ಕಳೆದ 10 ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಗೆ (Gold Rate) ಕೊನೆಗೂ ‘ಬ್ರೇಕ್’ ಬಿದ್ದಿದೆ! ನಿರಂತರ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಸೆ ತಂದಿರುವ ಚಿನ್ನದ ಮಾರುಕಟ್ಟೆ, ಇಂದು ಬುಧವಾರ (ಅಕ್ಟೋಬರ್ 29) ಮತ್ತೆ ಏರುಗತಿಯ ಹಾದಿ ಹಿಡಿದಿದೆ.
ನಿನ್ನೆ ಮಂಗಳವಾರ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಕುಸಿದು ₹12,100 ಗಡಿಯೊಳಗೆ ಇಳಿದಿದ್ದ ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆ, ಇಂದು ಭರ್ಜರಿ ಏರಿಕೆ ಕಂಡಿದೆ.
ಪ್ರತಿ ಗ್ರಾಂ ಚಿನ್ನದ ಮೇಲೆ ಸುಮಾರು ₹70 ರಷ್ಟು ಜಿಗಿತವಾಗಿದ್ದು, ಕೊಳ್ಳುಗರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ.ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಹೆಚ್ಚಳಗೊಂಡಿದ್ದು, ಹಬ್ಬದ ಸೀಸನ್‌ಗೆ ಮುನ್ನ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಮನೆ ಮಾಡಿದೆ.
| ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 29, 2025) | ||
|---|---|---|
| ಲೋಹ ಮತ್ತು ಶುದ್ಧತೆ | ಪ್ರಮಾಣ | ಬೆಲೆ (ರೂ.) |
| 24 ಕ್ಯಾರಟ್ ಚಿನ್ನ | 1 ಗ್ರಾಂ | 12,158 ರೂ. |
| 22 ಕ್ಯಾರಟ್ ಚಿನ್ನ | 1 ಗ್ರಾಂ | 11,145 ರೂ. |
| 18 ಕ್ಯಾರಟ್ ಚಿನ್ನ | 1 ಗ್ರಾಂ | 9,119 ರೂ. |
| ಬೆಳ್ಳಿ | 1 ಗ್ರಾಂ | 151 ರೂ. |
| ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 29, 2025) | ||
|---|---|---|
| ಲೋಹ ಮತ್ತು ಶುದ್ಧತೆ | ಪ್ರಮಾಣ | ಇಂದಿನ ಬೆಲೆ (ರೂ.) |
| 24 ಕ್ಯಾರಟ್ ಚಿನ್ನ | 1 ಗ್ರಾಂ | 12,158 ರೂ. |
| 22 ಕ್ಯಾರಟ್ ಚಿನ್ನ | 1 ಗ್ರಾಂ | 11,145 ರೂ. |
| ಬೆಳ್ಳಿ | 1 ಗ್ರಾಂ | 152 ರೂ. |
| ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂಗೆ) | |
|---|---|
| ನಗರ (City) | ಬೆಲೆ (₹) |
| ಬೆಂಗಳೂರು | 11,145 ರೂ |
| ಮುಂಬೈ | 11,145 ರೂ |
| ಕೋಲ್ಕತಾ | 11,145 ರೂ |
| ಕೇರಳ | 11,145 ರೂ |
| ಭುವನೇಶ್ವರ್ | 11,145 |
ಬಂಗಾರ ಪ್ರಿಯರಿಗೆ ಬಂಪರ್ ಆಫರ್: 10 ಗ್ರಾಂ ಚಿನ್ನಕ್ಕೆ 80% ಸಾಲ ಸಿಗುತ್ತೆ! RBI ಹೊಸ ರೂಲ್ಸ್ ಜಾರಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


