ಮಂಡ್ಯ: ಜಿಲ್ಲೆಯ ಪಾಂಡವಪುರ ಠಾಣೆಯ ಮುಂದೆಯೇ ಜನಸಾಮಾನ್ಯ ಹಾಗೂ ಪೊಲೀಸ್ ನಡುವೆ ಬಡಿದಾಟ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೇದೆ ಮೇಲೆ ಹಲ್ಲೆ ಮಾಡಿದ ಭೂಪ ಎಂಬ ತಲೆಬರಹದೊಂದಿಗೆ ಈ ವಿಡಿಯೊ ವೈರಲ್ ಆಗ್ತಿದೆ. ಆದರೆ ವಿಡಿಯೊವನ್ನು ತುಸು ಪರಿಶೀಲಿಸಿ ನೋಡಿದರೆ ಇಲ್ಲಿ ತಪ್ಪು ಯಾರದ್ದು ಎಂಬ ಪ್ರಶ್ನೆ ಮೂಡುವುದಂತೂ ಪಕ್ಕಾ.
ಜಮೀನು ವಿವಾದದ ಸಂಬಂಧ ಸಾಗರ್ ಎಂಬಾತನ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಸಾಗರ್‌ನನ್ನು ಪೊಲೀಸರು ಕರೆಸಿದ್ದರು. ಈ ವೇಳೆ ಪೊಲೀಸ್ ಹಾಗೂ ಸಾಗರ್ ನಡುವೆ ಮಾತಿಗೆ ಮಾತು ಬೆಳೆದಿದೆ. ನೋಡ ನೋಡುತ್ತಿದ್ದಂತೆ ಪೇದೆ ಸಾಗರ್ ಮೇಲೆ ಕೈ ಮಾಡಿದ್ದಾನೆ. ಬಳಿಕ ಆತ್ಮರಕ್ಷಣೆಗಾಗಿ ಸಾಗರ್ ಪೊಲೀಸ್ ಮೇಲೆ ಕೈ ಮಾಡಿರುವುದು ವಿಡಿಯೊದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ವಿಡಿಯೊದಲ್ಲಿ ಪೇದೆ ಕೈ ಮಾಡಿದ ಬಳಿಕ ಪೇದೆಯ ಕೆನ್ನೆಗೆ ಬಾರಿಸಿದ ಸಾಗರ್ ಸಹ ವಿಡಿಯೊದಲ್ಲಿ ʼಯಾಕೋ ಹೊಡಿತಿಯಾ ನನಗೆ?ʼ ಎಂದು ಪ್ರಶ್ನೆ ಮಾಡುವುದನ್ನು ನೋಡಬಹುದಾಗಿದೆ. ವೈರಲ್ ಆಗುತ್ತಿರುವ ವಿಡಿಯೊ ಅಡಿಯ ಕಾಮೆಂಟ್ ಬಾಕ್ಸ್‌ನಲ್ಲೂ ಸಹ ಈ ಕುರಿತಾದ ಕಾಮೆಂಟ್‌ಗಳಿದ್ದು, ಬಹುತೇಕರು ಪೇದೆಯದ್ದೇ ತಪ್ಪು ಎಂದಿದ್ದಾರೆ.
ಒಟ್ಟಿನಲ್ಲಿ ಈ ಘಟನೆಯೊಂದು ಅನಾರೋಗ್ಯಕರ ಬೆಳವಣಿಗೆಯಾಗಿದ್ದು, ವಿಚಾರಣೆಗೆಂದು ಕರೆತಂದವರ ಮೇಲೆ ಪೇದೆ ಕೈ ಮಾಡಿದ್ದು ಸರಿ? ಆತ್ಮರಕ್ಷಣೆಗೆ ಪೇದೆ ಮೇಲೆ ಸಾಗರ್ ಕೈ ಮಾಡಿದ್ದು ಎಷ್ಟು ತಪ್ಪು? ಎಂಬ ಅಹಿತರಕರ ಚರ್ಚೆಯನ್ನಂತೂ ಹುಟ್ಟುಹಾಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


