ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು ಕಳೆದಿದ್ದು, ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿಯಲ್ಲಿಂದು ಪುಣ್ಯಸ್ಮರಣೆ ನಡೆಯಿತು.
ಸಾವಿರಾರು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಆಗಮಿಸಿ ಅಪ್ಪುವನ್ನು ನೆನೆದರು. ಈ ವೇಳೆ ನಟ ಶಿವರಾಜ್ಕುಮಾರ್ ಮಾತನಾಡಿ ತಮ್ಮ ಸಹೋದರನನ್ನು ಮತ್ತೊಮ್ಮೆ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ತಾವು ಹಾಗೂ ಅಪ್ಪು ಒಟ್ಟಾಗಿ ನಟಿಸಬೇಕಿದ್ದ ಚಿತ್ರದ ಬಗ್ಗೆ ಮಾಹಿತಿಯನ್ನೂ ಸಹ ಬಿಟ್ಟುಕೊಟ್ಟರು. ಪತ್ರಕರ್ತರು ನೀವು ಹಾಗೂ ನಿಮ್ಮ ಸೋದರ ಪುನೀತ್ ರಾಜ್ಕುಮಾರ್ ಒಟ್ಟಿಗೆ ಚಿತ್ರವೊಂದರಲ್ಲಿ ನಟಿಸಬೇಕೆಂಬ ಅಭಿಮಾನಿಗಳ ಆಸೆ ಹಾಗೆಯೇ ಉಳಿದುಕೊಂಡುಬಿಟ್ಟಿದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ ಇಬ್ಬರೂ ಒಟ್ಟಿಗೆ ನಟಿಸಬೇಕಿದ್ದ ಚಿತ್ರದ ಬಗ್ಗೆ ಮಾತುಕತೆ ನಡೆದಿತ್ತು, ಆದರೆ ವಿಧಿ ಅದು ನೆರವೇರಲೇ ಇಲ್ಲ ಎಂದರು.
ಇನ್ನು ಮುಂದಿನ ದಿನಗಳಲ್ಲಿ ಈಗಿನ ಎಐ ತಂತ್ರಜ್ಞಾನ ಬಳಸಿ ಚಿತ್ರ ಮಾಡಬಹುದಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಶಿವಣ್ಣ ಅದನ್ನೂ ಮಾಡಬಹುದು, ಆದರೆ ಅದು ನೈಜತೆಯಿಂದ ಕೂಡಿದ್ದರೆ ಮಾತ್ರ ಸಾಧ್ಯ ಎಂದರು. ಇನ್ನು ಅಪ್ಪಾಜಿ ಹೇಳಿದಂತೆ ಅಭಿಮಾನಿಗಳು ನಿಜಕ್ಕೂ ದೇವರು ಎಂದ ಶಿವಣ್ಣ ರಾಜ್ಕುಮಾರ್ ಅವರನ್ನೂ ಸಹ ಈ ಸಮಯದಲ್ಲಿ ನೆನೆದರು.
ಸಿದ್ದರಾಮಯ್ಯ ನಮ್ಮ ನಾಯಕರು 2028ರ ಚುನಾವಣೆಗೂ ಅವರದ್ದೇ ನಾಯಕತ್ವ: ಡಿಕೆ ಸುರೇಶ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


