ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿದ್ದು, ಸ್ವತಃ ತಾನೇ ಹೆಣಗಳನ್ನು ಹೂತಿದ್ದೆ ಎಂದು ಪೊಲೀಸರ ಮುಂದೆ ಬಂದಿದ್ದ ಸಾಕ್ಷಿ ದೂರುದಾರನನ್ನು ಇಂದು ( ಜುಲೈ 28 ) ಎಸ್‌ಐಟಿ ತಂಡ ಸ್ಥಳ ಮಹಜರು ಮಾಡಲು ಕರೆದೊಯ್ದಿದೆ.
ಬಿಗಿ ಭದ್ರತೆಯೊಂದಿಗೆ ಆತನನ್ನು ಲೋಕೋಪಯೋಗಿ ತನಿಖಾಧಿಕಾರಿಗಳ ಕಚೇರಿಯಿಂದ ನೇತ್ರಾವತಿ ಸ್ನಾನಘಟಕ್ಕೆ ಕರೆ ತರಲಾಗಿದೆ. ಎರಡು ದಿನಗಳ ಕಾಲ ಆತನನ್ನು ವಿಚಾರಣೆ ಮಾಡಿದ ಎಸ್‌ಐಟಿ ಅಧಿಕಾರಿಗಳು ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಆತ ಉಲ್ಲೇಖಿಸಿದ ಜಾಗಗಳ ಸ್ಥಳ ಮಹಜರಿಗೆ ಮುಂದಾಗಿದ್ದಾರೆ.
ಮೊದಲಿಗೆ ಸ್ನಾನಘಟ್ಟದ ಬಳಿ ಸ್ಥಳ ಮಹಜರು ಮಾಡಲಾಗುತ್ತಿದ್ದು, ಬಳಿಕ ತಲೆ ಬುರುಡೆ ತೆಗೆದ ಜಾಗಕ್ಕೆ ಕರೆದೊಯ್ಯಲಿದ್ದಾರೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಎಸ್‌ಪಿ ಸಿ.ಎ ಸೈಮನ್ ಸ್ಥಳಕ್ಕೆ ಭೇಟಿ ಹಾಜರಿದ್ದು, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಭೂ ಸರ್ವೆ ಇಲಾಖೆಯ ಅಧಿಕಾರಿಗಳು ಸಹ ಹಾಜರಿದ್ದಾರೆ.
ಸಾಕ್ಷಿ ದೂರುದಾರ ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಆತ ಕೆಲಸ ಮಾಡಿದ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಹೆಣಗಳನ್ನು ಹೂಳಿಸಲಾಗಿದ್ದು, ತಾನು ಹೂತಿರುವ ಶವಗಳ ಅಸ್ತಿಪಂಜರವನ್ನು ಅಗೆದು ತೋರಿಸುತ್ತೇನೆ ಎಂದು ಜುಲೈ 11ರಂದು ದೂರು ನೀಡಿದ್ದ.
ಮುಖ ತೋರಿಸಿಕೊಳ್ಳದೇ ಕಾಮೆಂಟ್ ಹಾಕೋದಲ್ಲ, ಶಿಕ್ಷಣ ಹೆಚ್ಚಿಸಬೇಕಿದೆ; ದರ್ಶನ್ ಫ್ಯಾನ್ಸ್‌ಗೆ ಯದುವೀರ್ ಟಾಂಗ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


