ಜೆಕೆ ಟೈರ್ಸ್(JK Tyres) ಕಂಪನಿ ಅವರ ಕಡೆಯಿಂದ ವಾಹನ ಚಾಲಕರ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಸುಮಾರು 25 ಸಾವಿರ ತನಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.ದೇಶದಲ್ಲಿನ ಭಾರಿ ವಾಹನಗಳನ್ನು ಓಡಿಸುವ ಚಾಲಕರ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ವಿಧ್ಯಭ್ಯಾಸಕ್ಕೆ ಬೇಕಾದ ಸಹಕಾರ ನೀಡುವ ಉದ್ದೇಶದಿಂದ ಜಾರಿಗೆ ತಂದಿದೆ. ಬಡತನದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕಲಿಯಲು ಹಣವಿಲ್ಲದೆ ಶಿಕ್ಷಣ ಮುಂದು ವರ್ಷದ ತೊಂದರೆ ಆಗುವ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು, ಜಿಕೆ ಟಯರ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಕಂಪನಿ ವತಿಯಿಂದ ಶಿಕ್ಷಾ ಸಾರಥಿ ಸ್ಕಾಲರ್ಶಿಪ್(Shiksha Sarathi Scholarship)ವಿವಿಧ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ 25,000 ವರೆಗೆ ಸ್ಕಾಲರ್ಶಿಪ್ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ,ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆಗಳ ವಿವರ, ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣದ ಲಿಂಕ್, ಕೊನೆಯ ದಿನಾಂಕದ ವಿವರ ಸೇರಿದಂತೆ ವಿವಿಧ ಮಾಹಿತಿಯನ್ನು ತಿಳಿಸಲಾಗಿದೆ. ಅರ್ಹರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಸದುಪಯೋಗ ಪಡೆಸಿಕೊಳ್ಳಿ.
ಶಿಕ್ಷಾ ಸಾರಥಿ ಸ್ಕಾಲರ್‌ಶಿಪ್‌ಗೆ ಅರ್ಹತೆಗಳು:
ಅರ್ಜಿದಾರರು ಒಂದು ಬಾರಿ ಮಾತ್ರ ಸ್ಕಾಲರ್‌ಶಿಪ್ ಪಡೆಯಬಹುದು.
ಕೃತಕವಾಗಿ ವಾಹನ ಚಾಲಕರ ಮಕ್ಕಳಿಗೆ ಹೆಚ್ಚಿನ ಆದ್ಯತೆ: ಈ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅರ್ಹತೆ ಇದೆ.
ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಕೆ ಲಿಂಕ್ — https://search.app/ZBeWWUTJzpstK8Ge9
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15 ಫೆಬ್ರವರಿ 2025
ಸ್ಕಾಲರ್‌ಶಿಪ್‌ನ ಮೊತ್ತ:
ತಾಂತ್ರಿಕ ಪದವಿ ವಿದ್ಯಾರ್ಥಿಗಳಿಗೆ: ₹25,000
ತಾಂತ್ರಿಕೇತರ ಪದವಿ ವಿದ್ಯಾರ್ಥಿಗಳಿಗೆ: ₹15,000
ಡಿಪ್ಲೋಮಾ ವಿದ್ಯಾರ್ಥಿಗಳಿಗೆ: ₹15,000
ಸ್ಕಾಲರ್ಶಿಪ್ ಗೆ ಅಗತ್ಯ ದಾಖಲೆಗಳು :
ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
ವಿದ್ಯಾರ್ಥಿಯ ಆಧಾರ್ ಕಾರ್ಡ್,PAN ಕಾರ್ಡ್,
ಕುಟುಂಬದ ಆದಾಯದ ಪುರಾವೆ (Income Tax Return, Salary Slips)
ವಿದ್ಯಾರ್ಥಿಯ ಈ ವರ್ಷ ಪ್ರವೇಶ ಪಡೆದ ಪ್ರಮಾಣ ಪತ್ರ
ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕ ಪಟ್ಟಿ
ವಿದ್ಯಾರ್ಥಿಯ 10 & 12 ನೆಯ ಅಂಕಪಟ್ಟಿ
ಆದಾಯ ಪ್ರಮಾಣ ಪತ್ರ
ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


