ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿದ್ದು ಮೊದಲ ದಿನ ಎಲ್ಲೆಡೆ ಅಬ್ಬರಿಸಿತ್ತು.
ಸುದೀಪ್ ಅತ್ಯದ್ಭುತ ನಟನೆ, ಉದಯೋನ್ಮುಖ ನಿರ್ದೇಶಕ ವಿಜಯ್ ಕಾರ್ತಿಕೇಯ ಜಾಣ್ಮೆಯ ನಿರ್ದೇಶನ, ಅಜನೀಶ್ ಲೋಕನಾಥ್ ಭರ್ಜರಿ ಸಂಗೀತ ನಿರ್ದೇಶನ, ಕಲೈಪುಲಿ ಥನು ಅಚ್ಚುಕಟ್ಟಾದ ನಿರ್ಮಾಣಕ್ಕೆ ಸಿನಿ ರಸಿಕ ಒಳ್ಳೆಯ ಅಂಕವನ್ನು ನೀಡಿದ್ದ.
ಇನ್ನು ಚಿತ್ರ ನೋಡಿದ ಪ್ರೇಕ್ಷಕರು ಮೊದಲ ದಿನದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ನೀಡಿದ ಪಾಸಿಟಿವ್ ರಿವ್ಯೂಸ್ ಚಿತ್ರಕ್ಕೆ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತ್ತು. ಪರಿಣಾಮ ನಂತರದ ಪ್ರದರ್ಶನಗಳು ಬಹುತೇಕ ಹೌಸ್‌ಫುಲ್ ಪ್ರದರ್ಶವನ್ನು ಕಂಡವು.
ಹೀಗೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡ ಮ್ಯಾಕ್ಸ್ ಮೊದಲ ದಿನ ದೇಶದಾದ್ಯಂತ 10.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿ ಈ ವರ್ಷ ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎಂಬ ದಾಖಲೆಯನ್ನೂ ಸಹ ಬರೆದಿತ್ತು.
ಎರಡನೇ ದಿನ ಮ್ಯಾಕ್ಸ್ ಕಲೆಕ್ಷನ್‌ನಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಮ್ಯಾಕ್ಸ್ ದೇಶದಾದ್ಯಂತ ಒಟ್ಟು 4.6 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆದರೆ ಮ್ಯಾಕ್ಸ್ ಎರಡನೇ ದಿನ ಗುರುವಾರವಾಗಿದ್ದು ಅಂದು ಯಾವುದೇ ರಜಾದಿನವಿರಲಿಲ್ಲ. ಹೀಗಾಗಿ ವರ್ಕಿಂಗ್ ಡೇ ಎಫೆಕ್ಟ್‌ನಿಂದಾಗಿ ಮ್ಯಾಕ್ಸ್ ಕಲೆಕ್ಷನ್‌ನಲ್ಲಿ ಕುಸಿತ ಕಂಡುಬಂದಿದೆ. ಇನ್ನು ಇಂದೂ ಸಹ ಮ್ಯಾಕ್ಸ್ ಗಳಿಕೆ 5 ಕೋಟಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದ್ದು, ನಾಳೆ ಶನಿವಾರ ಹಾಗೂ ನಾಡಿದ್ದು ಭಾನುವಾರ ಮತ್ತೊಮ್ಮೆ ಮ್ಯಾಕ್ಸ್ ಡಬಲ್ ಡಿಜಿಟ್ ಕಲೆಕ್ಷನ್ ನೋಡುವ ಸಾಧ್ಯತೆಯಿದೆ.
ಮೊದಲ ದಿನ 10.35 ಕೋಟಿ ಹಾಗೂ ಎರಡನೇ ದಿನ 4.6 ಕೋಟಿ ಗಳಿಕೆ ಮಾಡಿರುವ ಮ್ಯಾಕ್ಸ್ ಎರಡು ದಿನಗಳಲ್ಲಿ 14.95 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಈ ವರ್ಷ ಮೊದಲೆರಡು ದಿನಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾವಾಗಿ ಮ್ಯಾಕ್ಸ್ ಉಳಿದುಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


