ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಿಷಯಗಳ ಪೈಕಿ ಹನಿಟ್ರ್ಯಾಪ್ ಸಹ ಒಂದು.
ಸದನದಲ್ಲಿ ಕೆಎನ್ ರಾಜಣ್ಣ ಈ ಬಗ್ಗೆ ಮಾತನಾಡಿದಾಗಿನಿಂದ ಸತತವಾಗಿ ಚರ್ಚೆಯಲ್ಲಿರುವ ಹನಿಟ್ರ್ಯಾಪ್ ಸದ್ಯ ಕಾಂಗ್ರೆಸ್ನ ಯಾವುದೇ ಶಾಸಕನ ನಡೆಯಲ್ಲಿ ವ್ಯತ್ಯಾಸ ಕಂಡುಬಂದರೂ ಅವರ ಹೆಸರಿನ ಜತೆ ತಳುಕಿ ಹಾಕಿಕೊಳ್ಳುತ್ತಿದೆ.
ಅದರಂತೆ ಮೊನ್ನೆ ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಎಚ್ಡಿ ಕುಮಾರಸ್ವಾಮಿ ಹಾಗೂ ಎಚ್ಡಿ ದೇವೇಗೌಡ ಅವರನ್ನು ಭೇಟಿಯಾದಾಗಲೂ ಸಹ ಹನಿಟ್ರ್ಯಾಪ್ ಕುರಿತ ಚರ್ಚೆ ಇರಬಹುದಾ ಎಂಬ ಅನುಮಾನ ಮೂಡಿತ್ತು.
ಇನ್ನು ನಿನ್ನೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ ಎಚ್ಡಿಕೆ ಹಾಗೂ ಎಚ್ಡಿಡಿ ಅವರನ್ನು ಭೇಟಿ ಮಾಡುವ ವಿಷಯವನ್ನು ನಾನು ಖರ್ಗೆ ಅವರಿಗೆ ತಿಳಿಸಿದ್ದೇನೆ ಎಂದಿದ್ದರು. ಅಲ್ಲದೇ ನಾಳೆ ಬೆಂಗಳೂರಿಗೆ ಬಂದು ಎಲ್ಲವನ್ನೂ ಹೇಳುತ್ತೇನೆ ಎಂದಿದ್ದರು.
ಈ ಕುರಿತು ಇದೀಗ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ ಹೈಕಮಾಂಡ್ಗೆ ನಾನು ಹೋಗಿ ಮಾಹಿತಿ ಕೊಡುವ ಅವಶ್ಯಕತೆ ಇಲ್ಲ, ಅವರಿಗೆ ಮೂಲಗಳಿವೆ, ಅದರ ಮೂಲಕ ಅವರೇ ತಿಳಿದುಕೊಳ್ತಾರೆ, ಅವರಿವರ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ. ಬೇರೆ ಪಕ್ಷದ ಸಹಕಾರ ಕೇಳಿದ್ದೇನೆ ಎನ್ನುವುದೆಲ್ಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದರು. ಈ ಮೂಲಕ ಹನಿಟ್ರ್ಯಾಪ್ ಬಗ್ಗೆ ತಾನು ತಲೆ ಕೆಡಿಸಿಕೊಂಡಿಲ್ಲ ಎಂದು ಪರೋಕ್ಷವಾಗಿ ತಿಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


