ನವದೆಹಲಿ: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಭೂಮಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಸ್ಥಳ ಹಂಚಿಕೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ. ಕೇಂದ್ರ ಸಂಪುಟ ಸಭೆಯ ಬಳಿಕ ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿ, ಅಂತ್ಯಕ್ರಿಯೆ ಮತ್ತು ಇತರ ವಿಧಿವಿಧಾನಗಳು ಮುಂದುವರಿಸಬಹುದು. ಏಕೆಂದರೆ ಟ್ರಸ್ಟ್ ರಚನೆ ಮತ್ತು ಜಾಗ ಹಂಚಿಕೆಯಾಗಬೇಕಿದೆ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಮುಖ್ಯಸ್ಥರಿಂದ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ಜಾಗವನ್ನು ಮಂಜೂರು ಮಾಡುವಂತೆ ಮನವಿ ಬಂದಿದ್ದು, ಈ ಮನವಿಯನ್ನು ಸ್ವೀಕರಿಸಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಮಾರಕ ನಿರ್ಮಾಣಕ್ಕಾಗಿ ಜಾಗವನ್ನು ಮಂಜೂರು ಮಾಡಲಿದ್ದಾರೆಂದು ತಿಳಿಸಿದೆ.
ಸ್ಮಾರಕಕ್ಕಾಗಿ ಟ್ರಸ್ಟ್ ರಚನೆ ಮತ್ತು ಜಾಗದ ಹಂಚಿಕೆಯನ್ನು ಅಂತಿಮಗೊಳಿಸಿರುವುದರಿಂದ, ಅಂತ್ಯಕ್ರಿಯೆ ಮತ್ತು ಔಪಚಾರಿಕತೆಗಳು ಈ ಮಧ್ಯೆ ಮುಂದುವರಿಯಬಹುದು ಎಂದು ಗೃಹ ಸಚಿವಾಲಯ ಹೇಳಿದೆ.
ಮುಂಜಾನೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ ಸಿಂಗ್ ಅವರ ಸ್ಮಾರಕಕ್ಕೆ ಜಾಗ ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರಿಂ ಈ ಸಂಬಂಧ ಅಮಿತ್ ಶಾ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಮತ್ತು ಡಾ.ಮನಮೋಹನ ಸಿಂಗ್ ಅವರ ಕುಟುಂಬಕ್ಕೆ ಮಾಹಿತಿ ನೀಡಿ, ಸ್ಮಾರಕಕ್ಕೆ ಜಾಗ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಟ್ರಸ್ಟ್ ರಚನೆ ಮತ್ತು ಜಾಗ ಹಂಚಿಕೆಯಾಗಬೇಕಿರುವುದರಿಂದ ಅಂತ್ಯಸಂಸ್ಕಾರ ಮತ್ತು ಇತರ ವಿಧಿವಿಧಾನಗಳನ್ನು ನಡೆಸಬಹುದು” ಎಂದು ಪ್ರಕಟಣೆ ಹೇಳಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಿಗಮ್ ಬೋಧ್ ನಲ್ಲಿ ಡಾ.ಸಿಂಗ್ ಅವರ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿರುವ ಕೇಂದ್ರದ ಕ್ರಮ, ಮೊದಲ ಸಿಕ್ಖ್ ಪ್ರಧಾನಿಗೆ ಮಾಡಿದ ಉದ್ದೇಶಪೂರ್ವಕ ಅವಮಾನ ಎಂದು ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಗೆ ಪತ್ರ ಬರೆದು, ಡಾ.ಸಿಂಗ್ ಗೌರವಾರ್ಥ ಸ್ಮಾರಕ ನಿರ್ಮಿಸುವ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು ಎಂದು ಕೋರಿದ್ದಾಗಿ ರಮೇಶ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವ ವಹಿಸಿ, ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗುರುತಿಸಿಕೊಂಡಿರುವ ಸಿಂಗ್ ಅವರು ಗುರುವಾರ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2004 ರಿಂದ 2014ರ ವರೆಗೆ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಗಣನೀಯ ಸೇವೆ ಸಲ್ಲಿಸಿದ್ದರು.
ಅಂತ್ಯಕ್ರಿಯೆಯನ್ನು ಪ್ರತ್ಯೇಕ ಸ್ಮಾರಕ ಸ್ಥಳದಲ್ಲಿ ನಡೆಸಬೇಕೆಂಬ ಕಾಂಗ್ರೆಸ್ನ ಮನವಿಯನ್ನು ಕೇಂದ್ರ ಸರ್ಕಾರ ಆರಂಭದಲ್ಲಿ ನಿರಾಕರಿಸಿತ್ತು. ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತದ ಮೊದಲ ಸಿಖ್ ಪ್ರಧಾನಿಗೆ ಉದ್ದೇಶಪೂರ್ವಕ ಅವಮಾನ” ಎಂದು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


