Friday, September 4, 2026
spot_img
More
    spot_img
    HomeLatest newsಪಾರಂಪರಿಕ ಭಾರತೀಯ ಆಹಾರ ಪದ್ಧತಿಗಳಲ್ಲಿ ವೀಳ್ಯದೆಲೆಯ ಆರೋಗ್ಯ ಲಾಭಗಳು

    ಪಾರಂಪರಿಕ ಭಾರತೀಯ ಆಹಾರ ಪದ್ಧತಿಗಳಲ್ಲಿ ವೀಳ್ಯದೆಲೆಯ ಆರೋಗ್ಯ ಲಾಭಗಳು

    ಬೆಂಗಳೂರು;ನಮ್ಮ ಸಾಂಪ್ರದಾಯಿಕ ಜೀವನ ವಿಧಾನದಲ್ಲಿ ವೀಳ್ಯದೆಲೆಗೆ ಬಹಳ ಮಹತ್ವವಿದೆ. ಊಟದ ನಂತರ ವೀಳ್ಯದೆಲೆ ತಿನ್ನುವುದರಿಂದ ವಿಶೇಷ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.ಅಲ್ಲದೆ ಹಬ್ಬ-ಹರಿದಿನಗಳು, ಸಮಾರಂಭಗಳಲ್ಲಿ ದೇವರಿಗೆ, ಕುಟುಂಬದ ಹಿರಿಯರಿಗೆ ವೀಳ್ಯದೆಲೆ ಅರ್ಪಿಸಲಾಗುತ್ತದೆ. ವೀಳ್ಯದೆಲೆೆ ಭಾರತದ ಧಾರ್ಮಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ವೀಳ್ಯದೆಲೆಯು ವಿಟಮಿನ್ ಸಿ , ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಭೋಜನದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತದೆ.ವೀಳ್ಯದ ಎಲೆಗಳು ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ಮತ್ತು ಬೇಡದ ತ್ಯಾಜ್ಯಗಳನ್ನು ತೆಗೆದುಹಾಕುವಲ್ಲಿ ಕೆಲಸ ಮಾಡುತ್ತದೆ.

    Advertisement

    ವೀಳ್ಯದ ಎಲೆ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ

    ಶೀತಕ್ಕೆ ಮದ್ದು

    ವೀಳ್ಯದೆಲೆಗಳ ಬಳಕೆ ಶೀತದಿಂದ ಪರಿಹಾರ ನೀಡುತ್ತದೆ. ಇದಕ್ಕಾಗಿ, ಕಾಂಡವನ್ನು ವೀಳ್ಯದೆಲೆಗಳಿಂದ ಬೇರ್ಪಡಿಸಿ. ನಂತರ ಈ ಕಾಂಡಗಳನ್ನು ಕಲ್ಲಿನ ಮೇಲೆ ಪುಡಿಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ. ಇದು ಶೀತ ಮತ್ತು ಶೀತದೊಂದಿಗೆ ಕಫದಿಂದ ಪರಿಹಾರ ನೀಡುತ್ತದೆ.

    ಗ್ಯಾಸ್ಟ್ರಿಕ್ ನೋವು ಕಡಿಮೆ ಆಗುತ್ತೆ

    ವೀಳ್ಯದೆಲೆಗಳಲ್ಲಿ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿವೆ ಹೀಗಾಗಿ ಇದು ಅದ್ಭುತವಾದ ನಂಜುನಿರೋಧಕ ಗುಣಗಳನ್ನು ಹೊಂದಿವೆ. ವಿಶೇಷವಾಗಿ ಚಾವಿಕೋಲ್ ಸೂಕ್ಷ್ಮಾಣುಗಳಿಂದ ಡ್ಯುಯಲ್ ರಕ್ಷಣೆ ನೀಡುತ್ತದೆ.ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬರ ಕೂಡ ಕಂಡುಬರುತ್ತದೆ. ಹೀಗಾಗಿ ಫ್ರೀ ರಾಡಿಕಲ್ ಅಂಶ ಗಳ ವಿರುದ್ಧ ಹೋರಾಡುವ ಶಕ್ತಿ ವೀಳ್ಯದ ಎಲೆಗೆ ಇದೆ. ಇದು ಹೊಟ್ಟೆಯ ಪಿಹೆಚ್ ಮಟ್ಟವನ್ನು ಸರಿಪಡಿಸಿ ಗ್ಯಾಸ್ಟ್ರಿಕ್ ನೋವನ್ನು ಇಲ್ಲವಾಗಿಸುತ್ತದೆ.

