ನವದೆಹಲಿ: ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಫ್ರಾಂಚೈಸ್ ಕ್ರಿಕೆಟ್ ಲೀಗ್ ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್)ನ 19ನೇ ಆವೃತ್ತಿ ಯಾವಾಗ ಆರಂಭವಾಗಲಿದೆ ಎಂದು ಕಾತರರಾಗಿ ಕಾಯುತ್ತಿದ್ದವರಿಗೆ ಇದೀಗ ಸ್ಪಷ್ಟ ಉತ್ತರ ಸಿಕ್ಕಿದ್ದು, ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ.
ನಿನ್ನೆ (ಜನವರಿ 27) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಟ್ಟು 182 ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ 639.15 ಕೋಟಿ ರೂ. ಗಳೊಂದಿಗೆ ಆಟಗಾರರನ್ನು ಖರೀದಿಸಲಾಗಿದೆ. ಐಪಿಎಲ್ ವೇಳಾಪಟ್ಟಿಯನ್ನು ಪಂದ್ಯಾವಳಿಯಲ್ಲಿನ ಹೂಡಿಕೆದಾರರೊಂದಿಗೆ ಸಮಾಲೋಚಿಸಿ ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುವುದು’’ ಹೇಳಿದರು.
“ಐಪಿಎಲ್ ಸೀಸನ್ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 21 ಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ. ಮತ್ತು ಕೆಲವೇ ದಿನಗಳಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಐಪಿಎಲ್ ನಿಯಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಆದರೆ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡರಿಂದ ಮೂರು ಪಂದ್ಯಗಳು ನಡೆಯಲಿವೆ” ಎಂದೂ ಸಹ ಮಾಹಿತಿ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


