Monday, November 9, 2026
spot_img
More
    spot_img
    HomeLatest newsASRB ನೇಮಕಾತಿ 2025: 582 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ – ಅರ್ಜಿ ಪ್ರಕ್ರಿಯೆ, ಅರ್ಹತೆ...

    ASRB ನೇಮಕಾತಿ 2025: 582 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಪ್ರಮುಖ ದಿನಾಂಕಗಳು

    ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ASRB) 2025ನೇ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ, ಇದರಲ್ಲಿ ಕೃಷಿ ಸಂಶೋಧನಾ ಸೇವೆ (ARS), ವಿಷಯ ತಜ್ಞರು (SMS), ಮತ್ತು ಹಿರಿಯ ತಾಂತ್ರಿಕ ಅಧಿಕಾರಿ (STO) ಹುದ್ದೆಗಳಿಗಾಗಿ ಒಟ್ಟು 582 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ, ದಯವಿಟ್ಟು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ. ಈ ಹುದ್ದೆಗಳ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಬಹುದು.

    ನೇಮಕಾತಿ ಸಂಸ್ಥೆ: ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ASRB)

    ಹುದ್ದೆಗಳ ಹೆಸರು: ಕೃಷಿ ಸಂಶೋಧನಾ ಸೇವೆ (ARS), ವಿಷಯ ತಜ್ಞರು (SMS), ಹಿರಿಯ ತಾಂತ್ರಿಕ ಅಧಿಕಾರಿ (STO)

    ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ

    ವೇತನ ಶ್ರೇಣಿ: ASRB ನಿಯಮಗಳ ಪ್ರಕಾರ

    ASRB ನೇಮಕಾತಿ 2025 ವಯಸ್ಸಿನ ಮಿತಿ ಆನ್‌ಲೈನ್ ನೇಮಕಾತಿ

    ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು

    ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

    ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

    ಅಗ್ರಿಕಲ್ಚರಲ್ ರಿಸರ್ಚ್ ಸರ್ವೀಸ್ (ಎಆರ್‌ಎಸ್‌) 458

    ಸಬ್ಜೆಕ್ಟ್‌ ಮ್ಯಾಟರ್ ಸ್ಪೆಷಲಿಸ್ಟ್‌ 41

    ಸೀನಿಯರ್ ಟೆಕ್ನಿಕಲ್ ಆಫೀಸರ್ 83

    ಅರ್ಜಿ ಶುಲ್ಕ

    ಯುಆರ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ: ರೂ. 1000/

    SC/ ST/ ಮಹಿಳೆಯರು/ PwBD/ ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಇಲ್ಲ

    ಪಾವತಿ ವಿಧಾನ : ಡೆಬಿಟ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/UPI ಮೂಲಕ

    ಪ್ರಮುಖ ದಿನಾಂಕಗಳು

    ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 22-04-2025

    ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆ ದಿನಾಂಕ: 21-05-2025 ರ ರಾತ್ರಿ 11-59 ಗಂಟೆವರೆಗೆ.

    ಸಿಬಿಟಿ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ (ಎಆರ್‌ಎಸ್ / ಎಸ್‌ಎಂಎಸ್ ಹುದ್ದೆಗಳಿಗೆ): 2nd, 4th, ಸೆಪ್ಟೆಂಬರ್, 2025

    ಮುಖ್ಯ ಪರೀಕ್ಷೆ ದಿನಾಂಕ (ಎಆರ್‌ಎಸ್ / ಎಸ್‌ಎಂಎಸ್ ಹುದ್ದೆಗಳಿಗೆ): 07-12-2025

    ಅರ್ಹತೆ

    ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ (ಸಂಬಂಧಿತ ವಿಷಯ) ಹೊಂದಿರಬೇಕು.ಅರ್ಜಿ ಸಲ್ಲಿಸಲು ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ / ಅಧಿಸೂಚನೆಗಾಗಿ ಕೃಷಿ ವಿಜ್ಞಾನಿಗಳ ನೇಮಕಾತಿ ಬೋರ್ಡ್‌ ಅಧಿಕೃತ ವೆಬ್‌ಸೈಟ್‌ ವಿಳಾಸ https://asrb.org.in/ ಗೆ ಭೇಟಿ ನೀಡಿರಿ.

    ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆಯಷ್ಟೇ ಲಭ್ಯವಿದ್ದು, ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗದು. ಅರ್ಜಿ ಲಿಂಕ್ ಅನ್ನು ಏಪ್ರಿಲ್ 22, 2025 ರಂದು ಬಿಡುಗಡೆಯಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವಾಗ ಬೇಸಿಕ್ ಮತ್ತು ವೈಯಕ್ತಿಕ ವಿವರಗಳು, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಸ್ನಾತಕೋತ್ತರ ಪದವಿ ಅಂಕಪಟ್ಟಿ, ಪಿಎಚ್‌ಡಿ ಪ್ರಮಾಣಪತ್ರ, ಕಾರ್ಯಾನುಭವದ ದಾಖಲೆಗಳು, ಕೌಶಲ್ಯ ಸಂಬಂಧಿತ ಪ್ರಮಾಣಪತ್ರಗಳು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಸಹಿಯ ಸ್ಕ್ಯಾನ್ ಪ್ರತಿಗಳು ಅಗತ್ಯವಾಗಿವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search