ಇತ್ತೀಚಿನ ದಿನಗಳಲ್ಲಿ ಚಿನ್ನದ ದರಗಳಲ್ಲಿ ಕಂಡುಬಂದ ತೀವ್ರ ಏರಿಳಿತದ ನಡುವೆ, ಇಂದು ಮತ್ತೆ ದರಗಳು ಹಠಾತ್ ಕುಸಿದಿದ್ದು, ಖರೀದಿದಾರರು ಮತ್ತು ಹೂಡಿಕೆದಾರರಿಗೆ ಇದು ನಿಜವಾದ ಸುವರ್ಣಾವಕಾಶವಾಗಿ ಪರಿಣಮಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ಮತ್ತು ಸ್ಥಳೀಯ ಬೇಡಿಕೆಯ ಪ್ರಭಾವದಿಂದಾಗಿ ಕಳೆದ ಹತ್ತು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭರ್ಜರಿ ಕುಸಿತ ಮುಂದುವರಿದಿದೆ.
ಪ್ರಸ್ತುತ ಮಾರುಕಟ್ಟೆ ದರಗಳ ಪ್ರಕಾರ ಆಭರಣ ಚಿನ್ನ (22 ಕ್ಯಾರೆಟ್) ಹತ್ತು ದಿನಗಳ ಹಿಂದೆ ₹ 1,21,700 ಇದ್ದ 100 ಗ್ರಾಂ ಚಿನ್ನದ ಬೆಲೆ ಈಗ ₹ 1,12,250 ಗೆ ಇಳಿದಿದೆ (ಸುಮಾರು ಶೇ. 7-8ರಷ್ಟು ಕುಸಿತ).ಅಪರಂಜಿ ಚಿನ್ನ (24 ಕ್ಯಾರೆಟ್) 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಸದ್ಯ ₹ 1,22,460 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ) ₹ 1,12,250 ಇದೆ.ಬೆಳ್ಳಿ ಬೆಲೆ: ಕಳೆದ ಹತ್ತು ದಿನಗಳ ಹಿಂದೆ ಗರಿಷ್ಠ ₹ 190 ಕ್ಕೆ ತಲುಪಿದ್ದ 100 ಗ್ರಾಂ ಬೆಳ್ಳಿ ಬೆಲೆ, ಸದ್ಯ ₹ 15,100 ಕ್ಕೆ (ಬೆಂಗಳೂರಿನಲ್ಲಿ ₹ 15,200) ಕುಸಿದಿದೆ (ಸುಮಾರು ಶೇ. 20 ರಷ್ಟು ಇಳಿಕೆ).ಮದುವೆ ಸೀಸನ್ ಆರಂಭಕ್ಕೂ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕರಿಗೆ ಸಂತಸ ತಂದಿದೆ.

ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಭಾರೀ ಕುಸಿತ: ಖರೀದಿದಾರರಿಗೆ ಸುವರ್ಣಾವಕಾಶ, ಬೆಳ್ಳಿ ಬೆಲೆ ಕೆಜಿಗೆ ₹5000 ಇಳಿಕೆ!
ಇತ್ತೀಚಿನ ಏರಿಳಿತಗಳ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಮತ್ತಷ್ಟು ಇಳಿಕೆಯಾಗಿದ್ದು, ಖರೀದಿದಾರರಿಗೆ ಭಾರಿ ಸಂತಸ ತಂದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ:
22 ಕ್ಯಾರೆಟ್ ಚಿನ್ನ: ಪ್ರತಿ 10 ಗ್ರಾಂ ದರವು ನಿನ್ನೆ (ಸೋಮವಾರ) ₹2,150 ರಷ್ಟು ಇಳಿಕೆಯಾಗಿತ್ತು. ಇಂದು (ಮಂಗಳವಾರ) ಕೂಡ ₹750 ಇಳಿಕೆ ಕಂಡಿದ್ದು, ಒಟ್ಟು ದರ ₹1,12,225 ಕ್ಕೆ ಇಳಿದಿದೆ. ಇದು ಚಿನ್ನದ ಗರಿಷ್ಠ ಮಟ್ಟದಿಂದ ಸುಮಾರು ₹10 ಸಾವಿರದವರೆಗೆ ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನ (ಅಪರಂಜಿ): ಪ್ರತಿ 10 ಗ್ರಾಂ ದರವು ನಿನ್ನೆ ₹2,340 ಹಾಗೂ ಇಂದು ₹820 ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ ದರ ₹1,22,460 ರಲ್ಲಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಭಾರೀ ಇಳಿಕೆ ಕಂಡಿದೆ. ಇಂದು ಮಂಗಳವಾರ, ಬೆಳ್ಳಿ ದರ ಪ್ರತಿ 1 ಕೆಜಿಗೆ ಬರೋಬ್ಬರಿ ₹5000 ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹1.52 ಲಕ್ಷದಷ್ಟಿದ್ದು, ಹೈದರಾಬಾದ್ ಮಾರುಕಟ್ಟೆಯಲ್ಲಿ ಕೆಜಿಗೆ ₹1.62 ಲಕ್ಷ ಇದೆ. ವಿಶೇಷವಾಗಿ, ಕಳೆದ 12 ದಿನಗಳಲ್ಲಿ ಬೆಳ್ಳಿ ಬೆಲೆಯು ₹40 ಸಾವಿರಕ್ಕೂ ಹೆಚ್ಚು ಕುಸಿದು ದಾಖಲೆ ಬರೆದಿದೆ.
ಕರ್ನಾಟಕಕ್ಕೆ ‘ಮೊಂಥಾ’ ಸೈಕ್ಲೋನ್ ಅಬ್ಬರ: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಇನ್ನೆರಡು ದಿನ ರಾಜ್ಯಾದ್ಯಂತ ಭಾರೀ ಮಳೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


