ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 48ನೇ ಪಂದ್ಯ ನಡೆಯುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆರಿಸಿಕೊಂಡು ಎದುರಾಳಿ ಕೊಲ್ಕತ್ತಾ ನೈಟ್ ರೈಸರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 205 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ರಹ್ಮನುಲ್ಲಾ ಗುರ್ಜಝ್ 26, ಸುನಿಲ್ ನರೈನ್ 27, ಅಜಿಂಕ್ಯಾ ರಹಾನೆ 26, ಅಂಗ್ಕ್ರಿಶ್ ರಘುವಂಶಿ 44, ವೆಂಕಟೇಶ್ ಐಯ್ಯರ್ 7, ರಿಂಕು ಸಿಂಗ್ 36, ರಾವ್‌ಮನ್ ಪೊವೆಲ್ 5, ಅನುಕುಲ್ ರಾಯ್ ಡಕ್‌ಔಟ್, ಆಂಡ್ರೆ ರಸೆಲ್ 17, ವರುಣ್ ಚಕ್ರವರ್ತಿ ಅಜೇಯ 1 ರನ್ ಹಾಗೂ ಯಾವುದೇ ರನ್ ಗಳಿಸದ ಹರ್ಷಿತ್ ರಾಣಾ ಅಜೇಯರಾಗಿ ಉಳಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ 3, ವಿಪ್ರಾಜ್ ನಿಗಮ್ ಹಾಗೂ ನಾಯಕ ಅಕ್ಸರ್ ಪಟೇಲ್ ತಲಾ ಎರಡು ಹಾಗೂ ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


