ಮೈಸೂರು: ಬಿಜೆಪಿಯಿಂದ ಮತಗಳ್ಳತನವಾಗಿದೆ ಎಂದು ಆರೋಪಿಸಿ ದೊಡ್ಡ ಮಟ್ಟದಲ್ಲಿ ಮಾಹಿತಿಗಳನ್ನು ಹಂಚಿಕೊಂಡು ದೇಶದ ಜನತೆಯ ಗಮನ ಸೆಳೆದಿದ್ದ ರಾಹುಲ್ ಗಾಂಧಿ ವೋಟ್ ಚೋರಿ ಕ್ರಾಂತಿಯನ್ನು ಹುಟ್ಟುಹಾಕಿದ್ದಾರೆ.
ಆರಂಭದಲ್ಲಿ ಇದೆಲ್ಲ ಆರೋಪವಷ್ಟೇ ಎನ್ನುತ್ತಿದ್ದ ಯುವ ಜನತೆ ರಾಹುಲ್ ಗಾಂಧಿ ವಿವರಿಸಿದ ಪರಿ ಕಂಡು ಇದ್ದರೂ ಇರಬಹುದು ಎಂದು ಅನುಮಾನದ ದೃಷ್ಟಿಯಿಂದಲೇ ನೋಡಲಾರಂಭಿಸಿದ್ದಾರೆ. ಇನ್ನು ಕಾಂಗ್ರೆಸ್ ಇದನ್ನು ಅಸ್ತ್ರವನ್ನಾಗಿ ಬಳಸುತ್ತಿದ್ದು, ಎಲ್ಲೆಡೆ ಜನಜಾಗೃತಿ ಆಂದೋಲನ ನಡೆಸಿ ಸಹಿ ಸಂಗ್ರಹ ಮಾಡತೊಡಗಿದೆ.
ಅದೇ ರೀತಿ ಮೈಸೂರಿನಲ್ಲಿಯೂ ಸಹ ಜನ ಜಾಗೃತಿ ಆಂದೋಲನ ನಡೆಸಲಾಗುತ್ತಿದ್ದು, ವೇದಿಕೆ ಮೇಲೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಚುನಾವಣಾ ಆಯುಕ್ತರ ವಿರುದ್ಧ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿಯವರು ಇಷ್ಟೆಲ್ಲ ಮತಗಳ್ಳತವಾಗುತ್ತಿದೆ ಎಂದು ಸಾಕ್ಷಿ ಸಮೇತ ದೂರು ಕೊಟ್ಟರೂ ಸಹ ಚುನಾವಣಾ ಆಯುಕ್ತರು ಗಂಭೀರವಾಗಿ ಪರಿಗಣಿಸಲ್ಲ. ಚುನಾಣಣಾ ಆಯೋಗ ಈ ಹಿಂದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿತ್ತು. ಯಾವುದೇ ರಾಜಕೀಯ ಒತ್ತಡಕ್ಕೂ ಸಹ ಒಳಗಾಗುತ್ತಿರಲಿಲ್ಲ. ಆದರೆ ಈಗಿನ ಚುನಾವಣಾ ಆಯುಕ್ತರು ರಾಜಕೀಯ ಪುಡಾರಿ ರೀತಿ ಮಾತನಾಡುತ್ತಿದ್ದಾರೆ, ಗಂಭೀರವಾದ ಆರೋಪ ಮಾಡಿದರೂ ಸಹ ಅದನ್ನು ಪರಿಗಣಿಸದೇ ಆರೋಪ ಮಾಡಿದವರ ಮೇಲೆಯೇ ದಾಳಿಯನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕಕ್ಕೆ ‘ಮೊಂಥಾ’ ಸೈಕ್ಲೋನ್ ಅಬ್ಬರ: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಇನ್ನೆರಡು ದಿನ ರಾಜ್ಯಾದ್ಯಂತ ಭಾರೀ ಮಳೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


