Wednesday, November 4, 2026
spot_img
More
    spot_img
    HomeChampions Trophy 2025ನಮಾಜ್ ಮಾಡಲು ರೂಂ ಮಾಡ್ತಾರೆ ಅದಕ್ಕೆ ರಿಜ್ವಾನ್ ಬೆಸ್ಟ್ ಕ್ಯಾಪ್ಟನ್; ನಗೆಪಾಟಲಿಗೀಡಾದ ಪಾಕ್ ಆಟಗಾರ

    ನಮಾಜ್ ಮಾಡಲು ರೂಂ ಮಾಡ್ತಾರೆ ಅದಕ್ಕೆ ರಿಜ್ವಾನ್ ಬೆಸ್ಟ್ ಕ್ಯಾಪ್ಟನ್; ನಗೆಪಾಟಲಿಗೀಡಾದ ಪಾಕ್ ಆಟಗಾರ

    ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದಿದ್ದು, ಎ ಗುಂಪಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಬಿ ಗುಂಪಿನಿಂದ ಯಾವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ ಎಂಬುದು ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಫಲಿತಾಂಶದ ನಂತರ ತಿಳಿದುಬರಲಿದೆ.

    ಇನ್ನು ಬಿ ಗುಂಪಿನಿಂದ ಇಂಗ್ಲೆಂಡ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಎ ಗುಂಪಿನಿಂದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಹೊರಬಿದ್ದಿವೆ. ಅದರಲ್ಲಿಯೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿರುವ ಪಾಕಿಸ್ತಾನ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿಯೂ ಗೆಲುವು ಸಾಧಿಸದೇ ಟೂರ್ನಿಯಿಂದ ಹೊರಬಿದ್ದಿರುವುದು ಭಾರೀ ಮುಖಭಂಗವನ್ನುಂಟುಮಾಡಿದೆ.

    ಹೀಗೆ ಒಂದೆಡೆ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದು ಟೀಕೆಗೊಳಗಾಗಿರುವ ಪಾಕ್ ತಂಡದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಪಾಡ್‌ಕಾಸ್ಟ್‌ವೊಂದರಲ್ಲಿ ನಿಮ್ಮ ತಂಡದ ಉತ್ತಮ ಲೀಡರ್ ಯಾರು ಎಂಬ ಪ್ರಶ್ನೆ ಎದುರಾಗಿದೆ.

    ಈ ಪ್ರಶ್ನೆಗೆ ಉತ್ತರಿಸಿದ ಇಮಾಮ್ ಉಲ್ ಹಕ್ ಮೊಹಮ್ಮದ್ ರಿಜ್ವಾನ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವನ್ನು ನೀಡಿದ ಇಮಾಮ್ ಉಲ್ ಹಕ್ ರಿಜ್ವಾನ್ ಎಲ್ಲರನ್ನೂ ನಮಾಜ್‌ಗಾಗಿ ಒಗ್ಗೂಡಿಸುತ್ತಾರೆ ಹಾಗೂ ಹೊಟೇಲ್‌ಗಳಲ್ಲಿ ನಮಾಜ್ ಮಾಡಲು ರೂಮ್ ಸಿದ್ಧಪಡಿಸುತ್ತಾರೆ. ವಾಟ್ಸಪ್ ಗ್ರೂಪ್ ಮಾಡಿ ನಮಾಜ್ ಸಮಯವನ್ನು ತಪ್ಪದೇ ಅಪ್‌ಡೇಟ್ ಮಾಡ್ತಾರೆ. ಅಲ್ಲದೇ ಮುಸ್ಲಿಂಯೇತರ ಆಟಗಾರರನ್ನು ಆ ಕೋಣೆಗೆ ಸೇರಿಸುವುದಿಲ್ಲ, ಹೀಗಾಗಿ ಅವರು ಬೆಸ್ಟ್ ಲೀಡರ್ ಎಂದಿದ್ದಾರೆ.

    ಇಮಾಮ್ ಉಲ್ ಹಕ್ ನೀಡಿದ ಈ ಉತ್ತರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ವ್ಯಕ್ತವಾಗುತ್ತಿದೆ. ಉತ್ತಮ ನಾಯಕತ್ವನ ಗುಣ ಎಂದರೆ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆ. ಆದರೆ ಇಮಾಮ್ ಉಲ್ ಹಕ್ ಕ್ರಿಕೆಟ್ ಬಿಟ್ಟು ಧಾರ್ಮಿಕ ವಿಚಾರಕ್ಕೆ ಸಹಾಯ ಮಾಡುವ ಆಟಗಾರನನ್ನು ಬೆಸ್ಟ್ ಎನ್ನುವುದು ಎಷ್ಟು ಸರಿ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಬೇರೆ ತಂಡದ ನಾಯಕರು ಪಂದ್ಯ ಹೇಗೆ ಗೆಲ್ಲಬೇಕು ಎನ್ನುವತ್ತ ತಲೆ ಕೆಡಿಸಿಕೊಂಡು ಯೋಜನೆಗಳನ್ನು ರೂಪಿಸಿದರೆ ಇವರು ಹೀಗೆ ಎಂದು ಕಿಡಿಕಾರಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search