ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಬಳಿಕ ಅತಿಹೆಚ್ಚು ಟ್ರೋಲ್ ಆದ ಸಚಿವರೆಂದೇ ಹೇಳಬಹುದು. ಜಮೀರ್ ಏನೋ ತಮ್ಮ ತಮಾಷೆಯ ಮಾತುಗಳಿಂದ ಟ್ರೋಲ್‌ಗೀಡಾದರೆ, ಮಧು ಬಂಗಾರಪ್ಪ ಅವರು ಕನ್ನಡ ಓದಲು ಬರದ, ಪದ ಬಳಕೆ ಬರದ ಕೆಟ್ಟ ಕಾರಣಗಳಿಗೆ ಟ್ರೋಲ್ ಆಗಿದ್ದಾರೆ.
ಇನ್ನು ಕನ್ನಡವನ್ನು ಸರಿಯಾಗಿ ಓದಲು ಬರದ, ಉಚ್ಛರಿಸಲು ಬರದ ವ್ಯಕ್ತಿಗೆ ಶಿಕ್ಷಣ ನೀಡಲಾಗಿದೆ ಎಂಬ ಆರೋಪ ಈ ಹಿಂದಿನಿಂದಲೂ ಇದ್ದು, ಇದೀಗ ಅಂತಹದ್ದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ಮಧು ಬಂಗಾರಪ್ಪ ಮಾತನಾಡಿದ್ದು, ತಮಗೆ ಕನ್ನಡದ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ಅವರು “ನನಗೆ ಕನ್ನಡದ ಬಗ್ಗೆ ತಿಳುವಳಿಕೆ ಇಲ್ಲ. ಆದರೆ ಕನ್ನಡ ಉಳಿವಿಕೆಗೆ ನನ್ನ ಜವಾಬ್ದಾರಿ ಇದೆ. ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಇದ್ದರೂ ಅದಕ್ಕಿಂತ ಮಿಗಿಲಾಗಿ ನನಗೆ ಕನ್ನಡದ ಬಗ್ಗೆ ಅಭಿಮಾನ ಇದೆ” ಎಂದು ಹೇಳಿಕೆ ನೀಡಿದ್ದಾರೆ.
ಹೀಗೆ ಹೇಳಿಕೆ ನೀಡಿರುವ ಮಧು ಬಂಗಾರಪ್ಪ ಸದ್ಯ ಭಾರೀ ಟೀಕೆಯನ್ನು ಎದುರಿಸುತ್ತಿದ್ದು, ಎಕ್ಸ್ ಖಾತೆಯಲ್ಲಿ ಕನ್ನಡ ಪರ ಹೋರಾಟಗಾರರೊಬ್ಬರು ಕನ್ನಡ ಬರದ ಇವರಿಗೇಕೆ ಶಿಕ್ಷಣ ಮಂತ್ರಿ ಕೆಲಸ, ಇವರನ್ನು ತೆಗೆದುಹಾಕಿ ಕನ್ನಡ ಮಂತ್ರಿಗೆ ಕೆಲಸ ಕೊಡಿ ಎಂದು ಆಗ್ರಹಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


