ಬೆಂಗಳೂರು: ಮಾಸ್ಕ್ಮ್ಯಾನ್ ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಸದ್ಯ ತನ್ನ ತನಿಖೆಯನ್ನು ಕೊನೆಯ ಹಂತಕ್ಕೆ ತಂದಿದೆ.
ಜುಲೈ 20ರಂದು ರಚನೆಯಾದ ಎಸ್ಐಟಿ ಮೊದಲಿಗೆ ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸಿ ಬಳಿಕ ಭಿನ್ನ ವಿಭಿನ್ನ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಧರ್ಮಸ್ಥಳದ ಗ್ರಾಮ ಪಂಚಾಯಿತಿಯ ಮಾಜಿ ಸಿಬ್ಬಂದಿಗಳನ್ನೂ ಸಹ ತನಿಖೆಗೆ ಒಳಪಡಿಸಿತ್ತು. ಹೀಗೆ ಇಲ್ಲಿಯವರೆಗೂ ಯಾವುದೇ ಒಂದು ಮಾಹಿತಿಯನ್ನೂ ಬಿಟ್ಟುಕೊಡದೇ ಗೌಪ್ಯವಾಗಿ ಎಸ್ಐಟಿ ತನಿಖೆ ನಡೆಸಿದೆ.
ಇನ್ನು ನಿನ್ನೆಯಷ್ಟೇ ಗೃಹ ಸಚಿವ ಜಿ ಪರಮೇಶ್ವರ್ ಈ ಕುರಿತು ಮಾತನಾಡಿ ಎಸ್ಐಟಿಗೆ ಅಕ್ಟೋಬರ್ 31ರೊಳಗೆ ವರದಿ ಸಲ್ಲಿಸುವಂತೆ ಹೇಳಿದ್ದೆ, ಎರಡು ಮೂರು ದಿನಗಳು ಹೆಚ್ಚು ಕಡಿಮೆಯಾಗಬಹುದು ವರದಿ ಬರಲಿದೆ ಎಂದರು. ಹೀಗೆ ಅಂತಿಮ ಹಂತದಲ್ಲಿರುವ ಎಸ್ಐಟಿ ತನಿಖೆ ಬಗ್ಗೆ ಲಾಯರ್ ಜಗದೀಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಲೈವ್ ವೇಳೆ ಮಾತನಾಡಿದ್ದು, ಬೇಸರ ಹೊರಹಾಕಿದ್ದಾರೆ.
ಹಿಂಬಾಲಕನೋರ್ವ ಧರ್ಮಸ್ಥಳ ಎಸ್ಐಟಿ ತನಿಖೆ ಬಗ್ಗೆ ಮಾಹಿತಿ ಕೊಡಿ ಎಂದಾಗ ಪ್ರತಿಕ್ರಿಯಿಸಿದ ಲಾಯರ್ ಜಗದೀಶ್ ಎಸ್ಐಟಿ ತನಿಖೆ ಬಗ್ಗೆ ಏನು ಹೇಳೋಣ ಅವರು ಕೊಲೆಗಾರನನ್ನು ವಿಚಾರಣೆ ಮಾಡುವುದು, ಹಿಡಿಯುವುದನ್ನು ಬಿಟ್ಟು ಮಿಕ್ಕಿದ್ದನ್ನೆಲ್ಲ ಮಾಡುತ್ತಿದ್ದಾರೆ, ಎಸ್ಐಟಿಗೆ ಅದೇನು ಅಡ್ಜಸ್ಟ್ಮೆಂಟ್ ಆಗಿದೆಯೋ ಗೊತ್ತಿಲ್ಲ ನ್ಯಾಯ ಅಂತೂ ಸಿಗಲ್ಲ, ಕೊಲೆಗಾರ ಸೇಫ್ ಆಗ್ತಾನೆ ಎಂದಿದ್ದಾರೆ.
ನಾನು ಎಸ್ಐಟಿ ತನಿಖೆ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂಬ ಕಾರಣಕ್ಕೆ ಬೆಂಗಳೂರು ಈಶಾನ್ಯ ಡಿಸಿಪಿ ಸಜಿತ್ ಕಡೆಯಿಂದ ಬೆದರಿಕೆ ಹಾಕಿಸಲಾಗುತ್ತಿದೆ. ಒಂದಂತೂ ನಿಜ ಕರ್ನಾಟಕ ರಾಜ್ಯ ಸರ್ಕಾರ ಮಾಡಿರುವ ಎಸ್ಐಟಿ ಸಂಪೂರ್ಣವಾಗಿ ಒಂದು ವೇಸ್ಟ್ ಬಾಡಿ ಎಂದು ಜಗದೀಶ್ ಕಿಡಿಕಾರಿದ್ದಾರೆ.
ಈ ವ್ಯಕ್ತಿ ಸಿಎಂ ಆದರೆ ಸಂತೋಷಪಡುತ್ತೇನೆ ಎಂದ ಪರಮೇಶ್ವರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


