Monday, November 2, 2026
spot_img
More
    spot_img
    HomeSportsCricketIPL 2025 ಕ್ವಾಲಿಫಯರ್‌ 1: ಪವರ್‌ಪ್ಲೇನಲ್ಲೇ ಪಂಜಾಬ್‌ನ 4 ವಿಕೆಟ್‌ ಉರುಳಿಸಿದ ಆರ್‌ಸಿಬಿ

    IPL 2025 ಕ್ವಾಲಿಫಯರ್‌ 1: ಪವರ್‌ಪ್ಲೇನಲ್ಲೇ ಪಂಜಾಬ್‌ನ 4 ವಿಕೆಟ್‌ ಉರುಳಿಸಿದ ಆರ್‌ಸಿಬಿ

    ಚಂಡೀಗಢ: ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಕ್ರೀಡಾಂಗಣದಲ್ಲಿ ಇಂದು ( ಮೇ 29 ) 18ನೇ ಐಪಿಎಲ್‌ ಆವೃತ್ತಿಯ ಒಂದನೇ ಕ್ವಾಲಿಫಯರ್‌ ಪಂದ್ಯ ನಡೆಯುತ್ತಿದ್ದು, ಲೀಗ್‌ ಹಂತದಲ್ಲಿ ಅಂಕಪಟ್ಟಿಯಲ್ಲಿ ಟಾಪ್‌ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದ ಪಂಜಾಬ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗಿವೆ.

    ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್‌ ಆರಿಸಿಕೊಂಡು ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

    ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿರುವ ಪಂಜಾಬ್‌ ಕಿಂಗ್ಸ್‌ 6 ಓವರ್‌ಗಳಲ್ಲಿ 48 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದೆ. ತಂಡದ ಆರಂಭಿಕರಾದ ಪ್ರಿಯನ್ಶ್‌ ಆರ್ಯ 7 ರನ್‌ ಕಲೆಹಾಕಿ ಯಶ್‌ ದಯಾಳ್‌ ಎಸೆತದಲ್ಲಿ ಕೃನಾಲ್‌ ಪಾಂಡ್ಯಗೆ ಕ್ಯಾಚ್‌ ನೀಡಿದರು. ಬಳಿಕ ಭುವನೇಶ್ವರ್‌ ಎಸೆತದಲ್ಲಿ 18 ರನ್‌ ಗಳಿಸಿದ್ದಾಗ ಪ್ರಭ್‌ಸಿಮ್ರನ್‌ ಸಿಂಗ್‌ ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿದರು. ನಂತರ ನಾಯಕ ಶ್ರೇಯಸ್‌ ಐಯ್ಯರ್‌ 2 ರನ್‌ಗೆ ಹೇಜಲ್‌ವುಡ್‌ ಎಸೆತದಲ್ಲಿ ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿದರು. ಜೋಶ್‌ ಇಂಗ್ಲಿಸ್‌ 4 ರನ್‌ಗೆ ಹೇಜಲ್‌ವುಡ್‌ ಎಸೆತದಲ್ಲಿ ಭುವನೇಶ್ವರ್‌ಗೆ ಕ್ಯಾಚ್‌ ನೀಡಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search