ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ತೂಗುದೀಪ ಜಾಮೀನು ರದ್ದಾಗುವ ಸಾಧ್ಯತೆಗಳು ಹುಟ್ಟಿಕೊಳ್ಳುತ್ತಿದ್ದಂತೆ ನಟಿ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹಂಚಿಕೊಂಡ ಟ್ವೀಟ್ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.
ಹೀಗಾಗಿ ರಮ್ಯಾ ಮೇಲೆ ಮುಗಿಬಿದ್ದ ದರ್ಶನ್ ಅಭಿಮಾನಿಗಳು ಅಮ್ಮ, ಅಕ್ಕ ಪದಬಳಕೆಗಳನ್ನು ಮಾಡಿ ಸಂದೇಶ ಕಳುಹಿಸಿದ್ದಾರೆ. ತಮಗೆ ದರ್ಶನ್ ಅಭಿಮಾನಿಗಳ ಕಡೆಯಿಂದ ಬಂದ ಹಲವು ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡ ರಮ್ಯಾ ರೇಣುಕಾಸ್ವಾಮಿಗೂ ನಿಮಗೂ ಏನೂ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದ್ದಾರೆ ಹಾಗೂ ರೇಣುಕಾಸ್ವಾಮಿ ಕುಟುಂಬಕ್ಕೆ ಇದೇ ಕಾರಣಕ್ಕೆ ನ್ಯಾಯ ಸಿಗಬೇಕೆಂದು ಬರೆದುಕೊಂಡಿದ್ದರು.
ಹೀಗೆ ದರ್ಶನ್ ಅಭಿಮಾನಿಗಳ ಬಂಡವಾಳವನ್ನು ರಮ್ಯಾ ತೆರೆದಿಡುತ್ತಿದ್ದಂತೆ ಅತ್ತ ನಟಿ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ʼನಾನು ಏನನ್ನು ವೈರಲ್ ಆಗುವುದನ್ನು ನೋಡಲು ಇಚ್ಛಿಸುತ್ತೇನೆ ಗೊತ್ತಾ? ಕನಿಷ್ಟ ಮಾನವೀಯತೆʼ ಎಂದು ಬರೆದುಕೊಂಡಿದ್ದಾರೆ.
ಇನ್ನು ರಕ್ಷಿತಾ ಅವರ ಈ ಸ್ಟೋರಿಯನ್ನು ಹಂಚಿಕೊಳ್ಳುತ್ತಿರುವ ದರ್ಶನ್ ಅಭಿಮಾನಿಗಳು ಇದು ರಮ್ಯಾಗೆ ರಕ್ಷಿತಾ ನೀಡಿರುವ ಟಾಂಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳತೊಡಗಿದ್ದಾರೆ.
ಶಾಪಿಂಗ್ ಪ್ರಿಯರಿಗೆ ಗುಡ್ ನ್ಯೂಸ್;ಅಮೆಜಾನ್ ಇಂಡಿಯಾ ಗ್ರೇಟ್ ಫ್ರೀಡಂ ಫೆಸ್ಟಿವಲ್ 2025 ಸೇಲ್ ಆಗಸ್ಟ್ 1ರಿಂದ ಪ್ರಾರಂಭ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


