ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ.
ಭಾರತ ನೀಡಿದ 172 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು, 68 ರನ್‌ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಅಮೋಘ ಪ್ರದರ್ಶನ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿದ ಭಾರತ, ಇಂಗ್ಲೆಂಡ್ ತಂಡವನ್ನು ಸಂಪೂರ್ಣ ತಗ್ಗಿಸಿತು. ಆರಂಭದಲ್ಲಿಯೇ ಆಕ್ರಮಣಕಾರಿ ಬೌಲಿಂಗ್ ಮೂಲಕ 26 ರನ್‌ಗಳಿಗೆ ಇಂಗ್ಲೆಂಡ್‌ನ ಮೊದಲ ವಿಕೆಟ್ ಕಿತ್ತುದು.
23 ರನ್ ಮಾಡಿದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಅಕ್ಸರ್ ಪಟೇಲ್ ಬೌಲಿಂಗ್‌ಗೆ ಬಲಿಯಾದರು. ಅಲ್ಲಿಂದ ಇಂಗ್ಲೆಂಡ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊಯಿನ್ ಅಲಿ 8 ರನ್ ಮತ್ತು ಜಾನಿ ಬೇರ್‌ಸ್ಟೋ ಶೂನ್ಯಕ್ಕೆ ಔಟ್‌ಗೊಂಡರು.
ಹ್ಯಾರಿ ಬ್ರೂಕ್ 25 ರನ್ ಗಳಿಸಿ ಅಪಾಯಕಾರಿಯಾದರೂ, ಕುಲದೀಪ್ ಯಾದವ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಲಿವಿಂಗ್‌ಸ್ಟೋನ್ 11 ರನ್, ಸ್ಯಾಮ್ ಕರನ್ 2, ಜೋರ್ಡನ್ 1 ರನ್ ಮತ್ತು ಅದಿಲ್ ರಷೀದ್ ಸೂರ್ಯ ಕುಮಾರ್ ಯಾದವ್ ರನ್‌ಔಟ್‌ಗೆ ಬಲಿಯಾದರು.
ಭರ್ಜರಿ ಬೌಲಿಂಗ್: ಕುಲದೀಪ್ ಮತ್ತು ಅಕ್ಸರ್ ಪಟೇಲ್
ಭಾರತ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ತಲಾ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಅಕ್ಸರ್ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ಕುಲದೀಪ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸು
ಈ ಗೆಲುವಿನೊಂದಿಗೆ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


