ಮೈಸೂರು: ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ದಾಸಪ್ರಕಾಶ್ ಎಂಬುವವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿವೆ.
ಶೌಚಾಲಯ ಗುಂಡಿ ಕುಸಿದು ಬಿದ್ದ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ನಡೆಸುವ ವೇಳೆ ಶೌಚಾಲಯದ ಗುಂಡಿ ಒಳಗೆ ಮೂಳೆಗಳು ಪತ್ತೆಯಾಗಿವೆ. ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸರ್ಕಲ್ ಇನ್ ಸ್ಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್ಪಿ ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಸಪ್ರಕಾಶ ಮತ್ತು ತಂದೆ ಜೇಕಬ್ ಈ ಮನೆಯಲ್ಲಿ ವಾಸವಾಗಿದ್ದರು. ಜೇಕಬ್ ಇತ್ತೀಚೆಗಷ್ಟೆ ಸಾವನ್ನಪ್ಪಿದರೆ, ಮಗ ದಾಸಪ್ರಕಾಶ್ ನಾಪತ್ತೆಯಾಗಿದ್ದರು.
ದಾಸಪ್ರಕಾಶ್ಗೆ ಹೆಂಡತಿ ಹಾಗೂ ಮಕ್ಕಳಿದ್ದಾರೆ. ದಾಸಪ್ರಕಾಶ್ ಕುಡಿದು ಗಲಾಟೆ ಮಾಡುತ್ತಿದ್ದ ಹಾಗೂ ಸರಿಯಾಗಿ ನೋಡಿಕೊಳ್ಳದ ಕಾರಣಕ್ಕಾಗಿ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ದಾಸ್ಪ್ರಕಾಶ್ ನಾಪತ್ತೆಯಾದಾಗ ಅವರ ತಂದೆ ಜೇಕಬ್ ಬದುಕಿದ್ದರು. ಹೀಗಿದ್ದರೂ ತಂದೆ ಜೇಕಬ್ ಆಗಲಿ ಹಾಗೂ ಪತ್ನಿ ಪ್ರಿಯಾ ಆಗಲಿ ದಾಸಪ್ರಕಾಶ್ ದೂರು ನೀಡಿರಲಿಲ್ಲ.
ತಂದೆ ಜೊತೆ ಅನ್ಯೋನ್ಯವಾಗಿದ್ದ ದಾಸಪ್ರಕಾಶ್ ತಂದೆ ಜೇಕಬ್ ನಿಧನವಾದಾಗಲೂ ಬಂದಿರಲಿಲ್ಲ. ಇದೀಗ ಮನೆಯ ಶೌಚಾಲಯದ ಟ್ಯಾಂಕ್ ಕ್ಲೀನ್ ಮಾಡುವಾಗ ಮನುಷ್ಯನ ಮೂಳೆ, ಬುರುಡೆ ಸಿಕ್ಕಿದ್ದು ಜೇಕಬ್ ನಾಪತ್ತೆಯ ಸುತ್ತ ಅನುಮಾನವನ್ನು ಹುಟ್ಟಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


