ಪಂಜಾಬ್: ಪಂಜಾಬ್‌ನ ಫಿರೋಜ್‌ಪುರದ ಗುರು ಹರ್ ಸಹಾಯಿ ಪ್ರದೇಶದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ದಾರುಣ ಘಟನೆಯೊಂದು ಸಂಭವಿಸಿದ್ದು, ಬ್ಯಾಟ್ಸ್‌ಮನ್ ಸಿಕ್ಸರ್ ಹೊಡೆದ ಬೆನ್ನಲ್ಲೇ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಎವಿ ಶಾಲೆಯ ಮೈದಾನದಲ್ಲಿ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕ್ರಿಕೆಟರ್ ಹರ್ಜಿತ್ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಸಿಕ್ಸರ್ ಹೊಡೆದ ನಂತರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಇದಕ್ಕೆ ಸಹಾಯಕ್ಕೆ ಬಂದ ಸಹಚರ ಆಟಗಾರರು ಸಿಪಿಆರ್ ನೀಡಲು ಪ್ರಯತ್ನಿಸಿದರೂ ಸಹ ಉಪಯೋಗವಾಗಲಿಲ್ಲ.
ಹರ್ಜಿತ್ ಸಿಂಗ್ ಸಿಕ್ಸರ್ ಬಾರಿಸುತ್ತಿದ್ದಂತೆ ತುಸು ದೂರ ನಡೆದು ಸಹ ಆಟಗಾರ ಬರುತ್ತಿದ್ದಂತೆ ಬ್ಯಾಟ್ ಆಸರೆ ಪಡೆದು ತಲೆ ಬಾಗಿಸಿ ಕುಳಿತಿದ್ದಾರೆ. ಸುಸ್ತಿನಿಂದ ಕುಳಿತಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಹರ್ಜಿತ್ ಸಿಂಗ್ ನೆಲಕ್ಕ ಉರುಳಿದ್ದಾರೆ.
ಸಾಲು ಸಾಲು ಯುವ ಹಾಗೂ ಮಧ್ಯಮ ವಯಸ್ಕರ ಹೃದಯಾಘಾತ ಪ್ರಕರಣಗಳಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ. ಕ್ರೀಡಾಪಟುಗಳೇ ಹೀಗೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ಸದ್ಯ ಸಾಮಾನ್ಯ ಜನರಲ್ಲಿ ಈ ಪ್ರಕರಣಗಳು ಆತಂಕವನ್ನುಂಟುಮಾಡಿವೆ.
ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ; ಶ್ರೀರಾಮುಲು ಹೊಸ ಬಾಂಬ್!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


