ಹೊಸಬರಿರಲಿ ಅಥವಾ ಅನುಭವ ಹೊಂದಿದ ಉದ್ಯೋಗಿ, ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಕಂಪನಿ ಕೇಳುವ ಒಂದು ಒಂದು ಸಾಮಾನ್ಯ ಪ್ರಶ್ನೆ, ನಿಮಗೆ ಸಂಬಳ ಎಷ್ಟು ಬೇಕು? ಪ್ರತಿ ಬಾರಿ ಕೆಲಸಕ್ಕೆ ಸೇರುವಾಗ ಸಂದರ್ಶನದಲ್ಲಿ ಈ ಪ್ರಶ್ನೆಯನ್ನು ಕೇಳುತ್ತಾರೆ.
ಅನೇಕರಿಗೆ ಸಂಬಳವನ್ನು ಯಾವ ರೀತಿ ಡಿಮ್ಯಾಂಡ್ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬಿಲ್ ಗೇಟ್ಸ್, ಉದ್ಯೋಗಿಗಳಿಗೆ ಈ ವಿಷಯದ ಕುರಿತು ಸಲಹೆ ನೀಡಿದ್ದಾರೆ. ಜಾಬ್ ಇಂಟರ್ವ್ಯೂಗೆ ಹೋದಾಗ ಸ್ಯಾಲರಿ ಬಗ್ಗೆ ಹೇಗೆ ಮಾತನಾಡಬೇಕು ಎಂಬುದಕ್ಕೆ ಮೂರು ವಾಕ್ಯದ ಉತ್ತರ ನೀಡಿದ್ದಾರೆ.
ನೀವು ಹೊಸ ಅಥವಾ ಬೇರೆ ಕೆಲಸ ಹುಡುಕುತ್ತಿದ್ದರೆ ಆಗ ಸಂದರ್ಶನದ ವೇಳೆ ಸಂಬಳ ಎಷ್ಟು ಅಂತ ಕೇಳಿದರೆ ನೀವು ಎಂದೂ ಸಂಖ್ಯೆಯಲ್ಲಿ ಉತ್ತರ ಹೇಳಬೇಡಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ನೀವು ಯಾವುದೇ ಸಂಖ್ಯೆ ಅಥವಾ ಇಷ್ಟು ಪರ್ಸೆಂಟೇಜ್ ಹೈಕ್ ಬೇಕು ಎನ್ನುವ ಬದಲು ವಿವರವಾಗಿ ಉತ್ತರ ನೀಡಲು ಪ್ರಯತ್ನಿಸಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ನಿಮ್ಮ ಸಂಬಳದ ಉತ್ತರ, ನೀವು ಕಂಪನಿ ಜೊತೆ ದೀರ್ಘ ಸಂಬಂಧ ಬಯಸ್ತೀರಿ ಎಂಬುದನ್ನು ಸೂಚಿಸಬೇಕು, ನಿಮಗೆ ಕಂಪನಿ ಮೇಲೆ ಹೆಚ್ಚಿನ ಆಸಕ್ತಿ ಇದೆ ಎನ್ನುವ ರೀತಿಯ ಉತ್ತರವನ್ನು ನೀವು ನೀಡಬೇಕು ಎನ್ನುತ್ತಾರೆ ಬಿಲ್ ಗೇಟ್ಸ್.
ಬಿಲ್ ಗೇಟ್ಸ್, ಸಂಬಳಕ್ಕಿಂತ ಸ್ಟಾಕ್ ಗೆ ಹೆಚ್ಚು ಒತ್ತು ನೀಡಿದ್ದಾರೆ. ಉನ್ನತ ಹುದ್ದೆಯಲ್ಲಿ ಕೆಲ್ಸ ಮಾಡುವ ಅನೇಕರು ಕಂಪನಿಯಿಂದ ಬರೀ ಸಂಬಳ ತೆಗೆದುಕೊಳ್ಳೋದಿಲ್ಲ. ಕಂಪನಿ ಷೇರುಗಳಲ್ಲಿ ಪಾಲು ಪಡೆದಿರುತ್ತಾರೆ. ಇಂಟರ್ವ್ಯೂ ಸಮಯದಲ್ಲಿ ಕಂಪನಿ ಮುಖ್ಯಸ್ಥರು ಸಂಬಳ ಎಷ್ಟು ಬೇಕು ಅಂತ ನಿಮ್ಮನ್ನು ಪ್ರಶ್ನೆ ಮಾಡಿದಾಗ, ಪ್ಯಾಕೇಜ್ ಉತ್ತಮವಾಗಿರುತ್ತೆ ಅಂತ ನಾನು ಭಾವಿಸ್ತೇನೆ, ಕಂಪನಿಯ ಭವಿಷ್ಯ ತುಂಬಾ ಚೆನ್ನಾಗಿದೆ ಅಂತ ನನಗನ್ನಿಸುತ್ತೆ, ಹಾಗಾಗಿ ಕ್ಯಾಶ್ ಸ್ಯಾಲರಿಗಿಂತ ಸ್ಟಾಕ್ ಆಯ್ಕೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಆದ್ಯತೆ ನೀಡುತ್ತೇನೆ. ಅನೇಕ ಕಂಪನಿಗಳು ಉತ್ತಮ ಆಫರ್ ನೀಡಿವೆ, ಆದ್ರೆ ನೀವು ನನ್ನ ಜೊತೆ ನ್ಯಾಯಯುತವಾಗಿ ವರ್ತಿಸುತ್ತೀರಿ ಮತ್ತು ಸ್ಟಾಕ್ ಆಯ್ಕೆಗಳನ್ನು ನೀಡ್ತೀರಿ ಅಂತ ನಾನು ಭಾವಿಸ್ತೇನೆ ಎಂಬ ಉತ್ತರ ಇರಬೇಕು. ನೀವು ಇಂಥ ಉತ್ತರ ನೀಡಿದಾಗ, ಕಂಪನಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತೆ. ಎನ್ನುತ್ತಾರೆ ಬಿಲ್ ಗೇಟ್ಸ್.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


