ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ನ ಕೆಲವು ಅಭಿಮಾನಿಗಳು ಇದೀಗ ನಟಿ ರಮ್ಯಾಗೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಕ್ಕೆ ಆರೋಪಿಗಳಾಗಿದ್ದಾರೆ.
ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದರ ಕುರಿತು ಟ್ವೀಟ್ ಮಾಡಿದ್ದ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬರೆದುಕೊಂಡಿದ್ದರು.
ಈ ಮೂಲಕ ಪರೋಕ್ಷವಾಗಿ ದರ್ಶನ್ ಬೇಲ್ ರದ್ದಾಗಬೇಕೆಂದು ರಮ್ಯಾ ಹೇಳಿದ್ದರು. ಇದರಿಂದ ಕೋಪಗೊಂಡ ದರ್ಶನ್ ಅಭಿಮಾನಿಗಳು ರಮ್ಯಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಕೆಟ್ಟ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಲ್ಲದೇ ಅನೇಕ ದರ್ಶನ್ ಅಭಿಮಾನಿಗಳು ನೇರವಾಗಿ ರಮ್ಯಾಗೆ ಮೆಸೇಜ್ ಮಾಡಿ ಅವಾಚ್ಯ ಶಬ್ದಗಳನ್ನು ನಿಂದಿಸಿದರು. ಇದನ್ನು ಸ್ಕ್ರೀನ್‌ಶಾಟ್ ತೆಗೆದು ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಮಹಿಳಾ ಆಯೋಗ ಕಮಿಷನರ್‌ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ ಈ ರೀತಿ ಪದ ಬಳಕೆ ಮಾಡಿ ಹೆಣ್ಣಿನ ಮಾನಹಾನಿ ಮಾಡುವುದು ಅಪರಾಧ, ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಬಂದ ಸುದ್ದಿಗಳು ಹಾಗೂ ಒಂದು ದೂರು ಸಹ ಬಂದಿದೆ. ಅವುಗಳ ಆಧಾರದ ಮೇಲೆ ಸುಮೊಟೊ ದಾಖಲು ಮಾಡಿಕೊಂಡಿದ್ದೇವೆ. ಏಕೆಂದರೆ ಕೆಟ್ಟ ವಿಡಿಯೊಗಳನ್ನು ಹಾಕಿ ಲೈಂಗಿಕ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಕಮಿಷನರ್‌ಗೆ ಪತ್ರ ಬರೆದು ಅವುಗಳನ್ನು ತೆಗೆಸಿ, ಯಾರು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ. ಇದು ರಮ್ಯಾ ಮಾತ್ರ ಅಲ್ಲ ಯಾವುದೇ ಮಹಿಳೆ ಬಗ್ಗೆ ಮಾತನಾಡಿದರೂ ಸಹ ಇದೇ ಕ್ರಮ. ಸ್ವತಂತ್ರವಾಗಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ, ಆದರೆ ಅದು ಒಳ್ಳೆಯ ರೀತಿ ಇರಬೇಕೇ ಹೊರತು ಹೆಣ್ಣು ಮಗಳ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಬಾರದು. ಮಾಡಿರೋದು ಏನಾದರೂ ಸಾಬೀತಾದರೆ ಏಳು ವರ್ಷ ಜೈಲು ಶಿಕ್ಷೆ ಪಕ್ಕಾ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಎಫ್‌ಡಿ ಯೋಜನೆ: ಭದ್ರತೆಗೂ ಲಾಭಕ್ಕೂ ಸೂಕ್ತ ಆಯ್ಕೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


