ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಕ್ಯಾಲೆಂಡರ್ ಪ್ರಕಾರ, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಹಬ್ಬಗಳು ಮತ್ತು ಸಾಪ್ತಾಹಿಕ ರಜೆಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ರಜೆಗಳಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳು ಸೇರಿವೆ. ಹಬ್ಬಗಳಾದ ಈದ್ ಮಿಲಾದ್, ಓಣಂ, ದುರ್ಗಾ ಪೂಜೆ ಮತ್ತು ಮಹಾ ಅಷ್ಟಮಿಗಳಿಗಾಗಿ ಕೆಲವು ರಾಜ್ಯಗಳಲ್ಲಿ ರಜೆ ಇರುತ್ತದೆ. ಕರ್ನಾಟಕದಲ್ಲಿ, ಸಾಪ್ತಾಹಿಕ ರಜೆಗಳ ಜೊತೆಗೆ ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಹಬ್ಬಕ್ಕಾಗಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಇಂದಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದರೂ, ಕೆಲವು ಅಗತ್ಯ ಕೆಲಸಗಳಾದ ಡಿಮ್ಯಾಂಡ್ ಡ್ರಾಫ್ಟ್, ನಗದು ಠೇವಣಿ, ಆರ್‌ಟಿಜಿಎಸ್ ಮತ್ತು ಅರ್ಜಿ ಸಲ್ಲಿಕೆಯಂತಹ ಕಾರ್ಯಗಳಿಗೆ ಬ್ಯಾಂಕಿಗೆ ನೇರವಾಗಿ ಭೇಟಿ ನೀಡುವುದು ಅನಿವಾರ್ಯವಾಗಿದೆ. ಈ ಕಾರಣದಿಂದ, ಬ್ಯಾಂಕ್‌ಗೆ ಹೋಗಲು ಯೋಜಿಸುತ್ತಿರುವವರು ಸೆಪ್ಟೆಂಬರ್ ತಿಂಗಳ ರಜೆಗಳ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ. ಬ್ಯಾಂಕ್ ಕಚೇರಿಗಳು ಮುಚ್ಚಿದ್ದರೂ, ಆನ್‌ಲೈನ್ ವಹಿವಾಟುಗಳು, ಎಟಿಎಂ ಸೇವೆಗಳು, ನೆಟ್‌ಬ್ಯಾಂಕಿಂಗ್ ಮತ್ತು ಫೋನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
2025ರ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳು
ಸೆ. 3, ಬುಧವಾರ: ಕರ್ಮಪೂಜೆ (ಜಾರ್ಖಂಡ್ನಲ್ಲಿ ರಜೆ)
ಸೆ. 4, ಗುರುವಾರ: ಓಣಂ ಹಬ್ಬ (ಕೇರಳದಲ್ಲಿ ರಜೆ)
ಸೆ. 5, ಶುಕ್ರವಾರ: ಈದ್ ಮಿಲಾದ್, ತಿರು ಓಣಂ (ಕರ್ನಾಟಕ, ತಮಿಳುನಾಡು ಸೇರಿ ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಸೆ. 6, ಶನಿವಾರ: ಈದ್ ಮಿಲಾದ್, ಇಂದ್ರಜಾತ್ರ (ಸಿಕ್ಕಿಂ, ಛತ್ತೀಸ್ಗಡ)
ಸೆ. 7: ಭಾನುವಾರದ ರಜೆ
ಸೆ. 12, ಶುಕ್ರವಾರ: ಈದ್ ಮಿಲಾದುಲ್ ನಬಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
ಸೆ. 13: ಎರಡನೇ ಶನಿವಾರದ ರಜೆ
ಸೆ. 14: ಭಾನುವಾರದ ರಜೆ
ಸೆ. 21: ಭಾನುವಾರದ ರಜೆ
ಸೆ. 22, ಸೋಮವಾರ: ನವರಾತ್ರ ಸ್ಥಾಪನಾ (ರಾಜಸ್ಥಾನದಲ್ಲಿ ರಜೆ)
ಸೆ. 23, ಮಂಗಳವಾರ: ಮಹಾರಾಜ ಹರಿಸಿಂಗ್ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
ಸೆ. 27: ನಾಲ್ಕನೇ ಶನಿವಾರದ ರಜೆ
ಸೆ. 28: ಭಾನುವಾರದ ರಜೆ
ಸೆ. 29, ಸೋಮವಾರ: ದುರ್ಗಾ ಪೂಜೆ, ಮಹಾಸಪ್ತಮಿ (ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
ಸೆ. 30, ಮಂಗಳವಾರ: ಮಹಾ ಅಷ್ಟಮಿ, ದುರ್ಗಾಷ್ಟಮಿ, ದುರ್ಗಾ ಪೂಜೆ (ತ್ರಿಪುರಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
ಸೆಪ್ಟೆಂಬರ್‌ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
ಸೆ. 5, ಶುಕ್ರವಾರ: ಈದ್ ಮಿಲಾದ್
ಸೆ. 7: ಭಾನುವಾರದ ರಜೆ
ಸೆ. 13: ಎರಡನೇ ಶನಿವಾರದ ರಜೆ
ಸೆ. 14: ಭಾನುವಾರದ ರಜೆ
ಸೆ. 21: ಭಾನುವಾರದ ರಜೆ
ಸೆ. 27: ನಾಲ್ಕನೇ ಶನಿವಾರದ ರಜೆ
ಸೆ. 28: ಭಾನುವಾರದ ರಜೆ
ಕುಸಿಯುತ್ತಿದೆ ಪ್ರಧಾನಿ ಮೋದಿಯ ಜನಪ್ರಿಯತೆ;ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ವರದಿ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