    ​ಮಲಬದ್ದತೆಯ ತೊಂದರೆಯನ್ನು ನಿವಾರಿಸುತ್ತದೆ

    ಊಟದ ಬಳಿಕ ಒಂದೆರದು ವೀಳ್ಯದ ಎಲೆಗಳನ್ನು ಹಸಿಯಾಗಿ ಜಗಿದು ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುತ್ತಾ ರಸವನ್ನು ನುಂಗಿ. ಇದರಲ್ಲಿ ಕರಗದ ನಾರಿನಂಶ ಬಹಳ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಜೀರ್ಣಾಂಗಗಳಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ ಹಾಗೂ ವಿಸರ್ಜನಾ ಕಾರ್ಯವೂ ಸುಗಮವಾಗಿ ಜರುಗುತ್ತದೆ.

    ಬ್ಲಡ್ ಶುಗರ್ ನಿರ್ವಹಣೆ

    ವೀಳ್ಯದೆಲೆಯನು ಜಗಿದು ತಿನ್ನುವುದರಿಂದ ಇದು ಡಯಾಬಿಟಿಕ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ನೋಡಿಕೊಳ್ಳುತ್ತವೆ. ಹಾಗಾಗಿ ಊಟ ಮಾಡಿದ ತಕ್ಷಣ ಎಲೆ ಅಡಿಕೆ ಹಾಕುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾ ಗುತ್ತದೆ.

    ತಲೆನೋವು ನಿವಾರಿಸಿ

    ತಲೆನೋವು ಸತತವಾಗಿ ಎದುರಾಗುತ್ತಿರುವ ವ್ಯಕ್ತಿಗಳಿಗೆ ಈ ಎಲೆಗಳು ಉತ್ತಮ ಔಷಧಿಯಾಗಿವೆ.ತಲೆನೋವು ನಿವಾರಿಸಲು ವೀಳ್ಯದ ಎಲೆಗಳನ್ನು ಸಹ ಬಳಸಲಾಗುತ್ತದೆ. ನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ.

    ಬಾಯಿ ಸ್ವಚ್ಛ ಮಾಡುತ್ತದೆ

    ವೀಳ್ಯದೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿವೆ. ಇವು ಬಾಯಿಯ ಸೋಂಕನ್ನು ತಡೆಯುತ್ತವೆ. ಬಾಯಿಯನ್ನು ಸ್ವಚ್ಛವಾಗಿರಿಸುತ್ತವೆ.. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ.ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುವ ಮೂಲಕ ಒಸಡುಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ

    ಗಾಯಕ್ಕೆ ಮದ್ದು

    ಗಾಯಗಳನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಸಹ ಬಳಸಬಹುದು. ಗಾಯದ ಸಂದರ್ಭದಲ್ಲಿ, ಗಾಯದ ಮೇಲೆ ವೀಳ್ಯದ ಎಲೆಗಳನ್ನು ಹಾಕಿ ಮತ್ತು ಬಟ್ಟೆಯ ಸಹಾಯದಿಂದ ಅದನ್ನು ಲಘುವಾಗಿ ಕಟ್ಟಿಕೊಳ್ಳಿ. ಗಾಯವನ್ನು ತ್ವರಿತವಾಗಿ ಗುಣಪಡಿಸಲು ಇದು ಸಹಾಯ ಮಾಡುತ್ತದೆ.

    ವೀಳ್ಯದೆಲೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಸಾಂಪ್ರದಾಯಿಕ ಭಾರತೀಯ ಆಚರಣೆಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading