನಿಗದಿಪಡಿಸಲಾಗಿದೆ.

    ಈ ಬಸ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚಿತ್ರದುರ್ಗ ಬೈಪಾಸ್ ಮತ್ತು ತುಮಕೂರು ಬೈಪಾಸ್ ಸೇರಿ ಎರಡು ಕಡೆ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನೀಡಲಾಗಿದೆ. ಪ್ರಯಾಣಿಕರು ಕೆಎಸ್ಆರ್‌ಟಿಸಿ ವೆಬ್‌ ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

    ಕೆಎಸ್ಆರ್‌ಟಿಸಿ ವಿವಿಧ ನಗರವನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಸಂಪರ್ಕಿಸಲು ಫ್ಲೈ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ನೇರವಾಗಿ ಏರ್‌ಪೋರ್ಟ್‌ಗೆ ಸಂಚಾರವನ್ನು ನಡೆಸುತ್ತವೆ.

    ಮೊದಲು ಫ್ಲೈ ಬಸ್ ಸೇವೆಯನ್ನು ಬೆಂಗಳೂರು ವಿಮಾನ ನಿಲ್ದಾಣ ಮತ್ತು ಮೈಸೂರು ನಡುವೆ ಪ್ರಾರಂಭಿಸಲಾಗಿತ್ತು. ಈಗ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವು ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

    ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಫ್ಲೈ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಐಷಾರಾಮಿ ವೋಲ್ವೋ ಬಸ್ ಅನ್ನು ಈ ಫ್ಲೈ ಬಸ್ ಸೇವೆಗೆ ಬಳಕೆ ಮಾಡಲಾಗುತ್ತಿದೆ. ಈ ಬಸ್‌ಗಳಲ್ಲಿ ನಂದಿನಿ ಉತ್ಪನ್ನಗಳ ತಿನಿಸುಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search