ಬೆಂಗಳೂರು: ನಗರದಲ್ಲಿ ಜುಲೈ 30, ಬುಧವಾರದಂದು ವಿದ್ಯುತ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ನಗರದ ವಿವಿಧ ಬಡಾವಣೆಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಕಟ್ ಆಗಲಿದೆ.ಬೆಸ್ಕಾಂನ ಪ್ರಕಾರ, 220/66/11 ಕೆವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯಲ್ಲಿ ಪಿಟಿಸಿಎಲ್ (PTCL) ವತಿಯಿಂದ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದ್ದು, ಇದರಿಂದಾಗಿ ಬೆಳಗ್ಗೆ 11:00 ರಿಂದ ಮಧ್ಯಾಹ್ನ 5:00ರವರೆಗೆ ವಿದ್ಯುತ್ ಪೂರೈಕೆ ಅಡಚಣೆಯಾಗಲಿದೆ.ಆರ್‌ಟಿ ನಗರ, ಹೆಬ್ಬಾಳ ಸೇರಿ ಸುಮಾರು 80ಕ್ಕೂ ಹೆಚ್ಚು ಬಡಾವಣೆಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ. ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.ಕೆಪಿಟಿಸಿಎಲ್‌ನಿಂದ ತುರ್ತು ನಿರ್ವಹಣೆಯ ತುರ್ತು ಕಾಮಗಾರಿಯ ಕಾರಣಕ್ಕೆ ವಿದ್ಯುತ್ ವ್ಯತ್ಯಾಸವಾಗುತ್ತಿದೆ ಎಂದು ಹೇಳಲಾಗಿದೆ. ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎನ್ನುವ ಮಾಹಿತಿ ನೋಡೋಣ.
ವಿದ್ಯುತ್ ಕಡಿತವಾಗುವ ಪ್ರದೇಶಗಳು:
ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾರ್ಟರ್ಸ್, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟರ್ಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್‌ಟಿ ನಗರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಇನ್ನೂ ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವತ್ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಫುಡ್‌ವರ್ಲ್ಡ್ ಆರ್‌ಟಿ ನಗರ, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್. ಸಿಬಿಐ ಮುಖ್ಯರಸ್ತೆ, ಎಂಎಲ್‌ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌ಟಿ ನಗರ ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80 ಅಡಿ ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವೆಂಪು ಲೇಔಟ್, ನೇತಾಜಿ ನಗರ ನಲ್ಲಿ ಸಹ ಕರೆಂಟ್ ಇರುವುದಿಲ್ಲ.

ವಿನಾಯಕ ಲೇಔಟ್ 1ನೇ ಹಂತ, ಮುನಿಸ್ವಾಮಿ ಗೌಡ ಅಪಾರ್ಟ್‌ಮೆಂಟ್, ಸ್ಟಾರ್ಲಿಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಆಲ್ಪೈನ್ ಅಪಾರ್ಟ್‌ಮೆಂಟ್, ಜೈನ್ ಅಪಾರ್ಟ್‌ಮೆಂಟ್, ಸಿ 4 ಉಪವಿಭಾಗ ಕಚೇರಿ ಗಿಡ್ಡಪ್ಪ ಬ್ಲಾಕ್ ನಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ವಿನಾಯಕ ಲೇಔಟ್, ಆನಂದಗಿರಿ, ಎಸ್‌ಎಸ್‌ಎ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ನೆಬ್ಬಾಳ ಎಸ್‌ಎಸ್ ಬ್ಲಾಕ್, ನೆಬ್ಬಾಳ ಎಸ್‌ಎಸ್ ಬ್ಲಾಕ್ ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ. ಕೆಇಬಿ ಲೇಔಟ್, ಸಂಜಯನಗರ, ಎಇಸಿಎಸ್ ಲೇಔಟ್, , ಹೊಯ್ಸಳ ಅಪಾರ್ಟ್‌ಮೆಂಟ್, ಗೆದ್ದಲಹಳ್ಳಿ, ಅಶ್ವಥ್ ನಾಗರಸನ್ ಜಯನಗರ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, 60 ಅಡಿ ರಸ್ತೆ, ಕಲ್ಪನಾ ಚಾವ್ಲಾ ರಸ್ತೆ, ಮೊಹಮ್ಮದ್ ಲೇಔಟ್, ವಿಎಸ್‌ಎನ್‌ಎಲ್ ವೈಟ್ ಹೌಸ್, ದಿನ್ನೂರ್ ರಸ್ತೆಯ ಭಾಗಗಳು ಆರ್‌ಟಿ ನಗರ ದಲ್ಲಿ ವಿದ್ಯುತ್ ಇರುವುದಿಲ್ಲ.
ಹಳ್ಳಿ, ಚೋಳನಗರ, ಎಂ.ಎಸ್.ಎಚ್ ಲೇಔಟ್, ಶ್ರೀಮತಿ ಲೇಔಟ್, ಅಮರಜ್ಯೋತಿ ಲೇಔಟ್, ಗುಂಡಪರೆಡ್ಡಿ ಲೇಔಟ್, ಚಿದಾನಂದರೆಡ್ಡಿ ಲೇಔಟ್ ಜಿ.ಓ ಸಾಯಿ ಸ್ಲಮ್, ಕೆಂಪಣ್ಣ ಲೇಔಟ್, ನೇತಾಜಿ ನಗರ, ಚಿನ್ನಮ್ಮ ಲೇಔಟ್, ಸೀತಪ್ಪ ಲೇಔಟ್, ಸಿಐಎಲ್ ಲೇಔಟ್, ಸನ್ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್, ಅಕ್ಕಯ್ಯಮ್ಮ ಲೇಔಟ್, ಗುಡ್ಡದಹಳ್ಳಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇಂದು ಅಂತರರಾಷ್ಟ್ರೀಯ ಹುಲಿ ದಿನ: ಈ ದಿನವನ್ನು ಏಕೆ ಆಚರಿಸುತ್ತಾರೆ? ಇದರ ಇತಿಹಾಸ ಮತ್ತು ಮಹತ್ವವೇನು?
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


